1:58 AM Monday15 - July 2024
ಬ್ರೇಕಿಂಗ್ ನ್ಯೂಸ್
ಜನಪ್ರತಿನಿಧಿಗಳ ಬೆಂಬಲದ ಖಾಸಗೀ ಶಿಕ್ಷಣ ಸಂಸ್ಥೆಗಳ ಲಾಬಿಗೆ ಸರಕಾರಿ ಕಾಲೇಜುಗಳು ಬಲಿ: ಮುನೀರ್… ಅವ್ಯವಸ್ಥೆಯ ಆಗರವಾದ ಕಲಬುರಗಿಯ ಹಲಕರ್ಟಿ ಗ್ರಾಮ!: 12 ಜನ ಚುನಾಯಿತ ಸದಸ್ಯರಿದ್ದರೂ ಗ್ರಾಮದಲ್ಲಿ… ಮಂಗಳೂರು ಎಂಎಸ್ ಪಿಟಿಸಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ದಿಢೀರ್ ಭೇಟಿ: ಅಂಗನವಾಡಿಗಳಿಗೆ ಗುಣಮಟ್ಟದ… ಮಂಗಳೂರು ವಿವಿಯಲ್ಲಿ ಸ್ವತಂತ್ರ ತುಳು ಅಧ್ಯಯನ ವಿಭಾಗ: ಉನ್ನತ ಶಿಕ್ಷಣ ಸಚಿವರಿಗೆ ಸಿಂಡಿಕೇಟ್… ಪೊಲೀಸ್ ಠಾಣೆಗಳಲ್ಲಿ ಸಿಸಿ ಕ್ಯಾಮೆರಾ, ಬಯೋಮೆಟ್ರಿಕ್ ಅಳವಡಿಕೆಗೆ ಜಿಲ್ಲಾಧಿಕಾರಿಗೆ ಮನವಿ ಮಹರ್ಷಿ ವಾಲ್ಮೀಕಿ ನಿಗಮ ಹಗರಣ: ಮಾಜಿ ಸಚಿವ ನಾಗೇಂದ್ರ ಇಡಿ ವಶಕ್ಕೆ; ಬಂಧನ… ಪ್ರಧಾನಿ ಮೋದಿ ಆಸ್ಟ್ರಿಯಾ ಭೇಟಿ: ರಾಜಧಾನಿ ವಿಯೆನ್ನಾದಲ್ಲಿ ಭರ್ಜರಿ ಸ್ವಾಗತ; ಚಾನ್ಸೆಲರ್ ಕಾರ್ಲ್… 11 ಅಕ್ರಮ ಆಸ್ತಿ ಪ್ರಕರಣ: ರಾಜ್ಯಾದ್ಯಂತ 56 ಕಡೆಗಳಿಗೆ ಲೋಕಾಯುಕ್ತ ದಾಳಿ; 100… ಸರಕಾರಿ ಶಾಲೆ ನೂತನ ಕಟ್ಟಡದ ಮೇಲ್ಚಾವಣಿ ಕುಸಿತ: 1ನೇ ತರಗತಿ ವಿದ್ಯಾರ್ಥಿ ತಲೆಗೆ… ವಿಜಯಪುರ: ಸಾಲಬಾಧೆಯಿಂದ ಕಂಗೆಟ್ಟು ಕಾಮನಕೇರಿ ಗ್ರಾಮದ ರೈತ ನೇಣಿಗೆ ಶರಣು

ಇತ್ತೀಚಿನ ಸುದ್ದಿ

ರಾಹುಲ್ ಗಾಂಧಿ ಹಿಂದುತ್ವವನ್ನು ಟೀಕಿಸಿಲ್ಲ, ಅವರು ಮಾತನಾಡಿದ್ದು ಬಿಜೆಪಿ ಹಿಂದುತ್ವ ಬಗ್ಗೆ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ

10/07/2024, 18:02

ಮಂಗಳೂರು(reporterkarnataka.com): ಶಂಕರಾಚಾರ್ಯ ಮಠದ ಪೀಠಾಧಿಪತಿಗಳು ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯವರ ಭಾಷಣದಲ್ಲಿ ಯಾವುದೇ ಹಿಂಸಾಚಾರದ ವಿಚಾರಗಳು ಇಲ್ಲ ಎಂದು ಹೇಳಿಕೆ ನೀಡಿದ ಮೇಲೂ ಶಾಸಕ ಡಾ. ಭರತ್ ಶೆಟ್ಟಿ ಯವರು ಅದರ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದರೆ ಇವರು ಪೀಠಾಧಿಪತಿಗಳ ವಿರೋಧಿಗಳಲ್ಲವೇ..? ಇವರು ಹಿಂದೂ ಪೀಠಾಧಿಪತಿಗಳ ವಿರೋಧಿಯೇ?
ರಾಹುಲ್ ಗಾಂಧಿಯವರು ದೇಶದಾದ್ಯಂತ ಸಂಘಪರಿವಾರ , ಬಿಜೆಪಿ ಹಿಂದುತ್ವದ ಸಿದ್ಧಾಂತದ ಹೆಸರಿನಲ್ಲಿ ಹಿಂಸಾಚಾರ ನಡೆಸುವುದನ್ನು ಕಟುವಾಗಿ ಟೀಕಿಸಿದ್ದಾರೆಯೇ ಹೊರತು ಹಿಂದೂ ಧರ್ಮ , ಹಿಂದೂಗಳನ್ನು ಟೀಕೆ ಮಾಡಿಲ್ಲ.
ಓರ್ವ ಶಾಸಕನಾಗಿ ಲೋಕಸಭಾ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿಯವರನ್ನು ಏಕವಚನದಲ್ಲಿ ಲೋಕಸಭೆಗೆ ನುಗ್ಗಿ ಕಪಾಲಕ್ಕೆ ಭಾರಿಸಬೇಕು ಎಂದು ಬಹಿರಂಗವಾಗಿ ಬೆದರಿಕೆ ಹಾಕಿರುವುದು ಬಿಜೆಪಿಯ ಹಿಂಸಾಚಾರಕ್ಕೆ ಉತ್ತಮ ಉದಾಹರಣೆಯಾಗಿದೆ. ಈ ಹಿಂದೆ ಜೆಡಿಎಸ್ ಪಕ್ಷದಲ್ಲಿದ್ದಾಗ ಸಂಘಪರಿವಾರ , ಬಿಜೆಪಿಯ ಹಿಂಸಾಚಾರ ರಾಜಕೀಯವನ್ನು ಬಹಿರಂಗವಾಗಿ ಟೀಕಿಸಿದ್ದ ಭರತ್ ಶೆಟ್ಟಿ ಬಿಜೆಪಿ ಪಕ್ಷ ಸೇರಿ ಶಾಸಕರಾದ ಬಳಿಕ ಭಯಂಕರ ಹಿಂದುತ್ವವಾದಿಯಾಗಿದ್ದರೆ. ಜೆಡಿಎಸ್ ಪಕ್ಷದಲ್ಲಿದ್ದಾಗ ತನ್ನ ಹಿಂದಿನ ಮಾತನ್ನು ಭರತ್ ಶೆಟ್ಟಿ ಯವರು ಒಮ್ಮೆ ಯೋಚಿಸುವ ಅಗತ್ಯವಿದೆ. ಭರತ್ ಶೆಟ್ಟಿ ಎರಡೂ ನಾಲಿಗೆಯ ಹಾವಿನಂತೆ ವರ್ತಿಸುವ ಬದಲಾಗಿ ಸಂಘಪರಿವಾರ , ಬಿಜೆಪಿಯ ಹಿಂಸಾಚಾರದಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಂಘಪರಿವಾರ , ಬಿಜೆಪಿ ಕಾರ್ಯಕರ್ತರ ಮನೆಗೆ ತೆರಳಿ ಅವರ ಮನೆಯ ಪರಿಸ್ಥಿತಿಯನ್ನು ಒಮ್ಮೆ ಅವಲೋಕನ ಮಾಡಿದರೆ ರಾಹುಲ್ ಗಾಂಧಿಯವರು ಲೋಕಸಭೆಯಲ್ಲಿ ಮಾಡಿದ ಭಾಷಣದ ನಿಜವಾದ ಸ್ವರೂಪ ಅರ್ಥವಾಗುತ್ತದೆ ಎಂದು ಅವರು ನುಡಿದಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು