5:25 PM Monday31 - March 2025
ಬ್ರೇಕಿಂಗ್ ನ್ಯೂಸ್
PDO | ಮಾದರಿ ಗ್ರಾಮ ಪಂಚಾಯತಿ ನಿರ್ಮಾಣದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ… Bangalore | ಸಬಲೀಕರಣ ಜತೆಗೆ ಮಹಿಳಾ ಸುರಕ್ಷತೆ: ‘ಬಿ.ಸೇಫ್’ ಸಮೀಕ್ಷಾ ವರದಿ ಬಿಡುಗಡೆ Bangalore | ಬೇಡಿಕೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಬ್ಯಾಂಕ್ ನಿವೃತ್ತರ ಒಕ್ಕೂಟಗಳ… MSIL | ಸರಕಾರಿ, ಖಾಸಗಿ ಉತ್ಪನ್ನಗಳ ಮಾರಾಟ, ಖರೀದಿಗೆ ನೆರವಾಗಲಿದೆ ಇ ಪೋರ್ಟಲ್‌ Chikkamagaluru | ಬಾಲ ಹಿಡಿದು ಎತ್ತಿದ ಉರಗ ತಜ್ಞರು: ನುಂಗಿದ್ದ 10 ಮೊಟ್ಟೆಗಳನ್ನು… Speaker Talking | ವಿಧಾನ ಸೌಧಕ್ಕೆ ವರ್ಣರಂಜಿತ ದೀಪಾಲಂಕಾರ; ಯಾವಾಗ ಉದ್ಘಾಟನೆ?; ಸ್ಪೀಕರ್… ರಾಜ್ಯ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ ಕಪಿಮುಷ್ಟಿಯಲ್ಲಿದೆ: ಹಾಲು ದರ ಏರಿಕೆಗೆ ಕೇಂದ್ರ… ಕೋಲಾರ ಜಿಲ್ಲೆಯಲ್ಲಿ ಸುಮಾರು 10 ಸಾವಿರ ಎಕರೆ ಅರಣ್ಯ ಭೂಮಿ ಒತ್ತುವರಿ; ತೇರಹಳ್ಳಿ… Protest in Delhi | ‘ಉದ್ಯೋಗ ಕೊಡಿ ಅಥವಾ ಅಧಿಕಾರ ತ್ಯಜಿಸಿ’: ಕೇಂದ್ರ… Medical College | ಗದಗ ಮೆಡಿಕಲ್ ಕಾಲೇಜಿಗೆ ಕೆ.ಎಚ್. ಪಾಟೀಲ್ ಹೆಸರು: ರಾಜ್ಯ…

ಇತ್ತೀಚಿನ ಸುದ್ದಿ

ಪೂರ್ಣ ಸ್ವರಾಜ್ಯದ ಘೋಷಣೆಯ ದಿನ ಗಣರಾಜ್ಯೋತ್ಸವ: ಏನಿದರ ವಿಶೇಷ? ಏನಿದರ ಮಹತ್ವ?

26/01/2022, 11:24

ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಇರುವ ಸರಕಾರವೇ ಪ್ರಜಾಪ್ರಭುತ್ವ. ಇಲ್ಲಿ ಪ್ರಜೆಗಳೇ ಪ್ರಭುಗಳಾಗಿ ಆಡಳಿತ ನಡೆಸಬೇಕಾದರೆ ಪ್ರಬುದ್ಧವಾದ ಕಾನೂನು ಅತಿ ಅಗತ್ಯ. ಇಡೀ ದೇಶದ ಆಡಳಿತ ವ್ಯವಸ್ಥೆಗೆ  ಸರಿಯಾಗುವಂತಹ  ಕಾನೂನನ್ನು ರಚಿಸಿ ಜಾರಿಗೊಳಿಸಿದಂತಹ ಮಹತ್ವಪೂರ್ಣ ದಿನ ಜನವರಿ 26 ಗಣರಾಜ್ಯೋತ್ಸವ ದಿನ.

