ಇತ್ತೀಚಿನ ಸುದ್ದಿ
10 ವರ್ಷದ ಬಾಲಕಿಯ ರೇಪ್: ಇಬ್ಬರು ಕಾಮುಕರಿಂದ ಕೃತ್ಯ; 1 ವರ್ಷಗಳಿಂದ ನಿರಂತರ ಅತ್ಯಾಚಾರ
13/12/2025, 21:17
ಮುರುಡೇಗೌಡ ಚಳ್ಳಕೆರೆ ಚಿತ್ರದುರ್ಗ
info.reporterkarnataka@gmail.com
ಇಬ್ಬರು ಕಾಮುಕರು 10 ವರ್ಷದ ಬಾಲಕಿಯ ಮೇಲೆ ಬರೋಬ್ಬರಿ ಒಂದು ವರ್ಷದಿಂದ ನಿರಂತರ ಅತ್ಯಾಚಾರ ನಡೆಸಿದ ಪ್ರಕರಣ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದ್ದು, ಪ್ರಕರಣ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ವಡ್ಡನಹಳ್ಳಿ ಗ್ರಾಮದಲ್ಲಿ ಈ ಪೈಶಾಚಿಕ ಕೃತ್ಯ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 4ನೇ ತರಗತಿ ಬಾಲಕಿ ಮೇಲೆ ಪ್ರಭುದೇವ ಮತ್ತು ಗುರು ಮೂರ್ತಿ ಪದೇ ಪದೇ ಅತ್ಯಾಚಾರ ನಡೆಸಿದ್ದು, ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾರೆ. ಬಾಲಕಿ ಶಾಲಾ ಶಿಕ್ಷಕಿ ಬಳಿ ಹೇಳಿಕೊಂಡಿದ್ದು,ಅವರು ಬಾಲಕಿ ಪೋಷಕರಿಗೆ ವಿಷಯ ತಿಳಿಸಿದ್ದಾರೆ. ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆಮ
ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.












