ಇತ್ತೀಚಿನ ಸುದ್ದಿ
ರಸ್ತೆ ಇಲ್ಲ: ಅನಾರೋಗ್ಯಪೀಡಿತ ವೃದ್ಧೆಯನ್ನು ಜೋಳಿಗೆಯಲ್ಲಿ ಹೊತ್ತೊಯ್ದ ಸಂಬಂಧಿಕರು!!
19/09/2022, 13:29

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ವೃದ್ಧೆಯನ್ನ ಆಸ್ಪತ್ರೆಗೆ ಕರೆದೊಯ್ಯಲು ಜೋಳಿಗೆಯಲ್ಲಿ ಹೊತ್ತೊಯ್ದ ಸಂಬಂಧಿಕರು ವೃದ್ಧೆಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಂಬಂಧಿಸಿದ ಜೋಳಿಗೆಯಲ್ಲಿ ಹೊತ್ತೊಯ್ದ ಘಟನೆ ಕಳಸ ತಾಲೂಕಿನ ಗಂಟೆಮಕ್ಕಿ ಗ್ರಾಮದಲ್ಲಿ ನಡೆದಿದೆ.
85 ವರ್ಷದ ವೃದ್ಧೆ ವೆಂಕಮ್ಮರನ್ನ ಜೋಳಿಗೆಯಲ್ಲಿ ಕಟ್ಟಿ ಮನೆಯಿಂದ ಜಮೀನಿನ ಕಾಲುದಾರಿಯಲ್ಲಿ ಸಂಬಂಧಿಕರು ಹೊತ್ತೊಯ್ದರು.
ಕಳಸ ತಾಲೂಕಿನ ಗಂಟೆಮಕ್ಕಿ ಗ್ರಾಮದಲ್ಲಿ ಸುತ್ತ ಜಮೀನು ಇದ್ದು, ಮಧ್ಯದಲ್ಲಿರುವ ವೆಂಕಮ್ಮ ಅವರ ಮನೆ ಇದೆ.
2021ರಲ್ಲಿಯೇ ರಸ್ತೆ ಇಲ್ಲ ರಸ್ತೆ ಮಾಡಿಸಿಕೊಡಿ ಎಂದು ಮನವಿ ಮಾಡಿದ್ದರು ವೆಂಕಮ್ಮ ಅವರು. ಸಚಿವ ಆರ್ ಆಶೋಕ್ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು. ಭೂ ಸ್ವಾಧೀನ ಕಾಯ್ದೆಯಡಿಯಲ್ಲಿ ಜಮೀನು ಮಂಜೂರಾಗಿತ್ತು. ಕಾಲು ದಾರಿಯಲ್ಲಿ ಆದಿವಾಸಿ ಕುಟುಂಬಗಳು ಓಡಾಡುತ್ತಿದ್ದವು. ಸ್ಥಳೀಯರು ಸರ್ಕಾರ, ಜಿಲ್ಲಾಡಳಿತ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.