ಇತ್ತೀಚಿನ ಸುದ್ದಿ
ಆರ್. ಅಶೋಕ್ ಸಾರಿಗೆ ಸಚಿವರಾಗಿದ್ದಾಗ 7 ಬಾರಿ ಕೆಎಸ್ಸಾರ್ಟಿಸಿ ದರ ಏರಿಸಿದ್ದರು: ಸಚಿವ ರಾಮಲಿಂಗಾ ರೆಡ್ಡಿ
08/01/2025, 10:44
ಬೆಂಗಳೂರು(reporterkarnataka.com): ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರು ಸಾರಿಗೆ ಸಚಿವರಾಗಿದ್ದಾಗ 7 ಬಾರಿ ಕೆಎಸ್ಸಾರ್ಟಿಸಿ ಬಸ್ ದರ ಏರಿಸಿದ್ದರು. ಈಗ ಅವರೇ ಗುಲಾಬಿ ಕೊಟ್ಟು ನಾಟಕವಾಡುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಟೀಕಿಸಿದ್ದಾರೆ.
ಸಾರಿಗೆ ಸಚಿವರು ತನ್ನ ಎಕ್ಸ್ ಖಾತೆಯಲ್ಲಿ ಆರ್. ಅಶೋಕ್ ನಡೆಯ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಆರ್. ಅಶೋಕ್ ಸವರು 2008ರಿಂದ 2013ರ ವರೆಗೆ ಸಾರಿಗೆ ಸಚಿವರಾಗಿದ್ದಾಗ ಒಟ್ಟು 7 ಬಾರಿ ಸಾರಿಗೆ ಬಸ್ ಟಿಕೇಟ್ ದರವನ್ನು ಹೆಚ್ಚಳ ಮಾಡಿದ್ದರು. ಇಂದು ಅವರೇ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಜನರಿಗೆ ಗುಲಾಬಿ ಕೊಟ್ಟು ನಮ್ಮ ಪರವಾಗಿ ಕ್ಷಮೆ ಕೇಳುವ ನಾಟಕ ಮಾಡುತ್ತಿದ್ದಾರೆ ಎಂದು ರಾಮಲಿಂಗಾ ರೆಡ್ಡಿ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.