10:23 PM Saturday18 - January 2025
ಬ್ರೇಕಿಂಗ್ ನ್ಯೂಸ್
ರಾಜ್ಯದಲ್ಲಿ ಕೃಷಿ ಬಲವರ್ಧನೆ ನೆರವಿಗೆ ಸಚಿವ ಚಲುವರಾಯಸ್ವಾಮಿ ಮನವಿ: ಕೇಂದ್ರ ಸಮ್ಮತಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕೋತಿಗೆ ಗ್ರಾಪಂ ಮಾಜಿ ಅಧ್ಯಕ್ಷರಿಂದ ಅಂತ್ಯ ಸಂಸ್ಕಾರ: ರಾತ್ರಿ… ಜಾತಿಗಣತಿ ವರದಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡನೆ: ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ… ಸಂಭ್ರಮ- ಸಡಗರಕ್ಕೆ ಸಾಕ್ಷಿಯಾದ ಕಡಲನಗರಿಯ ಮಂಗಳಾ ಕ್ರೀಡಾಂಗಣ: 4500 ಕ್ರೀಡಾಪಟುಗಳ ಪಾದಸ್ಪರ್ಶ ಎಷ್ಟಾದರೂ ಹಣ-ಸವಲತ್ತು ಕೇಳಿ ಕೊಡ್ತೀನಿ, ಆದರೆ ಒಲಂಪಿಕ್ ಮೆಡಲ್ ತನ್ನಿ: ಮಂಗಳೂರಿನಲ್ಲಿ ಸಿಎಂ… ಮಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಪ್ರಾದೇಶಿಕ ಕಚೇರಿಗೆ ಸಿಎಂ ಸಿದ್ದರಾಮಯ್ಯ… ಮಂಗಳೂರಿಗೆ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ: ರಾಜೀವ್ ಗಾಂಧಿ ವಿವಿ ಪ್ರಾದೇಶಿಕ ಕೇಂದ್ರಕ್ಕೆ ಶಿಲಾನ್ಯಾಸ ಕುರ್ಚಿಗಾಗಿ ಕಾದಾಟದಲ್ಲೇ ಎಲ್ಲರೂ ಮಗ್ನ, ಜನರ ಪಾಲಿಗೆ ಸರ್ಕಾರದ ನೆರವು ಮರೀಚಿಕೆ: ಪ್ರತಿಪಕ್ಷ… ಕೆಎಎಸ್‌ ಪೂರ್ವಭಾವಿ ಮರುಪರೀಕ್ಷೆಯ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್… ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ 6 ಬಾರಿ ಚಾಕು ಇರಿತ: ಮುಂಜಾನೆ…

ಇತ್ತೀಚಿನ ಸುದ್ದಿ

ರಾಜ್ಯದ ಜನಸಾಮಾನ್ಯರಿಗೆ ಸಮಗ್ರ ಆರೋಗ್ಯ ಸೇವೆ: ರೋಟರಿ ಬೆಂಗಳೂರು ಗುಲ್‍ಮೊಹರ್ ಮತ್ತು ರಾಮಯ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆ ಒಪ್ಪಂದಕ್ಕೆ ಸಹಿ

18/01/2025, 21:53

* ತಿಪಟೂರು, ತುರುವೇಕೆರೆ, ಬಳ್ಳಾರಿ, ನಗರ ಮತ್ತು ಬೆಂಗಳೂರು ಗ್ರಾಮಾಂತರ ಮತ್ತು ಗದಗದಿಂದ ಆರೋಗ್ಯ ಅಭಿಯಾನ ಆರಂಭವಾಗಲಿದೆ. ಕ್ರಮೇಣ ಇದನ್ನು ಇತರ ಪ್ರದೇಶಗಳಿಗೂ ವಿಸ್ತರಿಸಲಾಗುವುದು

* ವರ್ಷಾಂತ್ಯದೊಳಗೆ ಕನಿಷ್ಠ 2,500 ಫಲಾನುಭವಿಗಳನ್ನು ತಲುಪುವ ಗುರಿ ಇದೆ

ಬೆಂಗಳೂರು(reporterkarnataka.com):
ಕರ್ನಾಟಕದಾದ್ಯಂತ ಬಿಪಿಎಲ್ ಕಾರ್ಡ್ ಹೊಂದಿರುವವರು, ಹಿಂದುಳಿದವರು, ನಿರ್ಗತಿಕರು ಮತ್ತು ಹಿರಿಯ ನಾಗರಿಕರಿಗೆ ಸಮಗ್ರ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆಯನ್ನು ಒದಗಿಸಲು 2 ವರ್ಷಗಳ ತಿಳುವಳಿಕೆ ಒಪ್ಪಂದಕ್ಕೆ (ಎಂಓಯು) ರೋಟರಿ ಬೆಂಗಳೂರು ಗುಲ್‍ಮೊಹರ್ ಮತ್ತು ಬೆಂಗಳೂರಿನ ರಾಮಯ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆ (ಆರ್‍ಎಂಸಿಎಚ್) ಸಹಿ ಮಾಡಿವೆ. ಆರಂಭದಲ್ಲಿ, 2 ವರ್ಷಗಳ ಅವಧಿಗೆ ಇರುವ ಈ ಒಪ್ಪಂದ ಪರಸ್ಪರ ಒಪ್ಪಿತನಿಯಮಗಳ ಆಧಾರದಲ್ಲಿ ಮತ್ತಷ್ಟು ಅವಧಿಗೆ ವಿಸ್ತರಿಸಬಹುದಾಗಿದೆ.
ರಾಮಯ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಅಸೋಸಿಯೇಟ್ ಡೀನ್ ಡಾ. ರಮೇಶ್ ಡಿ ಮತ್ತು ರೋಟರಿ ಬೆಂಗಳೂರು ಗುಲ್‍ಮೊಹರ್‍ನ ಚಾರ್ಟರ್ ಅಧ್ಯಕ್ಷ ರೊಟೇರಿಯನ್ ಡಾ. ಮುರಳಿ ಕೃಷ್ಣನ್ ಅವರು ಬೆಂಗಳೂರಿನಲ್ಲಿ ಎಂಒಯುಗೆ ಸಹಿ ಮಾಡಿದರು. ಇದು ಕರ್ನಾಟಕದಾದ್ಯಂತ ಅಗತ್ಯವಿರುವವರಿಗೆ ಸಮಗ್ರ ಆರೋಗ್ಯ ಸೇವೆಯನ್ನು ನೀಡುವ ಹೊಸ ಆರಂಭವನ್ನು ಗುರುತಿಸುತ್ತದೆ, ಆ ಮೂಲಕ ಹೊಸ ಆರೋಗ್ಯ ಸೇವೆಯ ಕ್ರಾಂತಿಗೆ ನಾಂದಿ ಹಾಡಿದೆ.
ರೆಫರಲ್ ರೋಗಿಗಳಿಗೆ ಉಚಿತ ಅಥವಾ ಸಬ್ಸಿಡಿ ವೆಚ್ಚದಲ್ಲಿ ಚಿಕಿತ್ಸೆ ನೀಡುವುದು ಮತ್ತು ವೃದ್ಧಾಶ್ರಮಗಳಲ್ಲಿ ಹಿರಿಯ ನಾಗರಿಕರಿಗೆ ಒಳರೋಗಿಯಾಗಿ ಮತ್ತು ಹೊರರೋಗಿಯಾಗಿ ಅಗತ್ಯವಿದ್ದಾಗ ನಿಯತಕಾಲಿಕ ಉಚಿತ ವೈದ್ಯಕೀಯ ತಪಾಸಣೆ ಒದಗಿಸುವುದು ಮತ್ತು ವೈದ್ಯಕೀಯ ಚಿಕಿತ್ಸೆ ನೀಡುವುದನ್ನು ಈ ಎಂಒಯು ಒಳಗೊಂಡಿದೆ.
ಆರ್‍ಎಂಸಿಎಚ್‍ನ ಅಸೋಸಿಯೇಟ್ ಡೀನ್ ಡಾ. ರಮೇಶ್ ಡಿ ಈ ಬಗ್ಗೆ ಮಾಹಿತಿ ನೀಡಿ, “ರಾಮಯ್ಯ ಆಸ್ಪತ್ರೆ ಸಮೂಹ ಹಲವಾರು ದಶಕಗಳಿಂದ ಸಮುದಾಯ ಆರೋಗ್ಯ ಸೇವೆಗಳನ್ನು ನೀಡುವಲ್ಲಿ ಮುಂಚೂಣಿಯಲ್ಲಿದೆ. ರೋಟರಿ ಬೆಂಗಳೂರು ಗುಲ್‍ಮೊಹರ್‍ನೊಂದಿಗೆ ಸಹಭಾಗಿತ್ವ ಸಾಧಿಸುವ ಮೂಲಕ, ನಮ್ಮ ಸಮಗ್ರ ಆರೋಗ್ಯ ಸೇವೆಗಳನ್ನು ಕರ್ನಾಟಕದಾದ್ಯಂತ ತೆಗೆದುಕೊಂಡು ಹೋಗಲು ನಾವು ಬಯಸುತ್ತೇವೆ ಮತ್ತು ನಮ್ಮ ಸಮಕಾಲೀನ ಸೇವೆಗಳು ದುರ್ಬಲ ಮತ್ತು ಹಿರಿಯ ನಾಗರಿಕರಿಗೆ ಸುಲಲಿತವಾಗಿ ತಲುಪುವುದನ್ನು ಖಚಿತಪಡಿಸಿಕೊಳ್ಳಲು ನಾವು ಬಯಸುತ್ತೇವೆ” ಎಂದು ಹೇಳಿದರು.
ಈ ಹೆಲ್ತ್‍ಕೇರ್ ಮಿಷನ್‍ನಲ್ಲಿ ರೋಟರಿ ಬೆಂಗಳೂರು ಗುಲ್‍ಮೊಹರ್ ಪಾಲುದಾರಿಕೆಗಾಗಿ ಆರ್‍ಎಂಸಿಎಚ್‍ಗೆ ಧನ್ಯವಾದ ಅರ್ಪಿಸಿದ ರೊಟೇರಿಯನ್ ಡಾ. ಮುರಳಿ ಕೃಷ್ಣನ್, “ನಾವು ಕಳೆದ ಕೆಲವು ವರ್ಷಗಳಿಂದ ಆರೋಗ್ಯ ರಕ್ಷಣೆಯ ಮೇಲೆ ಕೇಂದ್ರೀಕರಿಸಿದ್ದೇವೆ ಮತ್ತು ಸೀಮಿತ ರೀತಿಯಲ್ಲಿ ಜನಸಾಮಾನ್ಯರನ್ನು ತಲುಪುತ್ತಿದ್ದೇವೆ. ಆರ್‍ಎಂಸಿಎಚ್‍ನೊಂದಿಗೆ ನಮ್ಮ ಪಾಲುದಾರಿಕೆಯು ರಚನಾತ್ಮಕ ರೀತಿಯಲ್ಲಿ ಸಮಾಜದ ಅತ್ಯಂತ ದುರ್ಬಲ ವರ್ಗಗಳಿಗೆ ಸಮಗ್ರ ಮತ್ತು ಕೈಗೆಟುಕುವ ಆರೋಗ್ಯ ರಕ್ಷಣೆ ಒದಗಿಸುವ ನಮ್ಮ ಸಂಕಲ್ಪವನ್ನು ಹೆಚ್ಚಿಸಲು ಮತ್ತು ಮತ್ತಷ್ಟು ಬಲಪಡಿಸಲು ನಮಗೆ ಅನುವು ಮಾಡಿಕೊಡುತ್ತದೆ” ಎಂದು ಬಣ್ಣಿಸಿದರು.
