4:36 PM Wednesday17 - December 2025
ಬ್ರೇಕಿಂಗ್ ನ್ಯೂಸ್
ನಕಲಿ‌ ದಾಖಲೆ ಸೃಷ್ಟಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಯತ್ನ: ಆರೋಪಿ… ಇಂಜಿನಿಯರಿಂಗ್ ಸೀಟುಗಳನ್ನು ನುಂಗುತ್ತಿರುವ ಖಾಸಗಿ ವಿಶ್ವವಿದ್ಯಾಲಯಗಳು: ಸದನದ ಗಮನ ಸೆಳೆದ ಶಾಸಕ ಡಾ.… Kodagu | ಭಾಗಮಂಡಲ ಮೀಸಲು ಅರಣ್ಯದಲ್ಲಿ ಅಕ್ರಮ ಜಿಂಕೆ ಬೇಟೆ: ಆರೋಪಿಗಳು ಅರಣ್ಯ… 1600 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂಸತ್ ಅಧಿವೇಶನ | ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ… Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ…

ಇತ್ತೀಚಿನ ಸುದ್ದಿ

ರಮಾನಾಥ ರೈಗೆ ಮತ್ತೊಮ್ಮೆ ದ.ಕ. ಕಾಂಗ್ರೆಸ್ ಸಾರಥ್ಯ?: ಕೋಮುವಾದ ವಿರುದ್ಧ ಗಟ್ಟಿ ನಿಲುವು ಹೊಂದಿರುವುದೇ ಹೈಕಮಾಂಡ್ ಒಲವಿಗೆ ಕಾರಣ?

22/06/2023, 09:28

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com
ರಾಜ್ಯದಲ್ಲಿ ಸರಕಾರ ಬದಲಾದ ಬಳಿಕ ದ.ಕ‌. ಜಿಲ್ಲೆಯಲ್ಲೂ ರಾಜಕೀಯ ಚಿತ್ರಣ ಬದಲಾಗಲಾರಂಭಿಸಿದೆ. ಜಿಲ್ಲಾ ಕಾಂಗ್ರೆಸ್ ನಲ್ಲಿ ಸ್ವಲ್ಪ ಮಟ್ಟಿಗೆ ಚಟುವಟಿಕೆ ಗರಿಗೆದರಿದೆ. ಈ ನಡುವೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಯ ಮಾತು ಕೇಳಲಾರಂಭಿಸಿದೆ. ಯಾರಾಗುತ್ತಾರೆ ದ.ಕ‌. ಕಾಂಗ್ರೆಸ್ ಗೆ ಹೊಸ ಸಾರಥಿ ಎಂಬ ಜಿಜ್ಞಾಸೆಯೂ ಶುರುವಾಗಿದೆ.
ಹೇಳಿಕೇಳಿ ದ.ಕ. ಜಿಲ್ಲೆ ಅಂತಿಂಥ ಜಿಲ್ಲೆಯಲ್ಲ. ಸಂಘ ಪರಿವಾರದ ತಾಯಿ ಬೇರು ಇಲ್ಲಿ ಬಲವಾಗಿ ಬೇರೂರಿದೆ. ಇಡೀ ರಾಜ್ಯದಲ್ಲಿ ಮತದಾರರು ಬಿಜೆಪಿಯನ್ನು ತಿರಸ್ಕರಿಸಿದರೂ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಮತದಾರರು ಹಿಂದುತ್ವವನ್ನು ಒಪ್ಪಿಕೊಂಡು ಅಪ್ಪಿಕೊಂಡಿದ್ದಾರೆ. ಹಿಂದುತ್ವದ ಪ್ರಯೋಗ ಶಾಲೆ ಎಂಬ ಮಾತಿನ ನಡುವೆ ಧರ್ಮ ದಂಗಾಲ್, ಅನೈತಿಕ ಪೊಲೀಸ್ ಗಿರಿ, ಕೋಮು ಹತ್ಯೆ, ಶಾಂತಿ- ಸೌಹಾರ್ದತೆ ಭಂಗ ಆಗಾಗ ಘಟಿಸುತ್ತಲೇ ಇರುತ್ತದೆ.
ಓರ್ವ ಸಂಸದ, 6 ಮಂದಿ ಶಾಸಕರು, ಓರ್ವ ವಿಧಾನ ಪರಿಷತ್ ಸದಸ್ಯ, ನೂರಾರು ಜಿಪಂ, ತಾಪಂ ಹಾಗೂ ಗ್ರಾಪಂ ಸದಸ್ಯರನ್ನು ಹೊಂದಿರುವ ಆರೆಸ್ಸೆಸ್ಸಿನ ರಾಜಕೀಯ ಮುಖವಾದ ಬಿಜೆಪಿಯನ್ನು ಎದುರಿಸುವುದು ಅಷ್ಟು ಸಲಭದ ಮಾತಲ್ಲ.
ಸಾಧಾರಣದ ಕಾಂಗ್ರೆಸ್ ನಾಯಕರಿಗೆ ಇದು ಕಷ್ಟ ಸಾಧ್ಯ. ಪ್ರಸ್ತುತ ಜಿಲ್ಲಾಧ್ಯಕ್ಷರಾಗಿರುವ ಹರೀಶ್ ಕುಮಾರ್ ಅವರಿಗೆ ಸ್ಥಳೀಯ ಮಟ್ಟದಲ್ಲಿ ಬಿಜೆಪಿಗೆ ಟಕ್ಕರ್ ಕೊಡಲು ಸಾಧ್ಯವಾಗಲಿಲ್ಲ. ಇದೇ ಕಾರಣಕ್ಕೆ 2018 ಮತ್ತು 2023ರ ವಿಧಾನಸಭೆ ಚುನಾವಣೆಯಲ್ಲಿ ದ.ಕ‌. ಜಿಲ್ಲೆಯಲ್ಲಿ ವಿಜಯ ಪತಾಕೆ ಹಾರಿಸಲು ಹರೀಶ್ ಕುಮಾರ್ ಸಾರಥ್ಯದ ಕಾಂಗ್ರೆಸ್ ವಿಫಲವಾಯಿತು. ಇದೇ ಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್ ದ.ಕ‌. ಜಿಲ್ಲೆಯ ಬಗ್ಗೆ ವಿಶೇಷ ಆಸಕ್ತಿ ವಹಿಸಿದೆ ಎನ್ನಲಾಗಿದೆ. ಇಲ್ಲಿ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲಿಕ್ಕಾಗಿಯೇ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂ ರಾವ್ ಅವರನ್ನು ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿದೆ. ಹಾಗೆಯೇ
ಕಾಂಗ್ರೆಸ್ ಪಕ್ಷಕ್ಕೆ ಸೆಕ್ಯುಲರ್ ಹಣೆಪಟ್ಟಿಯಿದ್ದರೂ ಕಾಂಗ್ರೆಸ್ ನಲ್ಲಿ ಇರುವವರೆಲ್ಲ ಅಪ್ಪಟ ಜಾತ್ಯತೀತರು ಅಲ್ಲ. ಇಲ್ಲೂ ಕೋಮುವಾದ ಮನಸ್ಥಿತಿಯ ಸಾಕಷ್ಟು ನಾಯಕರು, ಮುಖಂಡರು ಇದ್ದಾರೆ. ಇವರೆಲ್ಲ ಜಾತ್ಯತೀತ ಸಿದ್ಧಾಂತ ಅಥವಾ ಕಾಂಗ್ರೆಸ್ ಸಿದ್ಧಾಂತದ ಒಪ್ಪಿಕೊಂಡು ಕಾಂಗ್ರೆಸ್ ನಲ್ಲಿ ಇರುವುದಲ್ಲ, ಬದಲಿಗೆ ಬೇರೆ ಬೇರೆ ಕಾರಣಗಳಿಗಾಗಿ ಅವರು ಕಾಂಗ್ರೆಸ್ ನಲ್ಲಿ ಉಳಿದುಕೊಂಡಿದ್ದಾರೆ. ಇವರೆಲ್ಲ ಬಿಜೆಪಿ ನಾಯಕರೊಂದಿಗೆ ಒಂದು ರೀತಿಯಲ್ಲಿ ರಾಜಿ ರಾಜಕಾರಣ ಅಥವಾ ಹೊಂದಾಣಿಕೆ ರಾಜಕಾರಣ ಮಾಡುತ್ತಲೇ ಬಂದಿದ್ದಾರೆ.
