ಇತ್ತೀಚಿನ ಸುದ್ದಿ
ಕಾಫಿನಾಡಲ್ಲಿ ಅಪರೂಪದ ರಕ್ತ ಕನ್ನಡಿ ಹಾವು ಪತ್ತೆ: ಉರಗ ಸಂತತಿಯಲ್ಲೇ ಮೋಸ್ಟ್ ಡೇಂಜರಸ್ ಸರ್ಪ ?!
10/12/2024, 18:08
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಾಫಿನಾಡಲ್ಲಿ ಅಪರೂಪದ ರಕ್ತ ಕನ್ನಡಿ ಹಾವು ಪತ್ತೆಯಾಗಿದೆ. ಕಳಸ ತಾಲೂಕಿನ ಕಲ್ಮಕ್ಕಿ ಗ್ರಾಮದಲ್ಲಿ ಪತ್ತೆಯಾದ ಡೇಂಜರ್ ಸ್ನೇಕ್ ಕಂಡು ಬಂದಿದೆ.
ಉರಗಗಳ ಸಂತತಿಯಲ್ಲೇ ಈ ಕೋರಲ್ ಸ್ನೇಕ್ ಮೋಸ್ಟ್ ಡೇಂಜರಸ್ ಎನ್ನಲಾಗಿದೆ.ಮಲೆನಾಡಲ್ಲಿ ಇದನ್ನ ಹಪ್ಪಟೆ, ರಕ್ತಗನ್ನಡಿ, ಹವಳದ ಹಾವು ಅಂತಾರೆ. ದೇಹದ ಮೇಲೆ ಕಪ್ಪು ಕೆಳಭಾಗ ಕೆಂಪು ಬಣ್ಣದಿಂದ ಹಾವು ಕೂಡಿದೆ. ಈ ಹಾವು ಕಡಿದರೆ ಸಾಯೋದು ಕಡಿಮೆ, ಆದರೆ, ದೇಹಕ್ಕೆ ನಾನಾ ಸಮಸ್ಯೆ ಒಡ್ಡುತ್ತೆ. ಈ ಹಾವಿನ ಹಲ್ಲು ಹೆಚ್ಚಾಗಿ ಬಾಗಿರುವುದರಿಂದ ವಿಷ ದೇಹ ಸೇರೋದು ಕಡಿಮ. ಪಶ್ಚಿಮ ಘಟ್ಟಗಳ ಭಾಗದಲ್ಲಿ ಮಾತ್ರ ಕಾಣಸಿಗುವ ಅಪರೂಪದ ಹಾವು ಇದಾಗಿದೆ.
ಕಳಸ ಉರಗತಜ್ಞ ರಿಜ್ವಾನ್ ಮನೆ ಅಂಗಳದಲ್ಲಿ ಈ ಹಾವು ಕಾಣಿಸಿಕೊಂಡಿದೆ.