6:11 PM Wednesday3 - December 2025
ಬ್ರೇಕಿಂಗ್ ನ್ಯೂಸ್
ಮಂಗಳೂರಿಗೆ ಆಗಮಿಸಿದ ಕೆ.ಸಿ. ವೇಣುಗೋಪಾಲ್: ಡಿಕೆ ಪರ ಘೋಷಣೆ ಕೂಗಿದ ಕೈ ಕಾರ್ಯಕರ್ತರು Kodagu | ವಿರಾಜಪೇಟೆಯ ಕರಡಿಗೋಡುನಲ್ಲಿ ಕಾಡಾನೆಗಳ ಉಪಟಳ: ಬೆಳೆ ನಾಶ ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ…

ಇತ್ತೀಚಿನ ಸುದ್ದಿ

ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ನಿಶ್ಚಿತ: ಜೆಡಿಎಸ್ ಜಿಲ್ಲಾಧ್ಯಕ್ಷ ಜಾಕೆ

13/12/2022, 16:23

ಮಂಗಳೂರು(reporterkarnataka.com): ರಾಜ್ಯದಲ್ಲಿ ಪಂಚ ರತ್ನ ರಥ ಯಾತ್ರೆಯ ಪೂರ್ವ ತಯಾರಿ ಯಾಗಿ ಮಂಗಳೂರು ದಕ್ಷಿಣ ವಿದಾನ ಸಭಾ ಕ್ಷೇತ್ರದ ಜಾತ್ಯತೀತ ಜನತಾದಳದ ಪ್ರಚಾರ ಚಾಲನೆಯನ್ನು ಕದ್ರಿ ಮಂಜುನಾಥ ಸ್ವಾಮಿಯ ದೇವಸ್ಥಾನದ ಆವರಣದಲ್ಲಿ ಜಿಲ್ಲಾ ಅಧ್ಯಕ್ಷ ಜಾಕೆ ಮಾಧವ ಗೌಡ ನೀಡಿದರು.

2023 ರ ಚುನಾವಣೆಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ನಿಶ್ಚಿತ. ಅವರ ಜಲಧಾರೆ ಹಾಗೂ ಪಂಚ ರತ್ನ ಯೋಜನೆ ಈ ರಾಜ್ಯದ ನವ ನಿರ್ಮಾಣದ ಕಲ್ಪನೆ. ರಾಜ್ಯದ ಮೂಲೆ ಮೂಲೆಗಳಿಂದ ಸಂಪೂರ್ಣ ಬೆಂಬಲ ದೊರಕುತ್ತಿದು ವಿರೋಧ ಪಕ್ಷಗಳು ಭಯಬೀತರಾಗಿದಾರೆ ಎಂದು ಹೇಳಿದರು. ಹಾಗೂ ದಕ್ಷಿಣ ವಿದಾನ ಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಯಾಗಿ ಸುಮತಿ ಹೆಗ್ಡೆ ಎಂದು ಅಯ್ಕೆ ಮಾಡಲಾಗಿದೆ ಎಂದು ಹೇಳಿದರು.
ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು ಹಾಗೂ ನಿಯೋಜಿತ ಅಭ್ಯರ್ಥಿ ಸುಮತಿ ಹೆಗ್ಡೆ ಮಾತನಾಡಿ, ಕುಮಾರಸ್ವಾಮಿಯ ಆದೇಶದ ಮೇರೆಗೆ ಈ ಕಾರ್ಯಕ್ರಮ ಆಯೋಜಿಸಿದ್ದು, ವಿಧಾನಸಭಾ ಕ್ಷೇತ್ರದ 38 ವಾರ್ಡಗಳಲ್ಲಿ ಪ್ರಚಾರ ಜಾಥಾ ಸಂಚರಿಸಲಿದೆ. ಹಾಗೂ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಬೇಟಿ ನೀಡಲಿದೆ ಎಂದು ಹೇಳಿದರು.

ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹಾ ಮಾತನಾಡಿ, ಬಿಜೆಪಿ ಪಕ್ಷ ಜನರಲ್ಲಿ ಭಯ ಭೀತಿ ದ್ವೇಷ ಹಾಗೂ ಭ್ರಷ್ಟಾಚಾರ , ಬೆಲೆ ನಿಯಂತ್ರಣ ಮಾಡಲು ಸಂಪೂರ್ಣ ಸೋತಿದ್ದು ಇನೊಂದೆಡೆ ಕಾಂಗ್ರೆಸ್ ಅಧಿಕಾರ ಪಡೆದ ಹಾಗೆ ತಿರುಕನ ಕನಸು ಕಂಡಿದ್ದು ಮುಖ್ಯಮಂತ್ರಿ ಪೈಪೋಟಿಯಲ್ಲಿ ತೊಡಗಿದೆ. ಆದರೆ ಜೆಡಿಎಸ್ ಪಕ್ಷ ಜನ ಸಾಮಾನ್ಯರ ಕಷ್ಟ ಅರಿತುಕೊಳ್ಳಲು ಪಂಚ ರತ್ನ ಯೋಜನೆ ಮೂಲಕ ಜನರ ಜೊತೆಯಲ್ಲಿ ಮಗ್ನರಾಗಿದೆ ಎಂದು ಹೇಳಿದರು.

ರಾಜ್ಯ ಜೆಡಿಎಸ್ ನಾಯಕರಾದ ರತ್ನಾಕರ ಸುವರ್ಣ, ಜಮೀರ್ ಷಾ, ಇಕ್ಬಾಲ್ ಮುಲ್ಕಿ. ದಿನಕರ್ ಉಳ್ಳಾಲ್ ಕಡಬ ಕ್ಷೇತ್ರದ ಅಧ್ಯಕ್ಷ ಮೀರಾ ಸಾಹೇಬ್,ಯುವ ನಾಯಕ ಪೈಜಾಲ್ ಮುಂತಾದವರು ಮಾತನಾಡಿದರು. ಕನಕದಾಸ ಕುಳೂರ್, ಮುನೀರ್ ಮುಕ್ಕಚೇರಿ, ವಿನ್ಸೆಂಟ್ ಕೋಡಿಕಲ್, ಅಲ್ತಾಫ್ ತುಂಬೆ,ರವೀಂದ್ರ ಉಳ್ಳಾಲ ವೀಣಾ ಶೆಟ್ಟಿ, ಭಾರತೀ ಪುಷ್ಪರಾಜನ್, ಪ್ರಿಯಾ ಸಾಲಿಯಾನ್, ಶ್ರೀಮಣಿ, ಕವಿತಾ ಜೋಹರ್. ಬಸೀರ್ ಬೇಗಂ, ಲತೀಫ್ ವಳಚೀಲ್, ಎಚ್.ಕೆ.ಚಂದ್ರಶೇಖ ರ್ ಸುಮೀತ್ ಸುವರ್ಣ,ನಾಸಿರ್ ಬೆಂಗ್ರೆ, ರಾಶ್ ಬ್ಯಾರಿ, ನೀಲಂ, ಬಸವರಾಜ್, ಮನೋಜ್, ಜಾವೇದ್ ನಜೀರ್, ಯುವ ಜನತಾ ದಳ ವಿಧ್ಯಾರ್ಥಿ ಅಧ್ಯಕ್ಷ ಬಿಲಾಲ್,ಮಹಮದ್ ಉಪಸ್ಥಿತಿತರಿದರು. ಅಲ್ತಾಫ್ ತುಂಬೆ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು