ಇತ್ತೀಚಿನ ಸುದ್ದಿ
ಪುತ್ತೂರಿನ ಆನಂದ ಆಶ್ರಮಕ್ಕೆ ವಿವೇಕಾನಂದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜಕರಿಂದ ಹಲವು ಸೇವೆ
01/06/2022, 08:19
ಪುತ್ತೂರು(reporterkarnataka.com) : ಹಿರಿಯರನ್ನು ಆರೈಕೆ ಮಾಡಿಕೊಂಡು ಬರುತ್ತಿರುವ ಪುತ್ತೂರಿನ ಆನಂದ ಆಶ್ರಮಕ್ಕೆ ವಿವೇಕಾನಂದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜಕರಿಂದ ಹಲವು ಸಲ ಸೇವೆ ಸಲ್ಲಿಸಲಾಗಿದೆ.
ವಿವೇಕಾನಂದ ಕಾಲೇಜು ಐಕ್ಯೂಎ ಸಿ ಘಟಕ ಹಾಗೂ ರಾಷ್ಟೀಯ ಸೇವಾ ಯೋಜನೆಯ ಸಂಘ ದ ಆಶ್ರಯದಲ್ಲಿ ಧನ್ಯತಾ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇಲ್ಲಿ ಸ್ನಾತಕೋತ್ತರ ಪದವಿಯ ವಾಣಿಜ್ಯ ವಿಭಗದ ಮುಖ್ಯಸ್ಥೆ ಆದ ಡಾ.ವಿಜಯ ಸರಸ್ವತಿ ಅವರು ಆಶ್ರಮ ನಡೆಸುತ್ತಿರುವ ಡಾ.ಗೌರಿ ಪೈ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು.
ರಾಷ್ಟ್ರೀಯ ಸೇವಾ ಯೋಜನೆಯ ಕುರಿತು ಹೇಳಿ ತಮ್ಮ ಅಭಿಪ್ರಾಯ ಮಾತುಗಳನ್ನು ಆಡಿ ಶುಭ ಹಾರೈಸಿದರು. ನಂತರ ಗೌರಿ ಪೈ ಅವರ ಶುಭಹಾರೈಕೆಯ ನುಡಿಯನ್ನಾಡಿದರು. ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಾದ ಶ್ರೀನಾಥ್ ಹಾಗೂ ವಿದ್ಯಾ ಅವರು ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಯೋಜನಾ ಸ್ವಯಂಸೇವಕರಿಂದ ಸಾಂಸ್ಕೃತಿ ಕಾರ್ಯಕ್ರಮವು ನಡೆಯಿತು.
ಈ ಕಾರ್ಯಕ್ರಮದ ನಿರೂಪಣೆ ಸ್ವಾಗತ ಹಾಗೂ ಧನ್ಯವಾದ ಕಾರ್ಯಕ್ರಮವನ್ನು ರಾಷ್ಟ್ರೀಯ ಸೇವಾಯೋಜನೆಯ ಸ್ವಯಂಸೇವಕರು ನಡೆಸಿಕೊಟ್ಟರು .