12:15 AM Tuesday22 - October 2024
ಬ್ರೇಕಿಂಗ್ ನ್ಯೂಸ್
ಸುರತ್ಕಲ್ ಎನ್ ಐಟಿಕೆ: ಯುವ ಸ್ಕೌಟ್ಸ್ ಮತ್ತು ಗೈಡ್ಸ್ ಸಂಪರ್ಕಿಸುವ ‘ಜಂಬೋರಿ ಆನ್… ರೈಲ್ವೆ ಹಳಿ ಮೇಲೆ ಕಲ್ಲು ಇಟ್ಟ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ: ಸಂಸದ ಕ್ಯಾ.… ಕ್ರೂರ ವಿಧಿಯಾಟ: ಮದುವೆ ನಿಶ್ಚಿತಾರ್ಥವಾದ ಯುವತಿ ರಸ್ತೆ ಅಪಘಾತಕ್ಕೆ ಬಲಿ; ಮುಂದಿನ ತಿಂಗಳು… ಚಿಕ್ಕಮಗಳೂರು: ಭಾರೀ ಮಳೆ; ಜನಜೀವನ ಅಸ್ತವ್ಯಸ್ತ; ಸಿಡಿಲಿಗೆ ಎತ್ತು ಬಲಿ ವಿಜ್ಞಾನ ಮೇಳ: ಸೆನ್ಸಾರ್ ಆಧಾರಿತ ಮಾದರಿಯಲ್ಲಿ ಸೇವಾ ಭಾರತಿ ವಿದ್ಯಾರ್ಥಿ ನಹುಷ್ ಪ್ರಥಮ ಏಷ್ಯಾದ ಗೇಮಿಂಗ್ ಮತ್ತು ಅನಿಮೇಷನ್ ರಾಜಧಾನಿಯಾಗುವುದು ಕರ್ನಾಟಕದ ಗುರಿ: ಐಜಿಸಿ 2024ರಲ್ಲಿ ಸಚಿವ… ಬಿಳಾಲುಕೊಪ್ಪ-ಬಸರೀಕಟ್ಟೆ ರಸ್ತೆ ಕೆಸರುಮಯ: ಬಸ್ ಸಂಚಾರ ಸ್ಥಗಿತ, ಪ್ರಯಾಣಿಕರ ಪರದಾಟ ಅ.19-21: ಎಸಿಪಿಐ ಮತ್ತು ಮಂಗಳೂರು ವಿವಿ ಕ್ರೈಸ್ತ ವಿದ್ಯಾಪೀಠದಿಂದ 47ನೇ ವಾರ್ಷಿಕ ಸಂಶೋಧನಾ… ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ: ಪ್ರಬಲ ಹೋರಾಟಕ್ಕೆ ಸಜ್ಜು ಸೈಂಟ್ ಜೋಸೆಫ್ ವಿಶ್ವವಿದ್ಯಾನಿಲಯಕ್ಕೆ ಹಳೆ ವಿದ್ಯಾರ್ಥಿನಿ, ಮಾಲ್ಡೀವ್ಸ್ ಗಣರಾಜ್ಯದ ಪ್ರಥಮ ಮಹಿಳೆ ಸಾಜಿದಾ…

ಇತ್ತೀಚಿನ ಸುದ್ದಿ

ರೈಲ್ವೆ ಹಳಿ ಮೇಲೆ ಕಲ್ಲು ಇಟ್ಟ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ: ಸಂಸದ ಕ್ಯಾ. ಬ್ರಿಜೇಶ್ ಚೌಟ ಒತ್ತಾಯ

21/10/2024, 23:32

ಮಂಗಳೂರು(reporterkarnataka.com): ಮಂಗಳೂರು-ಕೇರಳ ಮಾರ್ಗವಾದ ಉಳ್ಳಾಲದ ತೊಕ್ಕೊಟ್ಟು ರೈಲ್ವೆ ಓವರ್‌ ಬ್ರಿಡ್ಜ್‌ ಹಳಿ ಮೇಲೆ ಕಲ್ಲುಗಳನ್ನು ಇಟ್ಟು ಅಪಾಯಕಾರಿ ಕೃತ್ಯವೆಸಗಿರುವುದು ಗಂಭೀರ ವಿಚಾರವಾಗಿದ್ದು, ಪೊಲೀಸರು ಕೂಡಲೇ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಕ್ಯಾ. ಚೌಟ ಅವರು, ರೈಲ್ವೆ ಹಳಿ ಮೇಲೆ ಕಲ್ಲು ಇಟ್ಟು ವಿಕೃತಿ ಮೆರೆದಿರುವ ಈ ಕೃತ್ಯದ ಬಗ್ಗೆ ಈಗಾಗಲೇ ನಾನು ಸಂಬಂಧಪಟ್ಟ ಪೊಲೀಸರು ಹಾಗೂ ರೈಲ್ವೆ ಇಲಾಖೆ ರಕ್ಷಣಾ ಪಡೆ(RPF) ಅಧಿಕಾರಿಗಳ ಜತೆ ಮಾತನಾಡಿದ್ದೇನೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಈ ರೀತಿಯ ಘಟನೆ ನಡೆಯುತ್ತಿದೆ. ರೈಲ್ವೆ ಇಲಾಖೆಗೆ ಸೇರಿದ ನಮ್ಮ ರಾಷ್ಟ್ರೀಯ ಸಂಪತ್ತಿನ ಮೇಲೆ ಈ ರೀತಿ ದಾಳಿ ಮಾಡಿ ಅದನ್ನು ಹಾನಿಗೊಳಿಸುವುದಕ್ಕೆ ಪ್ರಯತ್ನಿಸಿರುವುದು ದೇಶದ್ರೋಹದ ಕೆಲಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರು ಕೂಡ ನಮ್ಮ ರಾಷ್ಟ್ರೀಯ ಸಂಪತ್ತುಗಳನ್ನು ನಮ್ಮ ಸೊತ್ತು ಎನ್ನುವ ರೀತಿಯಲ್ಲಿ ರಕ್ಷಿಸುವ ಕೆಲಸವನ್ನು ಮಾಡಬೇಕು. ಜತೆಗೆ, ಸಮಾಜದಲ್ಲಿ ಈ ರೀತಿಯ ಮಾನಸಿಕತೆ ಹೊಂದಿರುವ ವ್ಯಕ್ತಿಗಳು ಯಾರಿದ್ದಾರೆಯೋ ಅಂಥಹ ದೇಶದ್ರೋಹಿಗಳನ್ನು ಗುರುತಿಸುವ ಕೆಲಸವನ್ನು ಜನತೆ ಕೂಡ ಮಾಡಬೇಕೆಂದು ಕ್ಯಾ. ಚೌಟ ಅವರು ಮನವಿ ಮಾಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು