ಇತ್ತೀಚಿನ ಸುದ್ದಿ
ಪಿಡಬ್ಲ್ಯುಡಿಗೆ ಹಿಡಿಶಾಪ ಹಾಕುತ್ತಿದ್ದವರು ಪೊಲೀಸರಿಗೆ ಜೈ ಎಂದರು!: ರಸ್ತೆ ಗುಂಡಿ ಮುಚ್ಚಿದ ಖಾಕಿ ಪಡೆ!!
18/08/2023, 10:34
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ರಾಜ್ಯ ಹೆದ್ದಾರಿಯಲ್ಲಿ ಗುಂಡಿಯೋ…ಗುಂಡಿ. ಹೊಂಡ ಬಿದ್ದ ರಸ್ತೆಯಲ್ಲಿ ವಾಹನ ಚಲಾಯಿಸಲಾಗದೆ ಪ್ರಯಾಣಿಕರು ಹೈರಾಣಾಗಿದ್ದರು. ಇದನ್ನು ಮನಗಂಡ ಪೊಲೀಸ್ ಇಲಾಖೆ ಸ್ವಂತ ಖರ್ಚಿನಲ್ಲಿ ಗುಂಡಿ ಮುಚ್ಚುವ ಕೆಲಸ ಮಾಡಿದೆ.
ಇದೆಲ್ಲ ನಡೆದದ್ದು ಚಿಕ್ಕಮಗಳೂರು-ಶೃಂಗೇರಿ ಮಾರ್ಗದ ರಾಜ್ಯ ಹೆದ್ದಾರಿಯಲ್ಲಿ. ಚಿಕ್ಕಮಗಳೂರು ತಾಲೂಕಿನ ಆಲ್ದೂರು ಬಳಿ ಭಾರೀ ಗುಂಡಿಗಳ ಗೋಳು ತಡೆಯಲಾಗದೆ ಸ್ವಂತ ಖರ್ಚಿನಲ್ಲಿ ಸಿಪಿಐ, ಪಿಎಸ್ಐ ರಸ್ತೆಗೆ ಮಣ್ಣು ಹಾಕಿಸಿ ಗುಂಡಿ ಮುಚ್ಚಿದ್ದಾರೆ. ಎರಡು ಟ್ರಾಕ್ಟರ್ ಮಣ್ಣು ತರಿಸಿ ಗುಂಡಿ ಮುಚ್ಚಿದ್ದಾರೆ. ಲೋಕೋಪಯೋಗಿ ಇಲಾಖೆಗೆ ಹಿಡಿಶಾಪ ಹಾಕಿಕೊಂಡೇ ಓಡಾಡುತ್ತಿದ್ದ ವಾಹನ ಚಾಲಕರು ಪೊಲೀಸರಿಗೆ ಸೆಲ್ಯೂಟ್ ಹೊಡೆದಿದ್ದಾರೆ.