8:50 PM Monday23 - December 2024
ಬ್ರೇಕಿಂಗ್ ನ್ಯೂಸ್
ಸರಕಾರ ರೈತರ ಪರವಾಗಿದೆ: ಚನ್ನರಾಯಪಟ್ಟಣ ರೈತ ನಿಯೋಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ಚಿಕ್ಕಮಗಳೂರು: ಬಂಧನಕ್ಕೊಳಗಾಗಿ ಬಿಡುಗಡೆಗೊಂಡ ಸಿ.ಟಿ. ರವಿಗೆ ಭಾರೀ ಸ್ವಾಗತ; ಮೆರವಣಿಗೆ ಸಿ. ಟಿ. ರವಿ ಸದಸ್ಯತ್ವ ಅನರ್ಹಗೊಳಿಸಿ: ಮಲೆನಾಡು ಪ್ರದೇಶಾಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ… ಎಲ್ಲರನ್ನೂ ಒಳಗೊಳ್ಳುವ ಸಮಾಜ ನಿರ್ಮಿಸೋಣ: ಆರ್ಚ್ ಬಿಷಪ್ಸ್ ಹೌಸ್ ಕ್ರಿಸ್ಮಸ್ ಆಚರಣೆಯಲ್ಲಿ ಮುಖ್ಯಮಂತ್ರಿ… ವಕ್ಫ್ ಹೋರಾಟಕ್ಕೆ ಮಣಿದು ಸಮಿತಿ ರಚನೆಗೆ ಸರಕಾರ ನಿರ್ಧಾರ: ಪ್ರತಿಪಕ್ಷ ನಾಯಕ ಆರ್‌.… ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ: ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ರಾತ್ರಿಯಡೀ ಪೊಲೀಸ್ ವಾಹನದಲ್ಲಿ ಸಿ.ಟಿ. ರವಿ ಸುತ್ತಾಟ!: ಕಾರಣ ಏನು ಗೊತ್ತೇ? ಸಿ.ಟಿ.ರವಿ ಬಂಧನ: ಚಿಕ್ಕಮಗಳೂರು, ಕೊಟ್ಟಿಗೆಹಾರದಲ್ಲಿ ಬಿಜೆಪಿ ಭಾರೀ ಪ್ರತಿಭಟನೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಪಿಒಸಿ ದರ್ಜೆ: ವಿಮಾನಯಾನ ಸಚಿವ ಜತೆ ಸಂಸದ ಕ್ಯಾಪ್ಟನ್… ಮಂಗಳೂರು: ಹೊಸ ವರ್ಷದ ಆಚರಣೆಗೆ ತರಿಸಿದ್ದ 9 ಲಕ್ಷ ರೂ. ಮೌಲ್ಯದ ಡ್ರಗ್ಸ್…

ಇತ್ತೀಚಿನ ಸುದ್ದಿ

ಪುತ್ತೂರು: ಉದ್ಯಮಶೀಲತೆಯಲ್ಲಿ ಯಶಸ್ಸು ಮಾಹಿತಿ ಕಾರ್ಯಾಗಾರ ಮತ್ತು ಸಂವಾದ

23/12/2024, 20:29

ಪುತ್ತೂರು(reporterkarnataka.com): ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ಪುತ್ತೂರು, ಸ್ನಾತಕೋತ್ತರ ವಾಣಿಜ್ಯ ವಿಭಾಗ IQAC ಮತ್ತು HEF ಮಹಿಳಾ ಘಟಕ ಮತ್ತು ರೇಡಿಯೋ ಪಾಂಚಜನ್ಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಉದ್ಯಮಶೀಲತೆಯಲ್ಲಿ ಯಶಸ್ಸು ಮಾಹಿತಿ ಕಾರ್ಯಾಗಾರ ಮತ್ತು ಸಂವಾದ ಕಾರ್ಯಕ್ರಮ ಪಿಜಿ ಸೆಮಿನಾರ್ ಹಾಲ್ ನಲ್ಲಿ ನಡೆಯಿತು.
*ಉದ್ಘಾಟನಾ ಸಮಾರಂಭ:*
ಈ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ
ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕರಾದ
ಡಾ.ಎಚ್. ಜಿ. ಶ್ರೀಧರ್,ಸ್ನಾತಕೋತರ ವಿಭಾಗದ
ಡೀನ್ ಡಾ. ವಿಜಯ ಸರಸ್ವತಿ,ಶ್ರೀ ರವಿನಾರಾಯಣ ಎಂ., ಗಿರೀಶ್ ಎಂ., ಕೇಶವ ಪ್ರಸಾದ್ ಮುಳಿಯ, HEF ಮಹಿಳಾ ಘಟಕದ ಅಧ್ಯಕ್ಷರಾದ ಕೃಷ್ಣವೇಣಿ ಪ್ರಸಾದ್ ಮುಳಿಯ ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಅನನ್ಯ ಮತ್ತು ಪೂಜಶ್ರೀ ಪ್ರಾರ್ಥನೆ ಮಾಡಿದರು.


ಡಾ. ವಿಜಯ ಸರಸ್ವತಿ ಅವರು ಅತಿಥಿ- ಅಭ್ಯಾಗತರನ್ನು ಸ್ವಾಗತಿಸಿದರು , ಕೃಷ್ಣವೇಣಿ ಪ್ರಸಾದ್ ಮುಳಿಯ ಅವರು ಪ್ರಸ್ತಾವಿಕ ನುಡಿಗಳನ್ನು ಹೇಳಿದರು, ಕಾರ್ಯಕ್ರಮದ ಉದ್ಘಾಟನೆಯನ್ನು ದೀಪೋಜ್ವಲನದೊಂದಿಗೆ ಡಾ.ಎಚ್. ಜಿ ಶ್ರೀಧರ್ ‌ಅವರು ನೆರವೇರಿಸಿ ಉದ್ಘಾಟನಾ ನುಡಿಗಳನ್ನು ಹೇಳಿದರು,
ಮೇಘನಾ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
*ಸಮಾರೋಪ ಸಮಾರಂಭ:*
ಉದ್ಯಮಶೀಲತೆಯಲ್ಲಿ ಯಶಸ್ಸು ಮಾಹಿತಿ ಕಾರ್ಯಾಗಾರ ಮತ್ತು ಸಂವಾದ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಷ್ಣು ಗಣಪತಿ ಭಟ್ , ಡಾ. ವಿಜಯ ಸರಸ್ವತಿ ಡೀನ್ ಸ್ನಾತಕೋತ್ತರ ವಿಭಾಗ, ರವಿ ನಾರಾಯಣ ಎಂ , ಗಿರಿಶ್ ಎಂ,
ಮೀರಾ ಮುರಲಿಧರ್, ಕೇಶವ ಪ್ರಸಾದ್ ಮುಳಿಯ, ಕೃಷ್ಣವೇಣಿ ಪ್ರಸಾದ್ ಮುಳಿಯ ಉಪಸ್ಥಿತರಿದ್ದರು. ಈ ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಷ್ಣು ಗಣಪತಿ ಭಟ್ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಧನ್ಯವಾದ ಸಮರ್ಪಣೆಯ ಜೊತೆಗೆ ಕಾರ್ಯಕ್ರಮವನ್ನು ನವೀನ್ ಕೃಷ್ಣ ನಿರೂಪಿಸಿದರು.
ಕಾರ್ಯಕ್ರಮ ದಲ್ಲಿ HEF ಮಹಿಳಾ ಘಟಕದ ಕಾರ್ಯದರ್ಶಿ ಗಳಾದ ಮಹಾಲಕ್ಷ್ಮಿ ಕೆಮ್ಮಿಂಜೆ , ಶರಾವತಿ, ಉಮಾ ಡಿ. ಪ್ರಸನ್ನ,
ಪ್ರಭಾವತಿ ಹಾಗೂ HEF ಅಧ್ಯಕ್ಷರಾದ ಸತೀಶ್ ರಾವ್ ಉಪಸ್ಥಿತರಿದ್ದರು.
ಅವಧಿ 1: ಎಲೆಕ್ಟ್ರಿಕ್ ಉದ್ಯಮದ ಕುರಿತು ಉದ್ಯಮಿಗಳಾದ ರವೀನಾರಾಯಣ ಅವರು ಮಾಹಿತಿಯನ್ನು ನೀಡಿದ್ದಾರೆ, ಇವರು ಆರಂಭ ಮಾಡಿದ ಮೈತ್ರಿ ಎಲೆಕ್ಟ್ರಿಕಲ್ ಕಂಪನಿಯ ಬಗ್ಗೆ ಸವಿಸ್ತಾರವಾಗಿ ಹೇಳಿದ್ದಾರೆ , ಜೊತೆಗೆ ಒಬ್ಬ ವ್ಯಕ್ತಿ ಒಂದು ಉದ್ಯಮ ಶುರು ಮಾಡಬೇಕೆಂದು ಅಂದುಕೊಂಡಾಗ ಆತನಿಗೆ ಆ ಉದ್ಯಮದ ಬಗ್ಗೆ ಅಷ್ಟು ಜ್ಞಾನವಿಲ್ಲದಿದ್ದರೂ ಆ ಉದ್ಯಮದ ಬಗ್ಗೆ ತಿಳಿದಿರುವವರನ್ನು ಒಟ್ಟುಗೂಡಿಸಿಕೊಂಡು ಉದ್ಯಮವನ್ನು ಪ್ರಾರಂಭಿಸಬಹುದು ಎಂದು ಹೇಳಿದರು, ಹೀಗೆ ಒಬ್ಬ ಉದ್ಯಮಿಯ ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಈ ಕಾರ್ಯಕ್ರಮದಲ್ಲಿ ಸೇರಿದ ಎಲ್ಲರಿಗೂ ಉದ್ಯಮದ ಬಗ್ಗೆ ಹೇಳುವುದರ ಜೊತೆಗೆ ಯಾವೆಲ್ಲ ಹೊಸ ಉದ್ಯಮವನ್ನು ಪ್ರಾರಂಭಿಸಬಹುದು ಎಂದು ತಮ್ಮ ಅವಧಿಯಲ್ಲಿ ಹೇಳಿದರು.ಈ ಅವಧಿಯನ್ನು ತನುಜಾ 2ND MCOM ನಿರೂಪಿಸಿದರು.
ಅವಧಿ-2: ಗಿರೀಶ್ ಎಂ ಇವರು ಆಹಾರೋದ್ಯಮ ಉದ್ಯಮದ ಬಗ್ಗೆ ಮಾಹಿತಿ ಕಾರ್ಯಗಾರವನ್ನು ಮಾಡಿದರು, ಆಹಾರ ಉದ್ಯಮದಲ್ಲಿ ಸಂತೃಪ್ತಿ ಹೋಟೆಲನ್ನು ಇವರು ಆರಂಭಿಸಿದರು, ಈ ಹೋಟೆಲಿನ ಬಗ್ಗೆಯೂ ತಮ್ಮ ಅವಧಿಯಲ್ಲಿ ಗಿರೀಶ್ ಇವರು ಹೇಳಿದ್ದಾರೆ. ಜೊತೆಗೆ ಹೋಟೆಲಿನ ಉದ್ಯಮದಲ್ಲಿ ಇರುವಂತಹ ಕಷ್ಟಗಳು ಅದರ ಜೊತೆಗೆ ಬೇರೆ ಹೋಟೆಲುಗಳ ಪೈಪೋಟಿಯನ್ನು ಹೇಗೇ ಎದುರಿಸಬೇಕೆಂಬುದನ್ನು ಕೂಡ ತಿಳಿಸಿದ್ದಾರೆ, ಜೊತೆಗೆ ಹೋಟೆಲಿನಲ್ಲಿ ಅಡುಗೆ ಮಾಡಲು ಜನ ಸಿಗದಾಗ ಆಗುವ ಕಷ್ಟಗಳು ಮತ್ತು ಹೊಸ ಅಡುಗೆಯವರು ಬಂದಾಗ ದಿನದಿಂದ ದಿನಕ್ಕೆ ಬದಲಾಗುವ ಪದಾರ್ಥಗಳ ರುಚಿಯ ಬಗ್ಗೆ ತಿಳಿಸುತ್ತ ಇಂತಹ ಸಂದರ್ಭದಲ್ಲಿ ನಮಗೆ ಅಡುಗೆ ಗೊತ್ತಿದ್ದರೆ ಅದರಿಂದ ಆಗುವ ಪ್ರಯೋಜನಗಳನ್ನು ಕೂಡ ವಿವರಿಸಿದ್ದಾರೆ.
ಈ ಅವಧಿಯನ್ನು ನೀಹಾ 2ND MCOM ಇವರು ನಿರೂಪಿಸಿದರು.
ಅವಧಿ 3: ಮೀರಾ ಮುರಲೀಧರ್ ಅವರ ಸಂವಾದ ಕಾರ್ಯಕ್ರಮದಲ್ಲಿ ಇವರ ಜೊತೆಗೆ ಶರಾವತಿ ರವಿ ನಾರಾಯಣ ಮತ್ತು ಕೃಷ್ಣವೇಣಿ ಪ್ರಸಾದ್ ಮುಳಿಯ ಜೊತೆಗಿದ್ದರು. ಇವರು ತಾವು ಪ್ರಾರಂಭಿಸಿದ ಕಂಪನಿಯ ಬಗ್ಗೆ ತಿಳಿಸಿದ್ದಾರೆ, ಇವರು ಅಗತ್ಯವಿರುವ ಗಿಡಮೂಲಿಕೆ ಔಷಧಿಯ ಸಸ್ಯಗಳನ್ನು ಬೆಳೆಸಿ, ಅದರಿಂದ ಗಿಡಮೂಲಿಕ ಉತ್ಪನ್ನಗಳನ್ನು ತಯಾರಿಸಿದ್ದಾರೆ. ಇದರೊಂದಿಗೆ ಸತ್ವಂ ಎಂಬ ಹರ್ಬಲ್ ಮಿನರಲ್ ವಾಟರ್ ಕೂಡ ಇವರ ಸಂಸ್ಥೆಯ ಉತ್ಪನ್ನ. ಇವರು ತಮ್ಮ ಸಾಧನೆಯಲ್ಲಿ ತಮ್ಮ ಮನೆಯವರ ಸಹಕಾರವನ್ನು ಕೂಡ ನೆನಪಿಸಿಕೊಂಡಿದ್ದಾರೆ, ಈ ಅವಧಿಯನ್ನು ತೇಜಸ್ವಿ 2ND MCOM ಇವರು ನಿರೂಪಿಸಿದರು.
ಅವಧಿ 4: ಕೇಶವಪ್ರಸಾದ್ ಮುಳಿಯ ಇವರು ಆಭರಣ ಮತ್ತು ಇತರ ಉದ್ಯಮಗಳ ಬಗ್ಗೆ ಮಾಹಿತಿ ಕಾರ್ಯಗಾರವನ್ನು ನಡೆಸಿದರು, ಇವರ ಅವಧಿಯಲ್ಲಿ ತಮ್ಮ ಸಂಸ್ಥೆಯಾದ ಮುಳಿಯ ಜುವೆಲರ್ಸ್ ನ ಆರಂಭದಿಂದ ಹಿಡಿದು ಈಗ ಅದು ಯಾವ ರೀತಿಯಲ್ಲಿ ನಡೆದುಕೊಂಡು ಹೋಗುತ್ತಾ ಇದೆ ಮತ್ತು ಸಂಸ್ಥೆ ಹೊಂದಿರುವ ಶಾಖೆಗಳ ಬಗ್ಗೆ ತಿಳಿಸಿದ್ದಾರೆ, ಜೊತೆಗೆ ತಮ್ಮ ಸಂಸ್ಥೆಯು ಉದ್ಯೋಗಿಗಳಿಗೆ ಸ್ವಂತ ನಿವೇಶನದ ಅವಶ್ಯಕತೆ ಇದ್ದಾಗ find the need and fill the gap ಎಂಬಂತೆ ಮುಳಿಯ ಪ್ರಾಪರ್ಟೀಸ್ ನ ಉಗಮಕ್ಕೆ ಕಾರಣವಾದ ರೋಚಕ ವಿಚಾರವನ್ನು ತಿಳಿಸಿದರು., ಜೊತೆಗೆ ಯುವ ಉದ್ಯಮಿಗಳಿಗೆ ಇರುವ ಅವಕಾಶಗಳು , ಡಿಜಿಟಲ್ ಇಂಡಿಯಾ ದಿಂದ ಆಗುವಂತ ಪ್ರಯೋಜನಗಳನ್ನು ಹಾಗೂ ಸ್ವ ಉದ್ಯೋಗಕ್ಕೆ ಇರುವ ಬೇರೆ ಬೇರೆ ಅವಕಾಶದ ಬಗ್ಗೆ ಶ್ರೀ ಕೇಶವ ಪ್ರಸಾದ್ ಮುಳಿಯ ಇವರು ತಮ್ಮ ಅವಧಿಯಲ್ಲಿ ತಿಳಿಸಿದ್ದಾರೆ, ಈ ಅವಧಿಯನ್ನು ನವೀನ್ ಕೃಷ್ಣ 1ST MCOM ಇವರು ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು