ಇತ್ತೀಚಿನ ಸುದ್ದಿ
ರಂಗತರಂಗ ನಾಟಕ ತಂಡದ ಸ್ಥಾಪಕ, ಹಿರಿಯ ರಂಗ ಕಲಾವಿದ, ಸಮಾಜ ಸೇವಕ ಲೀಲಾಧರ ಶೆಟ್ಟಿ ದಂಪತಿ ಇನ್ನಿಲ್ಲ
13/12/2023, 13:12

ಉಡುಪಿ(reporterkarnataka.com): ರಂಗತರಂಗ ನಾಟಕ ತಂಡದ ಸ್ಥಾಪಕ, ಹಿರಿಯ ರಂಗ ಕಲಾವಿದ, ಸಮಾಜ ಸೇವಕ ಕೆ. ಲೀಲಾಧರ ಶೆಟ್ಟಿ ಹಾಗೂ ಅವರು ಪತ್ನಿ ವಸುಂಧರಾ ಶೆಟ್ಟಿ ಇಹಲೋಕ ತ್ಯಜಿಸಿದ್ದಾರೆ.
ಧಾರ್ಮಿಕ ಮತ್ತು ಸಾಮಾಜಿಕ ಮುಂದಾಳು, ಧರಣಿ ಸಮಾಜ ಸೇವಾ ಸಂಸ್ಥೆಯ ಅಧ್ಯಕ್ಷ ಹಾಗೂ ಕಾಪು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಲೀಲಾಧರ ಶೆಟ್ಟಿ (68) ಅವರು ಮಂಗಳವಾರ ಮಧ್ಯರಾತ್ರಿ ತನ್ನ ಪತ್ನಿ ವಸುಂಧರಾ ಶೆಟ್ಟಿ (58) ಜತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಮನನೊಂದು ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಕಾಪು ಸಮಾಜ ರತ್ನ ಎಂದೇ ಕರೆಯಲ್ಪಡುವ ಲೀಲಾಧರ ಶೆಟ್ಟಿ ಅವರು ಲೀಲಣ್ಣ ಎಂದೇ ಖ್ಯಾತಿ ಪಡೆದಿದ್ದರು.