ವ್ಯಾಪಾರಕ್ಕಾಗಿ ತಕ್ಕಡಿ ಹಿಡಿದುಕೊಂಡು ಬಂದಂತಹ ಬ್ರಿಟಿಷರು ತಮ್ಮ ಚಾಣಾಕ್ಷತನದಿಂದ ಇಡೀ ಭಾರತದ ಆಡಳಿತವನ್ನು ತಮ್ಮ ಕಪಿಮುಷ್ಟಿಗೆ ತೆಗೆದುಕೊಂಡು ಭಾರತೀಯರನ್ನು ದಾಸ್ಯ ಶೃಂಕಲೆಗೆ ತಳ್ಳಿದ್ದರು. ಹಲವಾರು ಸ್ವಾತಂತ್ರ್ಯ ಹೋರಾಟಗಾರರ ಶ್ರಮದಿಂದ ಬ್ರಿಟಿಷರ ಆಡಳಿತದಿಂದ ಬಿಡುಗಡೆ ಹೊಂದಿ 1947 ಆಗಸ್ಟ್ 15ರಂದು ಭಾರತವು ಸ್ವಾತಂತ್ರ್ಯಗೊಂಡಿತು.

ಭಾರತವು ಸ್ವತಂತ್ರ್ಯ ಗೊಂಡರೆ ಸಾಕೇ….? ಆಡಳಿತ ನಡೆಸಲು ಬೇಕಾದಂತಹ ಕಾನೂನಿನ ಅವಶ್ಯಕತೆ ಭಾರತೀಯರಿಗಿತ್ತು.ಈ ನಿಟ್ಟಿನಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ರವರ ನೇತೃತ್ವದಲ್ಲಿ ಸಂವಿಧಾನ ಕರಡು ಸಮಿತಿ ರಚಿಸಲಾಯಿತು. ಈ ಸಮಿತಿಯು ಸಂವಿಧಾನದ ಕರಡನ್ನು ಸಿದ್ಧಪಡಿಸಿ 1947 ನವೆಂಬರ್ 4 ರಂದು ಶಾಸನಸಭೆಯಲ್ಲಿ ಮಂಡಿಸಿತು. 1949 ನವೆಂಬರ್ 26ರಂದು ಶಾಸನಸಭೆಯಲ್ಲಿ ಅಂಗೀಕರಿಸಲ್ಪಟ್ಟಿತು.. ಹಲವಾರು ಪರಿಶೀಲನೆ ಮತ್ತು ತಿದ್ದುಪಡಿಗಳ ನಂತರ 1950 ಜನವರಿ 26ರಂದು ಸಂವಿಧಾನವು ಜಾರಿಗೆ ಬಂದಿತು.

ಜನವರಿ 26 ಸ್ವಾತಂತ್ರ್ಯ ಚಳುವಳಿಯಲ್ಲಿ ಮಹತ್ತರವಾದಂತಹ ದಿನವಾಗಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಲಾಹೋರಿನಲ್ಲಿ ನಡೆದ ಅಧಿವೇಶನದಲ್ಲಿ  1929 ಜನವರಿ 26ರಂದು ಪೂರ್ಣ ಸ್ವರಾಜ್ಯದ ಘೋಷಣೆಯನ್ನು ಮಾಡಿತ್ತು. ಇದರ ಸವಿ ನೆನಪಿಗಾಗಿ ಜನವರಿ 26 ರಂದೇ ಸಂವಿಧಾನ ಜಾರಿಗೆ ತರಲಾಯಿತು..

ಜಗತ್ತಿನ ಅತಿ ದೊಡ್ಡ ಲಿಖಿತ ಸಂವಿಧಾನ ಭಾರತದ ಸಂವಿಧಾನವಾಗಿದೆ. ಸಂವಿಧಾನ ರಚನೆಯಲ್ಲಿ ಹಲವಾರು ಗಣ್ಯರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್,  ಗೋಪಾಲ ಸ್ವಾಮಿ ಅಯ್ಯಂಗಾರ್, ಕೆ ಎಂ.ಮುನ್ಶಿ, ಬೆನಗಲ್ ನರಸಿಂಗರಾಯರು, ಸಾದುಲ್ಲ , ಕೃಷ್ಣಮಾಚಾರಿ  ಮೊದಲಾದ ಮಹಾನುಭಾವರು  ಹಲವಾರು ದೇಶಗಳ ಸಂವಿಧಾನಗಳ ಅಧ್ಯಯನವನ್ನು ಮಾಡಿ ಭಾರತಕ್ಕೆ ಅತೀ ದೊಡ್ಡ ಸಂವಿಧಾನವನ್ನು ರಚಿಸುವಲ್ಲಿ ಯಶಸ್ವಿಯಾದರು..

465 ವಿಧಿಗಳು, 22 ಭಾಗಗಳು 12 ಅನುಚ್ಛೆದ ಗಳು 118 ತಿದ್ದುಪಡಿಗಳನ್ನೂ ಹೊಂದಿದ  ಭಾರತೀಯ ಸಂವಿಧಾನ ರಚನೆಗೆ ತೆಗೆದುಕೊಂಡ ಅವಧಿ ಬರೋಬ್ಬರಿ  2 ವರ್ಷ 11 ತಿಂಗಳು18 ದಿನಗಳು.

ಭಾರತದ  ಸಂವಿಧಾನವನ್ನು ಕೈಯಲ್ಲಿ ಬರೆಯಲಾಗಿದ್ದು, ಇಂಗ್ಲಿಷ್ ಮತ್ತು ಹಿಂದಿಯಲ್ಲಿದೆ. ಸಂವಿಧಾನದ ಮೂಲ ಪ್ರತಿಗಳನ್ನು ವಿಶೇಷ ಹೀಲಿಯಂ ತುಂಬಿದ ಕವಚಗಳಲ್ಲಿ ಸಂರಕ್ಷಿಸಲಾಗಿದ್ದು, ಇದು ಭಾರತದ ಸಂಸತ್ ಭವನದ ಗ್ರಂಥಾಲಯದಲ್ಲಿ ಸಂಗ್ರಹಿಸಿಡಲಾಗಿದೆ.

ಭಾರತೀಯ ಸಂವಿಧಾನ ಹಲವಾರು ವಿಶೇಷತೆಗಳನ್ನು ಹೊಂದಿದೆ. ಸಂವಿಧಾನದಲ್ಲಿ ಭಾರತೀಯರ ಮೂಲಭೂತ ಹಕ್ಕುಗಳು, ಕರ್ತವ್ಯಗಳು, ರಾಜ್ಯ ನೀತಿ ನಿರ್ದೇಶಕ ತತ್ವಗಳು, ಮತದಾನ ಪದ್ಧತಿ, ಏಕಪೌರತ್ವ, ಜಾತ್ಯತೀತತೆ ಸಾರ್ವಭೌಮತ್ವ , ಗಣರಾಜ್ಯ, ತುರ್ತುಪರಿಸ್ಥಿತಿ, ಶಾಸಕಾಂಗ ಪದ್ಧತಿಗಳ ಬಗ್ಗೆ  ವಿವರಣೆಗಳಿವೆ.

ಸಂವಿಧಾನದ ಪೂರ್ವ ಪೀಠಿಕೆಯು ಸಂವಿಧಾನದ ದಿಕ್ಸೂಚಿಯಂತೆ ಕೆಲಸವನ್ನು ಮಾಡುತ್ತದೆ.

ಸಂವಿಧಾನದ ಪೀಠಿಕೆಯು ಭಾರತ ಸರಕಾರ ಮತ್ತು ನಾಗರೀಕರು ಅನುಸರಿಸಬೇಕಾದ ಬೇಕಾದ ಧ್ಯೇಯವನ್ನು ತಿಳಿಸುತ್ತದೆ. ಪ್ರತಿಯೊಬ್ಬ ನಾಗರಿಕರು ಸಂವಿಧಾನದ ಪೀಠಿಕೆ ಬದ್ಧರಾಗಿ  ಇರಬೇಕಾಗುತ್ತದೆ..

“”ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯಸಿ”” ಭಾರತ ನಮ್ಮ ದೇಶ. ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕರ ಹೆಮ್ಮೆಯಾಗಿದೆ. ಸಂವಿಧಾನವು ಧರ್ಮಗ್ರಂಥಗಳಿ ಗಿಂತಲೂ ಸರ್ವ ಶ್ರೇಷ್ಠವಾಗಿದೆ. ಭಾರತದಲ್ಲಿ ಜನಿಸಿದ ಪ್ರತಿಯೊಬ್ಬ ನಾಗರಿಕರು ಸಂವಿಧಾನದ ಆಶಯಗಳಿಗೆ ಬದ್ಧರಾಗಿರುವ ಮೂಲಕ ಸುಂದರ ,ಸದೃಡ ಸಮಾಜ ನಿರ್ಮಾಣ ಮಾಡಬೇಕೆಂಬುದೇ ನಮ್ಮೆಲ್ಲರ ಆಶಯವಾಗಿದೆ.

✍️

ಇತ್ತೀಚಿನ ಸುದ್ದಿ

ಜಾಹೀರಾತು