ಇತ್ತೀಚಿನ ಸುದ್ದಿ
ಪುಷ್ಯ ಮಳೆಯ ಅಬ್ಬರ: ಅಪಾಯ ಮಟ್ಟ ಮೀರಿ ಹರಿಯುತ್ತಿರುವ ತುಂಗಾ ನದಿ; 4 ಬಾರಿ ಬಾಗಿನ ಸಮರ್ಪಿಸಿದರೂ ರಾಮ ಮಂಟಪ ಮುಳುಗಡೆ
30/07/2024, 21:41
ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.ಕಂ
ಪುಷ್ಯ ಮಳೆಯ ಅಬ್ಬರಕ್ಕೆ ತುಂಗಾನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು ಹಲವೆಡೆ ರಸ್ತೆ ಸಂಪರ್ಕ ಕಡಿತವಾಗಿದೆ. ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಐತಿಹಾಸಿಕ ರಾಮಮಂಟಪ ಮುಳುಗಡೆ ಆಗಿದೆ.
ನಿರಂತರ ಸುರಿಯುತ್ತಿರುವ ಮಳೆಯಿಂದ ನೀರು ಹೆಚ್ಚಾಗುವ
ಸಾಧ್ಯತೆ ಇದೆ.ನದಿ ಪಾತ್ರದಲ್ಲಿ ವಾಸಿಸುವ ಜನರಿಗೆ ಈಗಾಗಲೇ ಮುನ್ನೆಚ್ಚರಿಕೆಯನ್ನು ನೀಡಲಾಗಿದ್ದು ತಗ್ಗು ಪ್ರದೇಶದ ಮನೆಗಳಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಪ್ರದೇಶವಾದ ಸ್ಥಳಗಳಿಗೆ ಅಧಿಕಾರಿಗಳು ಕಳುಹಿಸಬೇಕಿದೆ.
*ತಲೆಕೆಳಗಾದ ಪ್ರತೀತಿ:*
ಪ್ರತಿಯೊಂದು ಬಾರಿ ಬಾಗಿನ ಬಿಟ್ಟ ನಂತರ ಮಳೆ ಕಡಿಮೆಯಾಗಿ ನದಿಯ ನೀರಿನ ಮಟ್ಟ ಕೂಡ ಕಡಿಮೆ ಆಗುತ್ತದೆ ಎಂಬ ಪ್ರತೀತಿ ಇದೆ. ಆದರೆ ಈ ಬಾರಿ ಆ ಪ್ರತೀತಿ ತಲೆ ಕೆಳಗಾಗಿದೆ.ಅದರಲ್ಲೂ ಈ ಬಾರಿ ನಾಲ್ಕು ಬಾರಿ ತುಂಗಾ ನದಿಗೆ ಬಾಗಿನ ಅರ್ಪಿಸಲಾಗಿತ್ತು. ಆದರೂ ಬಾಗಿನ ಅರ್ಪಿಸಿದ ನಂತರ ರಾಮಮಂಟಪ ಮುಳುಗಿ ಹೊಸ ಇತಿಹಾಸ ಬರೆದಿದೆ.