ಮಂಗಳೂರು ಉತ್ತರ ಕ್ಷೇತ್ರವಿರಲಿ, ದಕ್ಷಿಣ ಇರಲಿ ಅಥವಾ ಸುಳ್ಯ ಕ್ಷೇತ್ರವೇ ಇರಲಿ ಇಲ್ಲೆಲ್ಲ ಒಂದು ರೀತಿಯಲ್ಲಿ ಹೊಂದಾಣಿಕೆ ರಾಜಕಾರಣ ಮಾಡುವ ಕಾಂಗ್ರೆಸ್ ಮುಖಂಡರಿದ್ದಾರೆ‌. ಇವರಿಗೆಲ್ಲ ಕಾಂಗ್ರೆಸ್ ಗೆಲ್ಲಲೇ ಬೇಕೆಂಬ ಬದ್ದತೆಯೇನೂ ಇಲ್ಲ. ಇವರೆಲ್ಲ ಬಿಜೆಪಿ ಶಾಸಕರ ನಡುವೆ ಆರಾಮದ ರಾಜಕಾರಣ ಮಾಡುತ್ತಲೇ ಇರುತ್ತಾರೆ. ವಾಸ್ತವಾಂಶ ಹೀಗಿರುವ ಹೊಂದಾಣಿಕೆ ರಾಜಕಾರಣ ಮಾಡದೆ, ಕೋಮುವಾದ ವಿರುದ್ಧ ಗಟ್ಟಿಯಾಗಿ ಮಾತನಾಡ ಬಲ್ಲ ನಾಯಕ ಅಗತ್ಯ ದ.ಕ. ಜಿಲ್ಲಾ ಕಾಂಗ್ರೆಸಿಗಿದೆ ಎಂದು ಎಐಸಿಸಿ ಮತ್ತು ಕೆಪಿಸಿಸಿ ಮನಗಂಡಿದೆ. ಕೋಮುವಾದ ವಿರುದ್ಧ ಸದಾ ಬುಸುಗುಟ್ಟುವ
ಬೆರಳೆಣಿಕೆಯ ನಾಯಕರಲ್ಲಿ ಅಗ್ರಪಂಕ್ತಿಯಲ್ಲಿ ಕಾಣಿಸಿಕೊಳ್ಳುವ ನಾಯಕ ಎಂದರೆ ಬಿ. ರಮಾನಾಥ ರೈ ಅವರು. ಈ ಬಾರಿಯೂ ಬಂಟ್ವಾಳ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ವಿರುದ್ಧ ಸೋಲನುಭವಿಸಿದ ರೈ ಅವರು ಚುನಾವಣಾ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದಾರೆ‌‌. ಹಾಗೆಂತ ಅವರು ರಾಜಕೀಯ ನಿವೃತ್ತಿ ಘೋಷಿಸಿಲ್ಲ. ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಈ ಎಲ್ಲ ಕಾರಣಗಳಿಂದ ರಮಾನಾಥ ರೈ ಅವರನ್ನು ಮತ್ತೊಮ್ಮೆ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸುವ ಕುರಿತು ಕೆಪಿಸಿಸಿ ಚಿಂತನೆ ನಡೆಸಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು