ಇತ್ತೀಚಿನ ಸುದ್ದಿ
ರಾಜ್ಯದಲ್ಲಿ 3 ಹಂತಗಳಲ್ಲಿ ಅನ್ ಲಾಕ್ ?: 2ನೇ ಹಂತದಲ್ಲಿ ಬಸ್ , ಕ್ಯಾಬ್, ಆಟೋ ಸಂಚಾರಕ್ಕೆ ಅವಕಾಶ ?
07/06/2021, 09:19
ಬೆಂಗಳೂರು(reporterkarnataka news): ರಾಜ್ಯ ಜೂನ್ 14ಕ್ಕೆ ಮುನ್ನವೇ ಅನ್ ಲಾಕ್ ಆಗುವ ಎಲ್ಲ ಸಾಧ್ಯತೆಗಳಿದ್ದು, ಹಂತ ಹಂತವಾಗಿ ಈ ಪ್ರಕ್ರಿಯೆ ನಡೆಯಲಿದೆ. ಹಾಗಾದರೆ ಯಾವ ರೀತಿಯಲ್ಲಿ ಅನ್ ಲಾಕ್ ಪ್ರಕ್ರಿಯೆ ನಡೆಯಲಿದೆ ಎಂಬುವುದನ್ನು ನೋಡೋಣ.
ಮೊದಲ ಹಂತದಲ್ಲಿ ದಿನಸಿ ಅಂಗಡಿ, ಕೈಗಾರಿಕೆಗಳು, ಗಾರ್ಮೆಂಟ್ಸ್, ಫ್ಯಾಕ್ಟರಿಗಳನ್ನು ತೆರೆಯಲು ಅವಕಾಶ ನೀಡಲಾಗುತ್ತದೆ. ಎರಡನೇ ಹಂತದಲ್ಲಿ ಹೋಟೆಲ್, ಆಟೋ, ಕ್ಯಾಬ್, ಶೇ.50ರಷ್ಟು ಪ್ರಯಾಣಿಕರೊಂದಿಗೆ ಬಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಗಲಿದೆ. ಮೂರನೇ ಹಂತದಲ್ಲಿ ಬಾರ್ ರೆಸ್ಟೋರೆಂಟ್, ಕ್ಲಬ್‍ಗೆ ಶೇ.50ರಷ್ಟು ಸೀಟುನೊಂದಿಗೆ ಶುರು ಮಾಡಲು ಅವಕಾಶ ದೊರಕಲಿದೆ ಎಂದು ತಿಳಿದು ಬಂದಿದೆ.
ಬೆಂಗಳೂರಲ್ಲಿ ಶೇ.3, ರಾಜ್ಯದಲ್ಲಿ ಶೇ.6ಕ್ಕೆ ಪಾಸಿಟಿವಿಟಿ ಇಳಿದರೆ ಅನ್‍ಲಾಕ್ ಆಗಲಿದೆ. ಸದ್ಯ ಬೆಂಗಳೂರಿನಲ್ಲಿ ಶೇ.4.96, ಕೆಲ ಜಿಲ್ಲೆಗಳಲ್ಲಿ ಶೇ.39ರಷ್ಟು ಪಾಸಿಟಿವಿಟಿ ರೇಟ್ ಇದೆ. ಕೆಲವೇ ದಿನಗಳಲ್ಲಿ ಪಾಸಿಟಿವಿಟಿ ರೇಟ್ ಮತ್ತಷ್ಟು ಇಳಿಯುವ ಸಾಧ್ಯತೆಯಿದೆ.