ಆರೋಗ್ಯಸೇವೆಯ ಕುರಿತು ಪ್ರತಿಕ್ರಿಯಿಸಿದ ರೋಟರಿ ಬೆಂಗಳೂರು ಗುಲ್‍ಮೊಹರ್‍ನ ವೈದ್ಯಕೀಯ ನಿರ್ದೇಶಕ ಡಾ.ಶ್ರೀರಾಮ್ ರಾಮಲಿಂಗಂ, ಆರೋಗ್ಯ ಅಭಿಯಾನವನ್ನು ತಿಪಟೂರು, ತುರುವೇಕೆರೆ, ಬಳ್ಳಾರಿ, ನಗರ ಮತ್ತು ಬೆಂಗಳೂರು ಗ್ರಾಮಾಂತರ ಮತ್ತು ಗದಗದಿಂದ ಪ್ರಾರಂಭಿಸಲಾಗುವುದು ಮತ್ತು ಕ್ರಮೇಣ ಇದನ್ನು ಇತರ ಪ್ರದೇಶಗಳಿಗೆ ವಿಸ್ತರಿಸಲಾಗುವುದು. ವಷಾರ್ಂತ್ಯದೊಳಗೆ ಕನಿಷ್ಠ 2,500 ಫಲಾನುಭವಿಗಳನ್ನು ತಲುಪುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.
ಎಂಒಯು ಪ್ರಕಾರ, ರೋಟರಿ ಬೆಂಗಳೂರು ಗುಲ್‍ಮೊಹರ್‍ನ ರೆಫರಲ್ ರೋಗಿಗಳಿಗೆ ಆರ್‍ಎಂಸಿಎಚ್ ಸಮಾಲೋಚನೆ ಸೇವೆಗಳು, ರೋಗನಿರ್ಣಯ ಸೌಲಭ್ಯಗಳು ಮತ್ತು ಆಸ್ಪತ್ರೆಯ ಸೌಲಭ್ಯವನ್ನು ಒದಗಿಸುತ್ತದೆ. ಒಪ್ಪಂದದ ಪ್ರಕಾರ, ಆರ್‍ಎಂಸಿಎಚ್ ನೋಂದಣಿ ಶುಲ್ಕವನ್ನು ಮನ್ನಾ ಮಾಡುತ್ತದೆ, ಮರು-ಭೇಟಿ ಶುಲ್ಕಗಳು ಮತ್ತು ರೋಗನಿರ್ಣಯ ಹಾಗೂ ರೇಡಿಯಾಲಜಿ ತಪಾಸಣೆಗೆ ಶೇಕಡ 25ರ ರಿಯಾಯಿತಿಯನ್ನು ನೀಡುತ್ತದೆ. ಇದಲ್ಲದೆ, ಆಸ್ಪತ್ರೆಗೆ ದಾಖಲಾಗುವ ಅಗತ್ಯವಿರುವ ರೋಗಿಗಳನ್ನು ರಿಯಾಯಿತಿ ವಾರ್ಡ್‍ಗಳಿಗೆ ದಾಖಲಿಸಲಾಗುತ್ತದೆ.
