4:59 PM Thursday18 - September 2025
ಬ್ರೇಕಿಂಗ್ ನ್ಯೂಸ್
ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು…

ಇತ್ತೀಚಿನ ಸುದ್ದಿ

ರಾಜ್ಯ ಸರಕಾರದ ಗಮನಕ್ಕೆ ಪತ್ರಕರ್ತರ ಸಮಸ್ಯೆ: ಕೆಡಬ್ಲ್ಯುಜೆ ವಾಯ್ಸ್ ರಾಜ್ಯಾಧ್ಯಕ್ಷ ಬಂಗ್ಲೆಗೆ ಸಾಲಿಮಠ ಅಭಿನಂದನೆ

25/12/2022, 12:51

ರಾಯಚೂರು(reporterkarnataka.com): ರಾಜ್ಯ ಸರಕಾರಕ್ಕೆ ಪತ್ರಕರ್ತರ ಸಮಸ್ಯೆ ಕುರಿತು ಪರಿಹಾರ ಒದಗಿಸಬೇಕೆಂದು ಒತ್ತಡ ಹಾಕುತ್ತಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಅವರಿಗೆ ರಾಯಚೂರು ತಾಲೂಕು ಅಧ್ಯಕ್ಷ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅವರು ಅಭಿನಂದನೆ ಸೂಚಿಸಿದ್ದಾರೆ.

ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮರಂಗಕ್ಕೆ ತನ್ನದೇ ಆದ ಇತಿಹಾಸವಿದೆ. ಸಮಾಜದಲ್ಲಿನ ತಪ್ಪುಗಳನ್ನು, ಯಾರು ಹೇಳಲಾಗದಂತ ವಿಷಯವನ್ನು ಸರಕಾರಕ್ಕೆ, ಸಾರ್ವಜನಿಕರಿಗೆ ಮುಟ್ಟಿಸುವಂತ ಕೆಲಸ ಇದ್ದರೆ ಅದು ಮಾಧ್ಯಮ ರಂಗ. ಅಂತಹ ನಿಟ್ಟಿನಲ್ಲಿ 16,000 ಜನ ವರದಿಗಾರರಿಗೆ ಅನ್ಯಾಯವಾಗುತ್ತಿದ್ದು, ಅವರಿಗೆ ಯಾವುದೇ ಸರ್ಕಾರದಿಂದ ಗೌರವ ಧನ ಇರುವುದಿಲ್ಲ ಹಾಗೂ ಸುದ್ದಿ ಸಂಗ್ರಹಿಸಲು ಒಂದು ತಾಲೂಕಿನಿಂದ ಇನ್ನೊಂದು ಜಿಲ್ಲಾ ಮತ್ತು ಗ್ರಾಮ ತಾಲೂಕು ಮಟ್ಟಕ್ಕೆ ಹೋಗಬೇಕಾದರೆ ಅವರಿಗೆ ಬಸ್ ಪಾಸಿನ ವ್ಯವಸ್ಥೆ ಇಲ್ಲ.

ಮುಖ್ಯಮಂತ್ರಿಗಳೇ ಪತ್ರಕರ್ತರ ಸಮಸ್ಯೆಗಳನ್ನು ಸಾಲು ಸಾಲು. ಪತ್ರಕರ್ತ ಮಿತ್ರರಿಗೆ ವರದಿಗಾರರಿಗೆ ಪ್ರತಿ ತಿಂಗಳು ಮಾಸಾಸನ ಕಡ್ಡಾಯವಾಗಿ ಮಾಡಬೇಕು. ಅಲ್ಲದೆ ಸಣ್ಣಪುಟ್ಟ ವಾರ, ಪಾಕ್ಷಿಕ, ಮಾಸ ಪತ್ರಿಕೆಗಳಿಗೆ ಸರಕಾರದ ಜಾಹೀರಾತು ಸಿಗುವಂತೆ ಮಾಡಬೇಕು. ಪತ್ರಕರ್ತರು ಅಕಾಲಿಕ ಮರಣ ಹೊಂದಿದಲ್ಲಿ. ಅವರಿಗೆ ಅವರ ಕುಟುಂಬ ಪರಿಹಾರ ನೀಡಬೇಕು. ಸಮಾಜದಲ್ಲಿ ಪತ್ರಕರ್ತರಿಗೆ ವರದಿಗಾರರಿಗೆ ದೊಡ್ಡ ಗೌರವವಿದ್ದು ಸರಕಾರದ ಸೌಲಭ್ಯ ಸಿಗದೇ ವಂಚಿತರಾಗಿದ್ದಾರೆಂದು . ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಅವರು ಸಚಿವರ ಮತ್ತು ಶಾಸಕರ ಮುಖ್ಯಮಂತ್ರಿಗಳ ಮುಂದೆ ತಮ್ಮ ಪತ್ರಕರ್ತರ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅಧಿವೇಶನದಲ್ಲಿ ಪತ್ರಕರ್ತರ ಬಗ್ಗೆ ಧ್ವನಿ ಎತ್ತಲು ಕರ್ನಾಟಕ ಕಾರ್ಯ ನಡೆದ ಪತ್ರಕರ್ತ ಸಂಘ ತಾಲೂಕು ಅಧ್ಯಕ್ಷ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ಅವರು ಮಸ್ಕಿ ಶಾಸಕ ಬಸನಗೌಡ ತುರುವಿಹಾಳ ಅವರಿಗೆ ಮನವಿ ಸಲ್ಲಿಸುವುದರ ಮೂಲಕ ಅಧಿವೇಶನದಲ್ಲಿ ಧ್ವನಿ ಎತ್ತಲು ಮನವಿ ಪತ್ರ ನೀಡಲಾಗಿದ್ದು. ಸರಕಾರದ ಕೊರಳಲ್ಲಿ ಸರಮಾಲೆಯಲ್ಲಿ ಪತ್ರಕರ್ತರು ಎನ್ನುವ ಹಾಗೆ ಸಮಾಜದಲ್ಲಿ ಗೌರವ ಇದ್ದಂತೆ ಸರ್ಕಾರದಿಂದ ಪತ್ರಕರ್ತರಿಗೆ ಸಿಗುವ ಸೌಲಭ್ಯವನ್ನು ಸಿಗಬೇಕೆಂದು 27ರಂದು ಇಡೀ ರಾಜ್ಯದಲ್ಲಿ ಪತ್ರಕರ್ತರ ಜಿಲ್ಲಾ ಪೊಲೀಸ್ ಬೆಳಗಾವಿ ಎಸ್ ಪಿ ಅವರ ಆದೇಶದಂತೆ ಧರಣಿ ಪ್ರತಿಭಟನೆ ಕರ್ನಾಟಕ ಕಾರ್ಯನಿರತ ಧ್ವನಿ ಸಂಘಟ ಪತ್ರಕರ್ತ ಸಾವಿರಾರು ಸಂಖ್ಯೆಯಲ್ಲಿ ಹಾಜರಾಗುತ್ತಿದ್ದು ಪತ್ರಕರ್ತರ ಸವಾಲುಗಳನ್ನು ಸರಕಾರಕ್ಕೆ ಧ್ವನಿ ಮುಟ್ಟಿಸುವ ಕೆಲಸವಾಗಬೇಕೆಂದು ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ಅವರು ಬಂಗ್ಲೆ ಮಲ್ಲಿಕಾರ್ಜುನ್ ಅವರ ಬಗ್ಗೆ ಅವರ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು