ಇತ್ತೀಚಿನ ಸುದ್ದಿ
ರಾಜಕೀಯ ತೆವಳಿಗೆ ಆರಾಧ್ಯ ದೇವರಿಗೆ ಅವಮಾನ ಮಾಡಿದರೆ ಕ್ಷಮೆ ಇರದು: ಜೆಡಿಎಸ್ ಮುಖಂಡೆ ಡಾ. ಸುಮತಿ ಹೆಗ್ಡೆ
24/02/2023, 23:39
ಮಂಗಳೂರು(reporterkarnataka.com): ಶತಮಾನಗಳಿಂದ ತುಳುನಾಡ ಜನರು ಆರಾಧಿಸುತ್ತಾ ಬಂದಿರುವ ನಾಗಬನ , ಪಂಜುರ್ಲಿ ದೈವಗಳ ಹೆಸರಲ್ಲಿ ತನ್ನ ರಾಜಕೀಯ ತೆವಳು ತೀರಿಸುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿಯವರ ನಡೆಯು ತುಳುನಾಡ ಜನರಿಗೆ ಅತ್ಯಂತ ನೋವನ್ನು ತಂದಿದೆ ಎಂದು ಜೆಡಿಎಸ್ ಮಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರದ ಅಧ್ಯಕ್ಷೆ ಸುಮತಿ ಎಸ್. ಹೆಗ್ಡೆ ಹೇಳಿದ್ದಾರೆ.
ಆಚಾರ ವಿಚಾರವಿಲ್ಲದ ಜನರಿಂದ ಮಾತ್ರ ಇಂತಹ ನಡೆಯನ್ನು ನಿರೀಕ್ಷೆ ಮಾಡಬಹುದು. ಅದೇ ರೀತಿ ತುಳು ಭಾಷೆಯ ಬಗ್ಗೆ ವ್ಯಂಗ್ಯವಾಗಿ ಮಾತಾಡಿದ ಸಚಿವ ಮಾಧುಸ್ವಾಮಿಯವರು ಕೂಡ ತಮ್ಮ ನೈಜ ಸ್ವಭಾವವನ್ನು ವ್ಯಕ್ತಪಡಿಸುತ್ತಿದ್ದಾರೆ.ಈ ರೀತಿಯ ರಾಜಕಾರಣವು ಅತ್ಯಂತ ಕೀಳು ಮಟ್ಟದ್ದಾಗಿದೆ. ಇದರ ಗಂಭೀರ ಪರಿಣಾಮವನ್ನು ಬರುವ ಚುನಾವಣೆಯಲ್ಲಿ ಎದುರಿಸಬೇಕಾದಿತು ಎಂದು
ಡಾ ಸುಮತಿ ಹೆಗ್ಡೆ ಅವರು ಎಚ್ಚರಿಸಿದ್ದಾರೆ.