ಇತ್ತೀಚಿನ ಸುದ್ದಿ
ರಂಗ ಕಲಾವಿದ, ಪುತ್ತೂರು ವಿವೇಕಾನಂದ ಕಾಲೇಜು ವಿದ್ಯಾರ್ಥಿ ಸಂಘ ಮಾಜಿ ಅಧ್ಯಕ್ಷ ಕರಿಂಕ ಸುರೇಶ್ ಶೆಟ್ಟಿ ನಿಧನ
27/01/2024, 14:38
ವಿಟ್ಲ(reporterkarnataka.com): ಅನಂತಾಡಿ ಗ್ರಾಮದ ಕರಿಂಕ ದಿ. ಸಂಕಪ್ಪ ಶೆಟ್ಟಿಯವರ ಪುತ್ರ ಸುರೇಶ್ ಶೆಟ್ಟಿ (56) ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಸ್ವಗೃಹದಲ್ಲಿ ನಿಧನರಾದರು.
ಪುತ್ತೂರಿನ ಶಿಕ್ಷಣ ಕಚೇರಿಯಲ್ಲಿ ಅಧಿಕಾರಿಯಾಗಿದ್ದು, ಬನ್ನೂರಿನಲ್ಲಿ ವಾಸ್ತವ್ಯವಿದ್ದ ಇವರು ಕಳೆದ ಕೆಲ ಸಮಯಗಳ ಹಿಂದೆ ಅಸೌಖ್ಯದಿಂದಾಗಿ ಚಿಕಿತ್ಸೆಯಲ್ಲಿದ್ದರು. ಸುರೇಶ್ ಶೆಟ್ಟಿಯವರು ಕಲಾವಿದರಾಗಿದ್ದು ಯಕ್ಷಗಾನ, ನಾಟಕ, ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು ಸಹೋದರರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.