5:27 PM Monday6 - October 2025
ಬ್ರೇಕಿಂಗ್ ನ್ಯೂಸ್
ಹರ್ಷಿಕಾ ಪೂಣಚ್ಚ – ಭುವನ್ ದಂಪತಿ ಮಗುವಿನ ಮೊದಲ ವರ್ಷದ ಹುಟ್ಟುಹಬ್ಬ: ಹರಿದು… Madikeri | ವಿರಾಜಪೇಟೆ: ಹೆಂಡತಿ ಜತೆ ಜಗಳವಾಡಿ ಮನೆಬಿಟ್ಟು ತೆರಳಿದ್ದ ವ್ಯಕ್ತಿ ಶವವಾಗಿ… ಕುಶಾಲನಗರ: ಸಂಬಂಧಿಕರ ಸಾವಿಗೆ ತೆರಳಿದ್ದ ಯುವಕ ಹಾರಂಗಿ ಮುಖ್ಯ ನಾಲೆಯಲ್ಲಿ ಈಜಲು ಹೋಗಿ… ಮೈಸೂರು ದಸರಾ ಜಂಬೂ ಸವಾರಿ: ಚಿತ್ರದುರ್ಗದ ಸ್ತಬ್ದಚಿತ್ರಕ್ಕೆ ಪ್ರಥಮ ಸ್ಥಾನ ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ

ಇತ್ತೀಚಿನ ಸುದ್ದಿ

ರೈಲಿನಲ್ಲೇ ಕೂತು ಪಶ್ಚಿಮಘಟ್ಟ ಸೊಬಗು ಆಸ್ವಾದಿಸಿ!: ಗಾಜಿನ ಚಾವಣಿಯಬೆಂಗಳೂರು- ಮಂಗಳೂರು ಟ್ರೈನ್ ಜು.7ರಂದು ಆರಂಭ

04/07/2021, 19:13

ಮಂಗಳೂರು(reporterkarnataka news): ಶಿರಾಡಿ ಘಾಟಿಯ ಪ್ರಕೃತಿ ಸೌಂದರ್ಯವನ್ನು ಅಸ್ವಾದಿಸಲು ಗಾಜಿನ ಛಾವಣಿ(ವಿಸ್ಟಾಡೋಮ್) ಹೊಂದಿರುವ ಬೋಗಿಗಳನ್ನೊಳಗೊಂಡ ಬೆಂಗಳೂರು- ಮಂಗಳೂರು ರೈಲು ಸಂಚಾರ ಜುಲೈ 7ರಿಂದ ಆರಂಭವಾಗಲಿದೆ.

ಬೆಂಗಳೂರು- ಮಂಗಳೂರು ಮಧ್ಯೆ ಸಂಚರಿಸುವ ಮೂರು ರೈಲುಗಳ ದ್ವಿತೀಯ ದರ್ಜೆಯ ಬೋಗಿಯನ್ನು ತೆಗೆದು ತಲಾ ಎರಡು ವಿಸ್ಟಾಡೋಮ್ ಬೋಗಿಗಳನ್ನು ಜೋಡಿಸಲಾಗುತ್ತದೆ. ಇದರಿಂದ ಸಕಲೇಶಪುರ ಹಾಗೂ ಸುಬ್ರಹ್ಮಣ್ಯ ರೋಡ್ ನಿಲ್ದಾಣದವರೆಗೆ 56 ಕಿಮೀ. ಉದ್ದದ ಹಚ್ಚ ಹಸಿರಿನ ಪ್ರಕೃತಿ ಸೌಂದರ್ಯ, ನದಿ, ತೊರೆ, ಜಲಪಾತಗಳು ಸೊಬಗನ್ನು ಪ್ರಯಾಣಿಕರು ಆಸ್ವಾದಿಸಬಹುದಾಗಿದೆ.

ಗಾಜಿನ ಚಾವಣಿಯ ಬೋಗಿಯೊಳಗೆ 360 ಡಿಗ್ರಿಯಲ್ಲಿ ಸುತ್ತುವ ಆಸನದ ವ್ಯವಸ್ಥೆ ಅಳವಡಿಸಲಾಗಿದೆ. ಪಾರದರ್ಶಕ ಗಾಜಿನ ಕೋಚ್ ಆಗಿರುವುದರಿಂದ ಪ್ರಯಾಣಿಕರು ತನ್ನ ಇಕ್ಕಲೆಗಳ ಪ್ರಕೃತಿ ಸೊಬಗಿನ ಜತೆಗೆ ಎತ್ತರದ ಬೆಟ್ಟ, ಗಿರಿ, ಕಾನನ ಹಾಗೂ ಜಲಪಾತಗಳ ವೈಭವವನ್ನು ಕುಳಿತಲ್ಲೇ ಸವಿಯಬಹುದಾಗಿದೆ. ಬೋಗಿಯಲ್ಲಿ ಜಿಪಿಎಸ್ ಆಧಾರಿತ ಮಾಹಿತಿ ವ್ಯವಸ್ಥೆ, ಮೈಕ್ರೋ ಓವೆನ್, ಸಣ್ಣ ಫ್ರಿಡ್ಜ್ ಮತ್ತು ಎಸಿ ಸೌಲಭ್ಯವಿರುತ್ತದೆ. ಟಿಕೆಟ್ ದರ 1470 ರೂ. ನಿಗದಿಪಡಿಸಲಾಗಿದೆ. ಮೊದಲ ರೈಲು ಜುಲೈ 7ರಂದು ಯಶವಂತಪುರ ಜಂಕ್ಷನ್ ನಿಂದ ಹೊರಡಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು