11:06 AM Friday24 - April 2026
ಬ್ರೇಕಿಂಗ್ ನ್ಯೂಸ್
ತುಮಕೂರು: ಒಂದು ವಾರದ ಅಂತರದಲ್ಲಿ 32 ನವಿಲುಗಳು ಸಾವು; ತಾಪಮಾನ ಕಾರಣ? ಬಳ್ಳಾರಿ ಜಿಲ್ಲಾಡಳಿತದಿಂದ ಸರಕಾರಿ ಜಮೀನು ಒತ್ತುವರಿ ವಿರುದ್ಧ 3ನೇ ಹಂತದ ಕಾರ್ಯಾಚರಣೆ Chikkamagaluru | ಸಿಇಟಿ ಬರೆಯಲು ಬಂದ ವಿದ್ಯಾರ್ಥಿನಿಯರಿಗೆ ಶಾಕ್: ಮೂಗುತಿಗೆ ಬಿತ್ತು ಗಮ್… ತಮಿಳುನಾಡಿನಲ್ಲಿ 84% ದಾಟಿದ ಮತದಾನ: ಬಂಗಾಳದಲ್ಲಿ 91% ದಾಖಲೆ ಪ್ರಮಾಣದ ವೋಟಿಂಗ್ ತೀರ್ಥಹಳ್ಳಿ | ಆಗುಂಬೆಯ ಲಕ್ಕುಂದದಲ್ಲಿ ವೃದ್ದೆಯ ಕಟ್ಟಿ ಹಾಕಿ ಲಕ್ಷಾಂತರ ರೂ. ಮೌಲ್ಯದ… ಪಕ್ಷ ಕಟ್ಟಲು ಕಾರ್ಯಕರ್ತರು ಇದ್ದಾರೆ, ಜಮೀರ್ ಜೆಡಿಎಸ್‌ಗೆ ಬರೋ ಅವಶ್ಯಕತೆ ಇಲ್ಲ: ನಿಖಿಲ್… ವಿದೇಶಿ ಮಹಿಳೆಯ ಅತ್ಯಾಚಾರ ದೌರ್ಜನ್ಯ ಪ್ರಕರಣ: ‘ದೇವಿ ವಿಲ್ಲಾ’ ಹೋಂಸ್ಟೇ ಪರವಾನಗಿ ರದ್ದು ಬಸವಕಲ್ಯಾಣ ಬಸವೇಶ್ವರ ರಥೋತ್ಸವದಲ್ಲಿ ಭೀಕರ ದುರಂತ: ರಥದ ಚಕ್ರಕ್ಕೆ ಸಿಲುಕಿ ಭಕ್ತನ ಎರಡು… ತಮಿಳುನಾಡಿನಲ್ಲಿ ಮತದಾನ: ಸಿಎಂ ಸ್ಟಾಲಿನ್, ಸೂಪರ್ ಸ್ಟಾರ್ ರಜನೀಕಾಂತ್, ಪ್ರಸಿದ್ಧ ನಟ ವಿಜಯ್… ಪ್ರಧಾನಿ ಮೋದಿಗೆ ಭಯೋತ್ಪಾದಕ ಎಂದು ನಿಂದನೆ: ಎಐಸಿಸಿ ಅಧ್ಯಕ್ಷ ಖರ್ಗೆಗೆ ಚುನಾವಣಾ ಆಯೋಗ…

ಇತ್ತೀಚಿನ ಸುದ್ದಿ

ಪುತ್ತೂರು, ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್‌ನಲ್ಲಿ ಕರಿಮಣಿ ಉತ್ಸವ: 1000ಕ್ಕೂ ಅಧಿಕ ಸಂಗ್ರಹ; 50ಕ್ಕೂ ಅಧಿಕ ಆಕರ್ಷಕ ವಿನ್ಯಾಸಗಳು

16/02/2024, 21:28

ಪುತ್ತೂರು(reporterkarnataka.com): ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಕೋರ್ಟ್‌ ರಸ್ತೆ ಮುಳಿಯ ಜ್ಯುವೆಲ್ಸ್‌ನಲ್ಲಿ 15 ದಿನಗಳ ಕಾಲ ನಡೆಯಲಿರುವ ಕರಿಮಣಿ ಉತ್ಸವ’ಕ್ಕೆ ಫೆ.16ರಂದು ಚಾಲನೆ ದೊರೆಯಿತು.

ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವಸಂತ ಕೆದಿಲಾಯವರು ಕರಿಮಣಿ ಉತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮಾಂಗಲ್ಯದಲ್ಲಿ ಮಂಗಳ ಶಬ್ದವಿದೆ. ಮಂಗಳವನ್ನು ಕರುಣಿಸುವಂತ ದ್ರವ್ಯದಿಂದ ತಯಾರಿಸಲ್ಪಟ್ಟ ವಿಶೇಷವಾಗಿ ಚಿನ್ನದಿಂದ ತಯಾರಿಸಿದ ಕರಿಮಣಿ ಧಾರಣೆ ಮಾಡಿದರೆ ಸೌಭಾಗ್ಯ, ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಮಂಗಳಸೂತ್ರವನ್ನು ಧರಿಸದಾಗಲೇ ಮುತ್ತೈದೆ ಭಾಗ್ಯದ ಜೊತೆಗೆ ಗೃಹಣಿಗೆ ಸಂಸ್ಕಾರ ದೊರೆಯುತ್ತದೆ. ಇಂತಹ ಕರಿಮಣಿಗಳು ಮುಳಿಯದಲ್ಲಿ 2 ಗ್ರಾಂನಿಂದ ಪ್ರಾರಂಭಿಸಿ ಅತ್ಯಧಿಕ ಚಿನ್ನದ ತನಕ ಗ್ರಾಹಕರಿಗೆ ದೊರೆಯಲಿದೆ. ಕನಿಷ್ಠ 2 ಗ್ರಾಂನ ಕರಿಮಣಿಯ ಮೂಲಕ ಬೆಳ್ಳಿಯ ಕರಿಮಣಿ ಧರಿಸುವ ಬಡವರಿಗೂ ಚಿನ್ನದ ಧರಿಸುವಂತ ಅವಕಾಶ ಮುಳಿಯ ಜ್ಯುವೆಲ್ಸ್ ಮೂಲಕ ದೊರೆಯಲಿದೆ. ಸಂಸ್ಥೆಯ ಶಾಖೆಗಳು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆಗಳು ದೊರೆಯಲಿ ಎಂದರು.
ಮುಳಿಯ ಜ್ಯುವೆಲ್ಸ್‌ನ , ಚೇರ್ಮೆನ್ ಮತ್ತು ಆಡಳಿತ ನಿರ್ದೇಶಕ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಚಿನ್ನಾಭರಣಗಳ ಮಾರುಕಟ್ಟೆಯಲ್ಲಿ ಹಲವು ಹೊಸತನಗಳನ್ನು ಮುಳಿಯ ಜ್ಯುವೆಲ್ಸ್ ಸಂಸ್ಥೆ ಪರಿಚಯಿಸಿದೆ. 25 ವರ್ಷಗಳ ಹಿಂದೆ ಚಿನ್ನಾಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಪ್ರಥಮ ಬಾರಿಗೆ ಪುತ್ತೂರಿನಲ್ಲಿ ಆಯೋಜಿಸಿದೆ. ಆಧುನಿಕತೆಯಲ್ಲಿ ಮಹಿಳೆಯರಿಗೆ ವಿವಿಧ ಕಾರ್ಯಕ್ರಗಳಿಗೆ ತಕ್ಕಂತೆ ಅವರವರ ಮನದಿಚ್ಚೆಯ ಕರಿಮಣಿಗಳನ್ನು ಧರಿಸಲು ಅವಕಾಶವಿದೆ. ಸುಮಾರು 1000ಕ್ಕೂ ಅಧಿಕ ಕರಿಮಣಿ ಸರಗಳ ಸಂಗ್ರಹ ಈ ಸಂದರ್ಭದಲ್ಲಿ ಲಭ್ಯವಾಗಲಿದ್ದು 50ಕ್ಕೂ ಅಧಿಕ ಆಕರ್ಷಣೀಯ ವಿನ್ಯಾಸಗಳ ಕರಿಮಣಿಗಳು ಲಭ್ಯವಿದೆ. ಇದಕ್ಕಾಗಿ ಕರಿಮಣಿ ಉತ್ಸವದ ಮೂಲಕ ಹೊಸ ಹೊಸ ಶೈಲಿಯ, ಆಕರ್ಷಕ ವಿನ್ಯಾಸದ ಕರಿಮಣಿ ಉತ್ಸವದಲ್ಲಿ ಲಭ್ಯವಿದ್ದು ಫೆ.15ರಿಂದ ಪ್ರಾರಂಭಗೊಂಡು ಫೆ.29ರ ತನಕ ನಡೆಯಲಿದ್ದು ಗ್ರಾಹಕರು ಇದರ ಸದುಪಯೋಗಹ ಪಡೆದುಕೊಳ್ಳುವಂತೆ ಅವರು ವಿನಂತಿಸಿದರು.
ಮುಳಿಯ ಜ್ಯುವೆಲ್ಸ್‌ನ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ, ಶೋರೂಂ ವ್ಯವಸ್ಥಾಪಕ ರಾಘವೇಂದ್ರ ಪಾಟೀಲ್, ಮಾರ್ಕೆಟಿಂಗ್ ಮ್ಯಾನೇಜರ್ ಸಂಜೀವ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಭವ್ಯಶ್ರೀ ಪ್ರಾರ್ಥಿಸಿದರು. ಯತೀಶ್ ಆಚಾರ್ಯ ಸ್ವಾಗತಿಸಿರು. ಆನಂದ ಕುಲಾಲ್ ವಂದಿಸಿದರು. ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು.
ಫೆ.16ರಿಂದ ಪ್ರಾರಂಭಗೊಂಡಿರುವ ಕರಿಮಣಿ ಉತ್ಸವವು ಫೆ.29ರ ತನಕ ನಡೆಯಲಿದ್ದು ಇದರಲ್ಲಿ ನವನವೀನ ಮಾದರಿಯ, ವಿವಿಧ ವಿನ್ಯಾಸ ಕರಿಮಣಿ ಸರಗಳು ಅತೀ ಕಡಿಮೆ ಸುಮಾರು 2 ಗ್ರಾಂ ನಿಂದ ಪ್ರಾರಂಭಿಸಿ ಗ್ರಾಹಕರ ಆವಶ್ಯಕತೆಗೆ ತಕ್ಕಂತೆ ಎಲ್ಲಾ ರೀತಿಯ ಕರಿಮಣಿ ಸರಗಳು ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು