8:46 PM Wednesday3 - December 2025
ಬ್ರೇಕಿಂಗ್ ನ್ಯೂಸ್
ಸಿಎಂ ಸಿದ್ದರಾಮಯ್ಯ – ವೇಣುಗೋಪಾಲ್‌ ಭೇಟಿ ಬೆನ್ನಲ್ಲೇ ದೆಹಲಿಗೆ ಹಾರಿದ ಡಿಸಿಎಂ ಡಿ.ಕೆ.… ಅಧಿಕಾರ ಹಸ್ತಾಂತರ ಚರ್ಚೆ: ಮುಖ್ಯಮಂತ್ರಿ ಸಿದ್ದರಾಮಯ್ಯ -‌ ಕೆ.ಸಿ. ವೇಣುಗೋಪಾಲ್ ಭೇಟಿ; ಮಾತುಕತೆ ಮಂಗಳೂರಿಗೆ ಆಗಮಿಸಿದ ಕೆ.ಸಿ. ವೇಣುಗೋಪಾಲ್: ಡಿಕೆ ಪರ ಘೋಷಣೆ ಕೂಗಿದ ಕೈ ಕಾರ್ಯಕರ್ತರು Kodagu | ವಿರಾಜಪೇಟೆಯ ಕರಡಿಗೋಡುನಲ್ಲಿ ಕಾಡಾನೆಗಳ ಉಪಟಳ: ಬೆಳೆ ನಾಶ ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು…

ಇತ್ತೀಚಿನ ಸುದ್ದಿ

ರಾಸಾಯನಿಕ ಯುಕ್ತ ಸೌಂದರ್ಯ ವರ್ಧಕಗಳಿಂದ ದೂರವಿರಿ : ಡಾ. ರಾಜೇಶ್ ಆಳ್ವ

21/09/2022, 12:47

ಮಂಗಳೂರು(reporterkarnataka.com) : ಇಂದಿನ ಮಹಿಳೆಯರಲ್ಲಿ ಅತಿ ಹೆಚ್ಚು ಅಸ್ವಸ್ಥತೆಗಳಿಗೆ ಮೂಲಕ ಕಾರಣ ಪೋಷಣೆಗಳ ಮಾಹಿತಿ ಕೊರತೆ ಮತ್ತು ರಾಸಾಯನಿಕ ಯುಕ್ತ ಸೌಂದರ್ಯ ವರ್ಧಕಗಳ ಬಳಕೆಯಾಗಿದೆ. ಆದುದರಿಂದ ಸಾಂಪ್ರದಾಯಿಕ ಸೌಂದರ್ಯ ವರ್ಧಕಗಳ ಬಳಕೆ ಮತ್ತು ಶರೀರಕ್ಕೆ ಬೇಕಾದ ಪೋಷಕಾಂಶಗಳ ಬಗ್ಗೆ  ಅರಿತುಕೊಳ್ಳುವಲ್ಲಿ ಮತ್ತು ಮಾಹಿತಿ ನೀಡುವಲ್ಲಿ ಬ್ಯೂಟಿ ಪಾರ್ಲರ್ ಗಳು ಕಾರ್ಯಪ್ರವೃತ್ತರಾಗುವುದು ಉಚಿತ ಎಂದು ಮಾರ್ಕ್ ಆಟ್ ಡೈರೆಕ್ಟ್ ನಿರ್ದೇಶಕ ಡಾ. ರಾಜೇಶ್ ಆಳ್ವ ಅಭಿಪ್ರಾಯಪಟ್ಟರು. 

ಅವರು ಕರ್ನಾಟಕ ಐಕ್ಯ ಪಾರ್ಲರ್ ಅಸೋಸಿಯೇಷನ್ ನೇತೃತ್ವದಲ್ಲಿ ಮತ್ತು ನೆಟ್ಸರ್ಫ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ನಡೆದ ಒಂದು ದಿನದ ಉಚಿತ ಮೇಕಪ್ ನೋಡಿ ಕಲಿ ತರಬೇತಿ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. 

ಕಾರ್ಯಕ್ರಮದ ಉದ್ಘಾಟನೆಯನ್ನು ನೆಟ್ಸರ್ಫ್ ಪುಣೆ ಸಂಸ್ಥೆಯ ತರಬೇತುದಾರರಾದ ಬಾಲಚಂದ್ರ ಕಿರಣ್ ಲಾತ್ಕಾರ್ ನೆರವೇರಿಸಿದರು. ಕರ್ನಾಟಕ ಐಕ್ಯ ಪಾರ್ಲರ್ ಅಸೋಸಿಯೇಷನ್ ಅಧ್ಯಕ್ಷೆ ಪೌಲಿನ್ ಕ್ರಾಸ್ತಾ  ಅವರು ಅಧ್ಯಕ್ಷತೆ ವಹಿಸಿದರು.

ನಂತರ ನಡೆದ ತರಬೇತಿ ಶಿಬಿರದಲ್ಲಿ ಖ್ಯಾತ ಸೆಲೆಬ್ರಿಟಿ ಆರ್ಟಿಸ್ಟ್ ಪಂಕಜ ಬೆಂಗಳೂರು ಮೇಕಪ್ ನೋಡಿ ಕಲಿ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಅದೇ ರೀತಿ ಶಾರದಾ ಜಲ್ಲಿ ಮತ್ತು ನೈಲ್ ಆರ್ಟ್ ಇವುಗಳ ಬಗ್ಗೆ ಪ್ರಾತ್ಯಕ್ಷಿಕೆಯನ್ನು ಗೀತಾ ದಿನೇಶ್, ವನಿತಾ ರಾವ್, ಸೌಮ್ಯ ಶ್ರೀ, ಲೊತಿಸಿಲ ದಂತಿಸ್,  ಮುಂತಾದವರು ನಡೆಸಿಕೊಟ್ಟರು. ನೆಟ್ಸರ್ಫ್ ಸೌತ್ ಇಂಡಿಯಾ ಅಸ್ಮಿತಾ ಕೋ ಆರ್ಡಿನೇಟರ್ ರಮೊಲಅವರು ಮಹಿಳೆಯರ ಆರ್ಥಿಕ ಸ್ವಾವಲಂಬನೆ ಮತ್ತು ಪರಿಹಾರ ಈ ಬಗ್ಗೆ ಮಾಹಿತಿ ನೀಡಿದರು. ಲತಾ ಹರೀಶ್ ಇವರು ಕಾರ್ಯಕ್ರಮ ನಿರ್ವಹಣೆ ಮಾಡಿ, ಪ್ರಮೀಳಾ ಪ್ರಸಾದ್ ಇವರು ಸ್ವಾಗತಿಸಿ. ಮಂಜುಳಾ ನಾಯಕ್ ಧನ್ಯವಾದವಿತ್ತರು.

ಇತ್ತೀಚಿನ ಸುದ್ದಿ

ಜಾಹೀರಾತು