ಇತ್ತೀಚಿನ ಸುದ್ದಿ
ರಾಕೇಶ್ ನಾಯ್ಕ ಕೆ. ಅವರಿಗೆ ಮಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್
18/03/2026, 21:47
ಪುತ್ತೂರು(reporterkarnataka.com): ಮಂಗಳೂರು ವಿಶ್ವವಿದ್ಯಾಲಯ ಪುತ್ತೂರು ಕಸಬಾ ಗ್ರಾಮದ ಕರ್ಕುಂಜ ನಿವಾಸಿ ರಾಕೇಶ್ ನಾಯ್ಕ ಕೆ. ಅವರಿಗೆ ಪಿಹೆಚ್.ಡಿ ಪದವಿ ಪ್ರದಾನ ಮಾಡಿದೆ.
ಅವರು “ಸೋಶಿಯೋ-ಇಕೊನೋಮಿಕ್ ಎಂಪವರ್‌ಮೆಂಟ್ ಆಫ್ ಶೆಡ್ಯೂಲ್ಡ್ ಟ್ರೈಬ್ಸ್: ಎ ಕಂಪಾರೇಟಿವ್ ಸ್ಟಡಿ ಇನ್ ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್” (Socio-Economic Empowerment of Scheduled Tribes: A Comparative Study in Dakshina Kannada District) ಎಂಬ ಶೀರ್ಷಿಕೆಯ ಮೇಲೆ ಸಂಶೋಧನೆಯನ್ನು ನಡೆಸಿ ಮಹಾ ಪ್ರಬಂಧವನ್ನು ಮಂಡಿಸಿದ್ದಾರೆ. ಇವರು ತಮ್ಮ ಸಂಶೋಧನೆಯನ್ನು ಮಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ವಜೀದಾ ಬಾನು ಅವರ ಮಾರ್ಗದರ್ಶನದಲ್ಲಿ ಪೂರ್ಣಗೊಳಿಸಿದ್ದಾರೆ. ಇವರು ಭಾರತ ಸರ್ಕಾರದ ಮಿನಿಸ್ಟ್ರಿ ಆಫ್ ಟ್ರೈಬಲ್ ಅಫೇರ್ಸ್ ವತಿಯಿಂದ ನೀಡಲಾಗುವ ನ್ಯಾಷನಲ್ ಫೆಲೋಶಿಪ್ ಫೋರ್ ಟ್ರೈಬಲ್ ಸ್ಟೂಡೆಂಟ್ಸ್ ಎಂಬ ಶಿಷ್ಯವೇತನದ ಮೂಲಕ ಸಂಶೋಧನೆಯನ್ನು ಪೂರ್ಣಗೊಳಿಸಿರುತ್ತಾರೆ. ಇವರು ಪುತ್ತೂರು ಕಸಬಾ ಗ್ರಾಮದ ಕರ್ಕುಂಜ ನಿವಾಸಿಗಳಾದ ಶ್ರೀ ಈಶ್ವರ ನಾಯ್ಕ ಕರ್ಕುಂಜ ಮತ್ತು ಅನಸೂಯರವರ ಪುತ್ರ.













