9:08 AM Sunday22 - September 2024
ಬ್ರೇಕಿಂಗ್ ನ್ಯೂಸ್
ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿ 30 ಅಡಿ ಎತ್ತರದಿಂದ ಗ್ರಾಪಂ ಆವರಣಕ್ಕೆ ಕಾರು… ವಿಶ್ವ ವಿಜ್ಞಾನಿಗಳ ಪಟ್ಟಿ: ಬಳ್ಳಾರಿಯ ವಿಎಸ್‌ಕೆಯುನ ಮೂವರು ಪ್ರಾಧ್ಯಾಪಕರಿಗೆ ಸ್ಥಾನ ​ ಸರಕಾರದ ನೇಮಕಾತಿಯಲ್ಲಿ ಮೀಸಲಾತಿ ಪರಿಗಣಿಸಿ: ಪಂಪಾಪತಿ ಆಗ್ರಹ ನಂಜನಗೂಡು: 20 ಕೋಟಿ ರೂಪಾಯಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರಿಂದ ಚಾಲನೆ ಬೆಂಗಳೂರಿನ ಇಸ್ಕಾನ್ ಶ್ರೀರಾಧಾಕೃಷ್ಣ ದೇವಸ್ಥಾನದಲ್ಲಿ ಬಾಲ್ಯದ ಕ್ಯಾನ್ಸರ್ ಜಾಗೃತಿ ಮಾಸಕ್ಕೆ ಚಿನ್ನದ ಹೊಳಪು ತೀರ್ಥಹಳ್ಳಿ: ಹಿಂದೂ- ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾದ ಛತ್ರಕೇರಿ ಗಣೇಶೋತ್ಸವ ಶೋಭಾಯಾತ್ರೆ ಮಿಸ್ಟರ್ ಕರಾವಳಿ, ಮಿಸ್ ಕರಾವಳಿ ಪ್ರಶಸ್ತಿ ರಂಜಿತ್ ಗಾಣಿಗ ಹಾಗೂ ರಿಷಾ ಟಾನ್ಯಾ… ಮೇಯರ್ ಆಯ್ಕೆ ಸಭೆಯಲ್ಲಿ ಬಿಜೆಪಿ- ಕಾಂಗ್ರೆಸ್ ವಾಕ್ಸಮರ: ಕೊನೆಗೆ ನಿರಾಳ, ಕೂಲ್ ಕೂಲ್!! ತೀರ್ಥಹಳ್ಳಿ: ಸರ್ವಧರ್ಮ ಸಮನ್ವಯತೆಯಲ್ಲಿ ಸಂಭ್ರಮ- ಸಡಗರದ ಈದ್ ಮಿಲಾದ್ ಆಚರಣೆ ನಂಜನಗೂಡು: ಮುನಿರತ್ನ ವಿರುದ್ಧ ಜನ ಸಂಗ್ರಾಮ ಪರಿಷತ್ ಪ್ರತಿಭಟನೆ: ಶಾಸಕ ಸ್ಥಾನದಿಂದ ವಜಾಗೊಳಿಸಲು…

ಇತ್ತೀಚಿನ ಸುದ್ದಿ

ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಎನ್ ಸಿ ಸಿ ಘಟಕಗಳ ವತಿಯಿಂದ ರಕ್ತದಾನ ಶಿಬಿರ

28/11/2022, 21:11

ಪುತ್ತೂರು(reporterkarnataka.com): ಸಂತ ಫಿಲೋಮಿನಾ ಕಾಲೇಜು ಹಾಗೂ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಎನ್ ಸಿ. ಸಿ ಘಟಕಗಳ ವತಿಯಿಂದ ರೋಟರಿ ಕ್ಯಾಂಪ್ಯೂ ಬ್ಲಡ್ ಸೆಂಟರ್ ಸಹಯೋಗದೊಂದಿಗೆ ಎನ್.ಸಿ.ಸಿ. ದಿನದ ಪ್ರಯುಕ್ತ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ರೋಟರಿ ಕ್ಯಾಂಪ್ಕೊ -ಬ್ಲಡ್ ಸೆಂಟರ್ ನಲ್ಲಿ ಆಯೋಜಿಸಲಾಯಿತು. ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ರೋಟರಿ ಕ್ಯಾಂಪ್ಕೊ ಬ್ಲಡ್ ಸೆಂಟರ್ ನ ವೈದ್ಯಾಧಿಕಾರಿಯಾದ ಡಾ| ರಾಮಚಂದ್ರ ಭಟ್ ರವರು ರಕ್ತದಾನವು ಸಕಲದಾನಗಳಿಗಿಂತಲೂ ಶ್ರೇಷ್ಠವಾದುದು ಯಾಕೆಂದರೆ ರಕ್ತವನ್ನು ಬೇರೆ ಯಾವುದೇ ಕೃತಕರೀತಿಯಲ್ಲಿ ತಯಾರಿಸಲು ಸಾಧ್ಯವಾಗುವುದಿಲ್ಲ. ಆರೋಗ್ಯವಂತ ವ್ಯಕ್ತಿಯು ದಾನಮಾಡುವ ಮೂಲಕ ಮಾತ್ರವೇ ರಕ್ತವನ್ನು ಪಡೆಯಬಹುದಾಗಿದೆ.
ಅಪಘಾತ, ಶಸ್ತ್ರಕ್ರಿಯೆ ಹಾಗೂ ಜ್ವರ ಮುಂತಾದ ಅನಾರೋಗ್ಯಗಳ ಸಂದರ್ಭದಲ್ಲಿ ರೋಗಿಗಳಿಗೆ ರಕ್ತದ ಅವಶ್ಯಕತೆ ಇರುತ್ತದೆ. 18 ವರ್ಷಗಳಿಗೆ ಮೇಲ್ಪಟ್ಟ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದಾಗಿದೆ” ಎಂದು ಹೇಳಿದರು.

ಕಾಲೇಜಿನ ಎನ್ ಸಿಸಿ ಭೂದಳದ ಅಧಿಕಾರಿ ಲೆ ಜೋನ್ಸನ್ ಡೇವಿಡ್ ಸಿಕ್ವೆರಾ ಹಾಗೂ ನೌಕಾದಳದ ಅಧಿಕಾರಿ ತೇಜಸ್ವಿ ಭಟ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು. 50 ಕೆಡೆಟ್ ಗಳು ರಕ್ತದಾನ ಮಾಡುವ ಮೂಲಕ ತಮಗಿರುವ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು