8:33 PM Saturday2 - August 2025
ಬ್ರೇಕಿಂಗ್ ನ್ಯೂಸ್
Bangaluru | ನಮ್ಮ ಮೆಟ್ರೋದಲ್ಲಿ ಮೊದಲ ಬಾರಿಗೆ ಯಕೃತ್‌ ರವಾನೆ: ಸ್ಪರ್ಶ್‌ ಆಸ್ಪತ್ರೆಯಲ್ಲಿ… ರಾಹುಲ್ ಗಾಂಧಿ ನೀಡಿರುವ ‘ಮತ ಕಳ್ಳತನ’ ಪದವು ಭಾರತೀಯ ರಾಜಕೀಯ ಶಬ್ದಕೋಶಕ್ಕೆ ಸೇರ್ಪಡೆ:… ಸ್ಪಾಟ್ 1ರಲ್ಲಿ ದೊರೆತ ಡೆಬಿಟ್, ಪಾನ್ ಕಾರ್ಡ್ ವಾರಸುದಾರರು ಪತ್ತೆ; ಧರ್ಮಸ್ಥಳ ಪ್ರಕರಣಕ್ಕೂ… ಚುನಾವಣೆಯಲ್ಲಿ ಅಕ್ರಮಗಳನ್ನು ಪರಿಚಯಿಸಿದ್ದೇ ಕಾಂಗ್ರೆಸ್‌: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆರೋಪ ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿಯವರ ಬಳಿ ಸಾಕ್ಷಿ ಇದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತಗಳ್ಳತನದ ವಿರುದ್ಧ ರಾಹುಲ್ ನೇತೃತ್ವದಲ್ಲಿ ಆ.5ರಂದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ: ಡಿಸಿಎಂ… ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಮುಂದುವರಿಯಲಿರುವ ಉತ್ಖನನ ಪ್ರಕ್ರಿಯೆ; ತಾತ್ಕಾಲಿಕ ಶೆಡ್ ನಿರ್ಮಾಣ ಶಿರೂರು ಗುಡ್ಡ ಕುಸಿತ ದುರಂತ ಕಥನ ಬೆಳ್ಳಿತೆರೆ ಮೇಲೆ ನೋಡಿ: ಮಲಯಾಳಂನಲ್ಲಿ ಸಿನಿಮಾ… ಮೈಸೂರಿನಲ್ಲಿ ನಿಷೇಧಿತ ಎಂಡಿಎಂಎ ಡ್ರಗ್ಸ್ ತಯಾರಿಕಾ ಘಟಕ ಪತ್ತೆ: ಸಂಸತ್ ನಲ್ಲಿ ಯದುವೀರ್… 3 ವರ್ಷ ಬಳಿಕ ಯಾವ ಪಕ್ಷದಿಂದ ಸ್ಪರ್ಧಿಸುತ್ತೇನೋ ಗೊತ್ತಿಲ್ಲ: ಶಾಸಕಿ ನಯನಾ ಮೋಟಮ್ಮ…

ಇತ್ತೀಚಿನ ಸುದ್ದಿ

Raichuru | ಮಸ್ಕಿ ಶ್ರೀ ಚಿಕ್ಕ ಅಂತರಗಂಗೆ ದುರ್ಗಾದೇವಿ ಜಾತ್ರೆ: ಹರಿದು ಬಂದ ಭಕ್ತ ಸಾಗರ

28/05/2025, 21:46

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ಮಸ್ಕಿ ತಾಲೂಕಿನ ಅಂತರಗಂಗೆ ಗ್ರಾಮದ ಶ್ರೀ ಚಿಕ್ಕ ಅಂತರಗಂಗೆಯಲ್ಲಿ ನೆಲೆಸಿರುವ ಬಳ್ಳಾರಿ ದುರ್ಗಮ್ಮ ಎಂದು ಪ್ರಸಿದ್ಧಿಯಾಗಿದ್ದ ಶ್ರೀ ದುರ್ಗಾದೇವಿ ಜಾತ್ರೆ ಅದ್ದೂರಿಯಾಗಿ ಮಂಗಳವಾರ ನಡೆಯಿತು.


ನಡೆದಾಡುವ ದೇವರು ಬಳ್ಳಾರಿ ದುರ್ಗಮ್ಮ ಹೆಸರುವಾಸಿಯಾಗಿ ತನ್ನದೇ ಆದ ಒಂದು ಇತಿಹಾಸವಿದೆ. ಅಂತಹ ಶ್ರೀ ದುರ್ಗಾದೇವಿ ಜಾತ್ರೆ ಐದು ವರ್ಷಕ್ಕೊಮ್ಮೆ ನಡೆಯುತ್ತದೆ.
ಏಳು ಊರಿನ ಗೌಡರು ಸೇರಿ ಈ ಜಾತ್ರೆ ಅದ್ದೂರಿಯಿಂದ ಸಡಗರದಿಂದ ಮಾಡುತ್ತಾರೆ. ಭಕ್ತರು ತಮ್ಮ ಹರಕೆಗಳನ್ನು ತೀರಿಸಿಕೊಳ್ಳಲು ದೇವರಿಗೆ ತಮ್ಮ ಮುಡುಪನ್ನು ಅರ್ಪಿಸುವ ದೃಶ್ಯ ಕಂಡು ಬಂತು. ಭಕ್ತಿಯಿಂದ ಬೇಡಿಕೊಳ್ಳುವ ದೃಶ್ಯ ಕಂಡ ಬಂತು.
ಭಜನೆ, ಮಂಗಳಾರತಿ, ರುದ್ರಾಭಿಷೇಕ ವಾದ್ಯಗಳೊಂದಿಗೆ ಭಕ್ತರು ಕಳಸ ಕನ್ನಡಿ ಡೊಳ್ಳು ಕುಣಿತದೊಂದಿಗೆ ಜೈಕಾರದೊಂದಿಗೆ ಹುಚ್ಚಯ್ಯ ಕಾರ್ಯಕ್ರಮ ಜರಗಿತು.
ಸುತ್ತಮುತ್ತಲಿನ ಗ್ರಾಮಗಳಾದ ಗೊಲ್ಲರಟ್ಟಿ, ಮ್ಯಾದಹಾಳು, ಅಂತರಗಂಗೆ, ನಾಗರಬೆಂಚಿ, ಮೆದಿಕಿನಾಳ, ಬೈಲಗುಡ್ಡ ಹಾಗೂ ತಾಂಡ ದೊಡ್ಡಿಗಳಿಂದ ಭಕ್ತರ ಆಗಮಿಸಿ ತಮ್ಮ ತನು ಮನ ಧನದಿಂದ ದುರ್ಗಾದೇವಿ ಪೂಜಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು