ಇತ್ತೀಚಿನ ಸುದ್ದಿ
ಪುಂಜಾಲಕಟ್ಟೆ; ಅಪ್ರಾಪ್ತ ವಯಸ್ಸಿನ ಪುತ್ರನನ್ನು ಕತ್ತಿಯಿಂದ ಕಡಿದು ಕೊಂದ ತಂದೆ; ಕೊನೆಗೆ ತಾನೂ ಆತ್ಮಹತ್ಯೆಗೆ ಶರಣು
23/06/2021, 18:35
ಬೆಳ್ತಂಗಡಿ(reporterkarnataka news): ಮಂಗಳೂರಿನ ಹೊರವಲಯದ ಜಪ್ಪಿನಮೊಗರು ಬಳಿ ತಂದೆಯೊಬ್ಬರು ತನ್ನ ಪುತ್ರನಿಗೆ ಪೆಟ್ರೋಲ್ ಸುರಿದು ಕೊಲೆಗೆ ಯತ್ನಿಸಿದ ