ಇತ್ತೀಚಿನ ಸುದ್ದಿ
ರಾಜ್ಯದಲ್ಲಿ ಇಂದು ರಾತ್ರಿ 8ರಿಂದ ನೈಟ್ ಕರ್ಫ್ಯೂ ಜಾರಿ: ಏನಿರತ್ತೆ? ಏನಿರಲ್ಲ?; ಯಾರ‍್ಯಾರು ಓಡಾಡಬಹುದು?
07/01/2022, 14:29
ಬೆಂಗಳೂರು(reporterkarnataka.com): ರಾಜ್ಯದಲ್ಲಿ ಒಮಿಕ್ರಾನ್ ಹಾವಳಿ ಹೆಚ್ಚಾಗುತ್ತಿದೆ ಎಂದು ಹೇಳಿರುವ ರಾಜ್ಯ ಸರಕಾರ ಇಂದು ರಾತ್ರಿ 8 ಗಂಟೆಯಿಂದ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದೆ.
ರಾತ್ರಿ 8ರಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ಕರ್ಫ್ಯೂ ಇರಲಿದೆ.
ಏನಿರತ್ತೆ? ಏನಿರಲ್ಲ?: ವೀಕೆಂಡ್ ಕರ್ಫ್ಯೂ ವೇಳೆ ಹೋಟೆಲ್‌ಗಳಲ್ಲಿ ಪಾರ್ಸೆಲ್, ಅತ್ಯಗತ್ಯ ಸೇವೆಗಳು, ವೈದ್ಯಕೀಯ ಸೇವೆಗಳು, ಬಿಎಂಟಿಸಿ ಬಸ್ ಸಂಚಾರ ಇರುವುದಿಲ್ಲ.
ಯಾರ‍್ಯಾರು ಓಡಾಡಬಹುದು?: ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ಯೋಗಿಗಳು, ಕಾರ್ಪೋರೇಷನ್ ಸಿಬ್ಬಂದಿ, ಪೊಲೀಸ್, ಹೋಂ ಗಾರ್ಡ್, ಸಿವಿಲ್ ಡಿಫೆನ್ಸ್, ಅಗ್ನಿಶಾಮಕ ದಳ ಸಿಬ್ಬಂದಿ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ವೈದ್ಯರು, ಸಿಬ್ಬಂದಿ,ಲ್ಯಾಬ್ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಆಸ್ಪತ್ರೆಗೆ ತೆರಳುವ ರೋಗಿಗಳು ಅವರನ್ನು ಕರೆದುಕೊಂಡು ಹೋಗುವವರು. ಮಾಧ್ಯಮದಲ್ಲಿ ಕೆಲಸ ಮಾಡುವವರು. ದೂರದ ಊರುಗಳಿಗೆ ತೆರಳುವವರು ಬಸ್ ಹಾಗೂ ರೈಲು ಟಿಕೆಟ್ ತೋರಿಸಿ ಓಡಾಡಬಹುದು. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಟಿಕೆಟ್ ತೋರಿಸಿ ಓಡಾಡಬಹುದು.