ಇತ್ತೀಚಿನ ಸುದ್ದಿ
ರಾಜ್ಯಸಭೆಯಲ್ಲಿ ನಡೆದ ಘಟನೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪುಚುಕ್ಕೆ: ಸಭಾಪತಿ ಕಾಗೇರಿ ಖೇದ
13/08/2021, 19:51
ಬೆಂಗಳೂರು(reporterkarnataka.com): ರಾಜ್ಯಸಭೆಯಲ್ಲಿ ಆಗಸ್ಟ್ 10ರಂದು ನಡೆದ ಅಹಿತಕರ ಘಟನೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪುಚುಕ್ಕೆಯಾಗಿದ್ದು, ಇದರಿಂದಾಗಿ ಇಡೀ ವ್ಯವಸ್ಥೆ ತಲೆತಗ್ಗಿಸುವಂತಾಗಿದೆ. ಯಾವ ರಾಜ್ಯಸಭೆ ದೇಶದ ಸಂವಿಧಾನ ವ್ಯವಸ್ಥೆಗೆ ಮಾದರಿಯಾಗಿರಬೇಕಾಗಿತ್ತೋ ಅದೇ ರಾಜ್ಯಸಭೆಯಲ್ಲಿ ನಡೆದಿರುವ ಗದ್ದಲ, ತಳ್ಳಾಟ, ಮಸೂದೆಗಳ ಪ್ರತಿಗಳನ್ನು ಹರಿದು ಹಾಕಿರುವುದು ತುಂಬಾ ಖೇದಕರ ಪ್ರಸಂಗವಾಗಿದೆ ಎಂದು
ವಿಧಾನ ಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ವಿಧಾನಸೌಧದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ದೇಗುಲದಲ್ಲಿ ನಡೆದಿರುವ ಇಂತಹ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ.
ಇಂತಹ ದುರ್ವರ್ತನೆಗೆ ಕಾರಣರಾದವರ ಮೇಲೆ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಲೋಕಸಭೆ ಅಧ್ಯಕ್ಷರು ಹಾಗೂ ರಾಜ್ಯಸಭೆ ಸಭಾಪತಿಯವರಲ್ಲಿ ವಿನಂತಿಸುವ ಕುರಿತಂತೆ ವಿವರಿಸಿದರು.