ಇತ್ತೀಚಿನ ಸುದ್ದಿ
ರಾಜೀವ್ ಪುಣ್ಯತಿಥಿ ಅಂಗವಾಗಿ ಮೆರಿಲ್ ರೇಗೊ ನೇತೃತ್ವದಲ್ಲಿ ವಿಕಲಚೇತನರಿಗೆ ಆಹಾರ ಕಿಟ್
22/05/2021, 20:23
ಮಂಗಳೂರು(reporterkarnataka news);ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆ ದಿನದ ಅಂಗವಾಗಿ ಇಂದು ಯೂತ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮೆರಿಲ್ ರೇಗೊ ನೇತೃತ್ವದಲ್ಲಿ ವಿಕಲಚೇತನರಿಗೆ ಆಹಾರ ಕಿಟ್ ವಿತರಿಸಲಾಯಿತು.
ರೇಗೊ ತನ್ನ ಉತ್ಸಾಹಿ ಯುವಕರ ತಂಡದೊಂದಿಗೆ ಮಂಗಳೂರಿನ ವೇಲೆನ್ಸಿಯಾ ಪರಿಸರದಲ್ಲಿ ವಿಕಲಚೇತನರನ್ನು ಗುರುತಿಸಿ, ಮನೆ ಮನೆಗೆ ತೆರಳಿ ಆಹಾರ ಸಾಮಗ್ರಿಗಳ ಕಿಟ್ ನ್ನು ನೀಡುವುದರೊಂದಿಗೆ ದಿವಗಂತ ರಾಜೀವ್ ಗಾಂಧಿಯನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ನಗರ ದಕ್ಷಿಣ ಯುವ ಕಾಂಗ್ರೆಸ್ ಅಧ್ಯಕ್ಷ ಸುನೀಲ್ ಪೂಜಾರಿ, ಮಂಗಳೂರು ನಗರ ಉತ್ತರ ಯುವ ಕಾಂಗ್ರೆಸ್ ಅಧ್ಯಕ್ಷ ರಾಕೇಶ್ ದೇವಾಡಿಗ, ದಕ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಲಾರೆನ್ಸ್ ಡಿಸೋಜ, ಆಸಿಫ್ ಬಜಾಲ್, ಹರೀಶ್ ಪೂಜಾರಿ, ರಂಜನ್ ಅತ್ತಾವರ ಉಪಸ್ಥಿತರಿದ್ದರು.