ಇತ್ತೀಚಿನ ಸುದ್ದಿ
ರಾಮ ಸೇತುವೆ ನಿರ್ಮಿಸಿದ ಧನುಷ್ಕೋಡಿಗೆ ಪ್ರಧಾನಿ ಮೋದಿ ಭೇಟಿ: ಕೋತಂಡರಾಮ ಸ್ವಾಮಿಗೆ ಪೂಜೆ ಸಲ್ಲಿಕೆ
21/01/2024, 12:17

ಧನುಷ್ಕೋಡಿ(reporterkarnataka.com): ಅಯೋಧ್ಯೆಯಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಒಂದು ದಿನ ಮುನ್ನ ಭಾನುವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನ ಧನುಷ್ಕೋಡಿ ಬಳಿ ರಾಮಸೇತು ನಿರ್ಮಿಸಿದ ಸ್ಥಳವಾದ ಅರಿಚಲ್ ಮುನೈಗೆ ಭೇಟಿ ನೀಡಿದರು.
ಅರಿಚಲ್ ಮುನೈ ಪಾಯಿಂಟ್‌ನಲ್ಲಿ ಮೋದಿಯವರು ಬೈನಾಕ್ಯುಲರ್ ಮೂಲಕ ಸಮುದ್ರ ವೀಕ್ಷಿಸಿದರು.
ರಾವಣನನ್ನು ಸೋಲಿಸಲು ಭಗವಾನ್ ರಾಮನು ಪ್ರತಿಜ್ಞೆ ಮಾಡಿದ ಸ್ಥಳ ಧನುಷ್ಕೋಡಿ ಎಂದು ಪುರಾಣದ ಮೂಲಕ ನಂಬಲಾಗಿದೆ. ಶ್ರೀರಾಮನು ಲಂಕೆಗೆ ತೆರಳಿದ ಪುಣ್ಯಭೂಮಿ ಇದಾಗಿದೆ ಎಂಬ ನಂಬಿಕೆ ಇದೆ.
ಶ್ರೀ ಕೋತಂಡರಾಮ ಸ್ವಾಮಿ ದೇವಸ್ಥಾನದಲ್ಲೂ ಪ್ರಧಾನಿ ಮೋದಿ ಪೂಜೆ ಸಲ್ಲಿಸಲಿದರು. ಕೋದಂಡರಾಮ ಎಂದರೆ ಬಿಲ್ಲು ಹೊಂದಿರುವ ರಾಮ ಎಂದರ್ಥ. ಇದು ಧನುಷ್ಕೋಡಿಯಲ್ಲಿದೆ. ರಾವಣನ ಸಹೋದರ ವಿಭೀಷಣನು ಮೊದಲು ಭಗವಾನ್ ರಾಮನನ್ನು ಭೇಟಿಯಾಗಿ ಆಶ್ರಯವನ್ನು ಕೇಳಿದ್ದು ಇಲ್ಲಿಯೇ ಎಂದು ಹೇಳಲಾಗುತ್ತದೆ. ಶ್ರೀರಾಮನು ವಿಭೀಷಣನ ಪಟ್ಟಾಭಿಷೇಕವನ್ನು ನಡೆಸಿದ ಸ್ಥಳವಾಗಿದೆ ಎಂದು ಕೆಲವು ದಂತಕಥೆಗಳು ಹೇಳುತ್ತವೆ.