ಅನೇಕ ನಿಯತವಾದ ಪರೀಕ್ಷೆಗಳು ಉಚಿತವಾಗಿದ್ದು, ವಿಶೇಷ ಪ್ರಯೋಗಾಲಯದ ಪರೀಕ್ಷೆಗಳ ಸಂದರ್ಭದಲ್ಲಿ ಶೇಕಡ 25 ರಿಂದ ಶೇಕಡ 50 ರ ವರೆಗೆ ರಿಯಾಯಿತಿಯನ್ನು ನೀಡಲಾಗುತ್ತದೆ. ಅಲ್ಲದೆ, ರೋಟರಿ ಬೆಂಗಳೂರು ಗುಲ್‍ಮೊಹರ್ ಅಥವಾ ಅವರ ಉಲ್ಲೇಖಿತ ರೋಗಿಗಳು ಔಷಧಿ ಮತ್ತು ಇತರ ಉಪಭೋಗ್ಯ ವಸ್ತುಗಳ ವೆಚ್ಚವನ್ನು ಭರಿಸಬೇಕಾಗುತ್ತದೆ.
ಇದರ ಜತೆಗೆ ಅಗತ್ಯಾನುಸಾರ ನಿಯತಕಾಲಿಕವಾಗಿ ಕಣ್ಣಿನ ತಪಾಸಣೆ ಮತ್ತು ಅನುಸರಣಾ ಚಿಕಿತ್ಸೆಯನ್ನು ನೀಡಲಾಗುತ್ತದೆ. ಅಲ್ಲದೆ, ಅಗತ್ಯವಿರುವವರಿಗೆ ಮಾನಸಿಕ ಪರೀಕ್ಷೆಗಳು ಮತ್ತು ಮಧ್ಯಸ್ಥಿಕೆಗಳನ್ನು ಮಾಡಲಾಗುತ್ತದೆ. ಇದಲ್ಲದೆ, ಆರ್‍ಎಂಸಿಎಚ್ ವತಿಯಿಂದ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಉಚಿತ ವಾರ್ಷಿಕ/ ಅರ್ಧವಾರ್ಷಿಕ ವೈದ್ಯಕೀಯ ಶಿಬಿರಗಳನ್ನು ನಡೆಸಲಾಗುವುದು. ಒಳರೋಗಿಗಳಿಗೆ, ಎಂಒಯು ಉಚಿತ ಹಾಸಿಗೆ ಶುಲ್ಕಗಳು ಮತ್ತು ಆಸ್ಪತ್ರೆಯಲ್ಲಿ ತಂಗುವ ಸಮಯದಲ್ಲಿ ರೋಗಿಗಳಿಗೆ ಉಚಿತ ಆಹಾರವನ್ನು ಒದಗಿಸುತ್ತದೆ.
ರೋಟರಿ ಬೆಂಗಳೂರು ಗುಲ್‍ಮೊಹರ್‍ನ ಅಧ್ಯಕ್ಷರಾದ ಶ್ರೀ ಪ್ರದೀಪ್ ಎಂ ಕುಲಕರ್ಣಿ ಮಾತನಾಡಿ, ಆರ್‍ಬಿಜಿ ಸಾಮಾನ್ಯ ಆರೋಗ್ಯ ತಪಾಸಣೆ, ಸ್ತನ ಕ್ಯಾನ್ಸರ್ ತಪಾಸಣೆ, ಕಣ್ಣಿನ ತಪಾಸಣೆ, ಕಣ್ಣಿನ ಪೆÇರೆ ಶಸ್ತ್ರಚಿಕಿತ್ಸೆ, ಉಚಿತ ಕನ್ನಡಕ ವಿತರಣೆ ಇತ್ಯಾದಿಗಳನ್ನು ಬಹು ವರ್ಷಗಳಿಂದ ನಡೆಸುತ್ತಿದೆ ಎಂದು ಬಹಿರಂಗಪಡಿಸಿದರು. ಈ ಪಾಲುದಾರಿಕೆಯು ನಮ್ಮ ಸೇವೆಗಳನ್ನು ಅಳೆಯಲು ಮತ್ತು ಅದನ್ನು ಹೆಚ್ಚು ಪ್ರಭಾವಶಾಲಿಯಾಗಿಸಲು ನಮಗೆ ಸಹಾಯ ಮಾಡುತ್ತದೆ ಎಂದು ವಿವರಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು