7:51 PM Sunday20 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ರಾಜ್ಯದ 2ನೇ ಭಾಷೆಯಾಗಿ ತುಳುವಿಗೆ ಸ್ಥಾನಮಾನ ನೀಡಲು ಸರಕಾರ ಗಂಭೀರ ಚಿಂತನೆ: ನರಿಂಗಾನ ಕಂಬಳದಲ್ಲಿ ಸಿಎಂ ಸಿದ್ದರಾಮಯ್ಯ

11/01/2025, 23:59

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಕರಾವಳಿಗರ ಮಾತೃಭಾಷೆಯಾದ ತುಳುವಿಗೆ ರಾಜ್ಯದ ಎರಡನೇ ಭಾಷೆಯ ಸ್ಥಾನಮಾನ ನೀಡಲು ಸರಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಂಗಳೂರು ಹೊರವಲಯದ ನರಿಂಗಾನದ ಮೋರ್ಲ-ಬೋಳದಲ್ಲಿ ಸ್ಪೀಕ‌ರ್ ಯು.ಟಿ.ಖಾದರ್ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ತೃತೀಯ ವರ್ಷದ ಹೊನಲು ಬೆಳಕಿನ ನರಿಂಗಾನ ಲವ- ಕುಶ ಜೋಡುಕರೆ ಕಂಬಳದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತುಳುವನ್ನು ರಾಜ್ಯದ ಎರಡನೇ ಭಾಷೆ ಮಾಡಲು ಸ್ಪೀಕರ್ ಯು.ಟಿ. ಖಾದರ್ ಮತ್ತು ಶಾಸಕ ಅಶೋಕ್ ರೈ ಒತ್ತಾಯಿಸಿದ್ದು, ಸರಕಾರ ಇದನ್ನ ಗಂಭೀರವಾಗಿ ಪರಿಗಣಿಸಿದೆ. ಕರಾವಳಿಯಲ್ಲಿ ಎಲ್ಲ ಜಾತಿ, ಧರ್ಮದವರನ್ನು ಒಟ್ಟುಗೂಡಿಸಿ ನಡೆಯುವ ಕಂಬಳವು ಜಾತ್ಯತೀತ ಕ್ರೀಡೆಯಾಗಿದೆ ಎಂದು ಮುಖ್ಯಮಂತ್ರಿ ಸಂತಸ ವ್ಯಕ್ತಪಡಿಸಿದರು.
ರೈತರಿಗೆ ಸಾಕು ಪ್ರಾಣಿಗಳ ಜತೆ ಅವಿನಾಭಾವ ಸಂಬಂಧವಿದೆ. ಅದರ ಭಾಗವಾಗಿ ಕಂಬಳ ಕ್ರೀಡೆ ನಡೆಯುತ್ತಿದೆ. ರೈತರು ಕಂಬಳದ ಕೋಣಗಳನ್ನು ಬಹಳಷ್ಟು ಮುತುವರ್ಜಿ ವಹಿಸಿ ಸಾಕುತ್ತಾರೆ. ತುಳುವರು ಎಷ್ಟೇ ವಿದ್ಯಾವಂತರಾದರೂ ಕ್ರೀಡೆಯನ್ನ ಪ್ರೋತ್ಸಾಹಿಸುತ್ತಾರೆ ಎಂದು ಸಿದ್ದರಾಮಯ್ಯ ಶ್ಲಾಘಿಸಿದರು.
ಕಂಬಳ ಕ್ರೀಡೆಯನ್ನ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಕಂಬಳಕ್ಕೆ ಸರಕಾರ 1.50 ಕೋಟಿ ರೂಪಾಯಿ ಅನುದಾನ, ರಾಜ್ಯದಲ್ಲಿ ನಡೆಯುವ 24 ಕಂಬಳಕ್ಕೆ ತಲಾ 5 ಲಕ್ಷ ರೂ. ಅನುದಾನವನ್ನು ನೀಡಿದೆ ಎಂದರು.
ರಾಜಕಾರಣದಲ್ಲಿ ಯಾವುದೂ ಶಾಶ್ವತ ಅಲ್ಲ. ಜನರ ಆಶೀರ್ವಾದವಿದ್ದರೆ ಮಾತ್ರ
ಅಧಿಕಾರದಲ್ಲಿ ಉಳಿಯಬಹುದು ಎಂದು ಮುಖ್ಯಮಂತ್ರಿ ನುಡಿದರು.
ನಮ್ಮ ಪೂರ್ವಜರು ಪರಿಚಯಿಸಿದ ಕಂಬಳ ಸಂಸ್ಕೃತಿಯನ್ನು ಮುಂದಿನ ಜನಾಂಗಕ್ಕೆ ವರ್ಗಾಯಿಸುವ ಕಾರ್ಯ ನರಿಂಗಾನ ಕಂಬಳದ ಮೂಲಕ ನಡೆಯುತ್ತಿದೆ. ಆರ್ಥಿಕ ಕಷ್ಟವಿದ್ದರೂ ಕಂಬಳ ಪ್ರೇಮಿಗಳು ಕಂಬಳವನ್ನ ಕೈಬಿಟ್ಟಿಲ್ಲ. ಕಂಬಳ ಕ್ರೀಡೆಯು ಪ್ರಾಣಿಗಳಿಗೆ ಎಂದಿಗೂ ಹಿಂಸೆ ನೀಡಿಲ್ಲ, ಬದಲಾಗಿ ಪ್ರಾಣಿಗಳನ್ನ ಪ್ರೀತಿಸಲು ಕಲಿಸಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದ‌ರ್ ಹೇಳಿದರು.
ಕಂಬಳಕ್ಕೆ 5 ಲಕ್ಷ ಅನುದಾನ ಮತ್ತು ತಾನು ಪ್ರತಿನಿಧಿಸುತ್ತಿರುವ ಮಂಗಳೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಒಂದು ಸಾವಿರ ಕೋಟಿ ಅನುದಾನ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಖಾದ‌ರ್ ಅಭಿನಂದಿಸಿದರು.



ಕಂಬಳ ಕ್ಷೇತ್ರದ ಮಹನೀಯರಾದ ಗುಣಪಾಲ ಕಡಂಬ, ರಾಜೀವ ಶೆಟ್ಟಿ ಎತ್ತೂರು, ಅಪ್ಪು ಯಾನೆ ಜಾನ್ ಸಿರಿಲ್ ಡಿ ಸೋಜ, ಚಂದ್ರಹಾಸ್‌ ಶೆಟ್ಟಿ ಮೋರ್ಲ, ಚಿತ್ರನಟಿ ಸಾನ್ವಿ ಶ್ರೀವಾತ್ಸವ ಅವರನ್ನ ಮುಖ್ಯಮಂತ್ರಿಗಳು ಸನ್ಮಾನಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ರಹೀಂ ಖಾನ್, ಕಾಸರಗೋಡು ಸಂಸದ ಉನ್ನಿತ್ತಾನ್, ಶಾಸಕರಾದ ಅಶೋಕ್ ರೈ, ಎಮ್ಮೆಲ್ಸಿಗಳಾದ ಮಂಜುನಾಥ್ ಭಂಡಾರಿ, ನಝೀರ್ ಅಹ್ಮದ್, ಐವನ್ ಡಿಸೋಜ, ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು