3:39 AM Saturday15 - November 2025
ಬ್ರೇಕಿಂಗ್ ನ್ಯೂಸ್
ಬೆಂಗಳೂರು: ಮತ ಕಳ್ಳತನ ವಿರುದ್ಧ ಯುವ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಬೆಳಗಾವಿ ಮೃಗಾಲಯದಲ್ಲಿ 19 ಜಿಂಕೆಗಳ ಸಾವು: ತನಿಖೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ… ಮೂಡಿಗೆರೆಯಲ್ಲಿ 80 ಮೂಟೆ ಕಾಳುಮೆಣಸು ಕಳ್ಳತನ ಪ್ರಕರಣ: ಮಹಿಳಾ ಆರೋಪಿ ಬಂಧನ, ಮೂವರು… ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ವಿರುದ್ಧ ಅವಾಚ್ಯ ಪದ ಬಳಕೆ: ಆರೋಪಿ ವಿರುದ್ಧ… Kodagu | ಮಡಿಕೇರಿ ಸಮೀಪದ ಚೆಂಬು ಗ್ರಾಮದಲ್ಲಿ ಮನೆಗಳ್ಳತನ ಪ್ರಕರಣ: ಇಬ್ಬರ ಬಂಧನ ವೈಚಾರಿಕ-ವೈಜ್ಞಾನಿಕ ಮನೋಭಾವದ ಮಕ್ಕಳ ಮೇಲೆ ದೇಶದ ಭವಿಷ್ಯ ನಿಂತಿದೆ: ಸಿಎಂ ಸಿದ್ದರಾಮಯ್ಯ ಬಿಹಾರ ಚುನಾವಣೆ ಫಲಿತಾಂಶದಿಂದ ಪ್ರಧಾನಿ ಮೋದಿಯವರ ಜನಪ್ರೀಯತೆ ಮತ್ತೆ ದೃಢಪಟ್ಟಿದೆ: ಮಾಜಿ ಸಿಎಂ… ಚಾಕುವಿನಿಂದ ಇರಿದು ಕಾರ್ಮಿಕನ ಕೊಲೆ: ಅಸ್ಸಾಂ ಮೂಲದ ಆರೋಪಿ ಅಂದರ್; ತಪ್ಪುಮಾಹಿತಿ ನೀಡಿದಾತ… ಮೇಕೆದಾಟು ವಿರುದ್ಧದ ತಮಿಳುನಾಡು ಅರ್ಜಿ ಸುಪ್ರೀಂ ಕೋರ್ಟ್ ನಿಂದ ವಜಾ: ರಾಜ್ಯಕ್ಕೆ ಮಹಾಜಯ Shivamogga | ತೀರ್ಥಹಳ್ಳಿ ಸಮೀಪದ ತಳುವೆ ಬಳಿ ಅಪಘಾತ: ವ್ಯಕ್ತಿಯೋರ್ವನ ಕಾಲು ಕಟ್

ಇತ್ತೀಚಿನ ಸುದ್ದಿ

ಪುತ್ತೂರು: ಮುಳಿಯ ನವೀಕೃತ, ವಿಸ್ತೃತ ಶೋರೂಂ ‘ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್’ ಏ.20ರಂದು ಉದ್ಘಾಟನೆ

15/04/2025, 19:28

ಚಿತ್ರ: ಅನುಷ್ ಪಂಡಿತ್ ಮಂಗಳೂರು
ಪುತ್ತೂರು(reporterkarnataka.com): ಸುಮಾರು 80 ವರ್ಷಗಳ ಇತಿಹಾಸವಿರುವ ಪುತ್ತೂರಿನ ಮುಳಿಯ ಚಿನ್ನದ ಮಳಿಗೆಯ ನವೀಕೃತ ವಿಸ್ತೃತ ಶೋರೂಂ ‘ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್’ ಎಂಬ ಹೊಸ ಹೆಸರಿನೊಂದಿಗೆ ಏ.20ರಂದು ಬೆಳಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ.
ಖ್ಯಾತ ಚಲನಚಿತ್ರ ನಟ ರಮೇಶ್ ಅರವಿಂದ್ ಅವರು ನೂತನ ಶೋರೂಂಗೆ ಚಾಲನೆ ನೀಡಲಿದ್ದಾರೆ. ಪುತ್ತೂರಿನ ಕೋರ್ಟ್ ರಸ್ತೆಯಲ್ಲಿರುವ ಈ ಮಳಿಗೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹಾಗೂ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ಅವರು ತಿಳಿಸಿದರು.
ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನಮ್ಮ ಹೆಮ್ಮೆ. ಗ್ರಾಹಕರಿಗೆ ಯಾವಾಗಲೂ ಹೊಸತನ ನೀಡುವುದು ಮುಳಿಯದ ವಿಶೇಷತೆ. ಈ ಹೊಸ ಶೋರೂಂ ನಂಬಿಕೆ ಮತ್ತು ಪರಂಪರೆಯ ಜೊತೆಗೆ ಮುಳಿಯದ ಸಾಮಾಜಿಕ ಜವಾಬ್ದಾರಿಯ ಸೇವೆಯೊಂದಿಗೆ ಗ್ರಾಹಕರಿಗೆ ಸಂತೃಪ್ತಿ ಮತ್ತು ಸಂತೋಷ ನೀಡುತ್ತಾ ಬಂದಿದೆ. ಇನ್ನಷ್ಟು ದುಪ್ಪಟ್ಟು ಸಂತೋಷ ನೀಡುವಲ್ಲಿ ಸದಾ ಹೆಚ್ಚು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಲಿದೆ ಎಂದು ಕೇಶವ ಪ್ರಸಾದ್ ಮುಳಿಯ ಹೇಳಿದರು.


ಕಳೆದ ಮೂರು ತಲೆಮಾರಿನಿಂದ ಜನತೆಯ ವಿಶ್ವಾಸಗಳಿಸಿ ಬೆಳೆಯುತ್ತಿರುವ ನಮ್ಮ ಸಂಸ್ಥೆ, ಜನರಿಗೆ ಚಿನ್ನದೊಂದಿಗೆ ಸಂತೃಪ್ತಿ, ಸಂತೋಷವನ್ನು ನೀಡಿದೆ. ನೀವು ಮನಸಾರೆ ನಮ್ಮನ್ನು ಹರಸಿದ್ದೀರಿ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೊಸತನದೊಂದಿಗೆ ಬರುತ್ತಿದ್ದೇವೆ ಎಂದು ಕೃಷ್ಣ ನಾರಾಯಣ ಮುಳಿಯ ನುಡಿದರು.
ಅನಾವರಣಗೊಳ್ಳಲಿರುವ ಈ ಅತ್ಯಾಧುನಿಕ ಶೈಲಿ ಮತ್ತು ವಿನ್ಯಾಸದ 4 ಅಂತಸ್ತಿನ ವಿಶಾಲ ಶೋರೂಂನಲ್ಲಿ ಚಿನ್ನ, ಬೆಳ್ಳಿ, ವಜ್ರ, ಆಧುನಿಕ ಬ್ರಾಂಡೆಡ್ ವಾಚುಗಳು, ಗಿಫ್ಟ್ ಐಟಂ ಹಾಗೂ ವಿವಿಧ ಬಗೆಯ ಚಿನ್ನಾಭರಣಗಳ ಕೌಂಟರ್ ಗಳು ಇರಲಿವೆ. ನಮ್ಮ ಬೆಂಗಳೂರು, ಬೆಳ್ತಂಗಡಿ, ಮಡಿಕೇರಿ ಶೋ ರೂಂಗಳು ಮತ್ತಷ್ಟು ವಿಶಾಲವಾಗಿ ನವೀಕೃತಗೊಳ್ಳುತ್ತಿವೆ. ಗೋಣಿಕೊಪ್ಪದಲ್ಲಿ ನಮ್ಮದೇ ಆದ ಶೋರೂಂ ನಿರ್ಮಾಣಗೊಳ್ಳಲಿದೆ‌. ವಿಶಾಲ ಪಾರ್ಕಿಂಗ್, ಗ್ರಾಹಕರಿಗೆ ಊಟ, ತಿಂಡಿಯ ವ್ಯವಸ್ಥೆ, ಮಕ್ಕಳ ಆಟ ಮತ್ತು ಆರೈಕೆಗೆ ವಿಶೇಷ ಕೊಠಡಿ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾರ್ಕೆಟಿಂಗ್ ಕನ್ಸಲ್ಟೆನ್ಸ್ ವೇಣು ಶರ್ಮ, ಶೋರೂಂ ಸಹ ಪ್ರಬಂಧಕ ರಾಘವೇಂದ್ರ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು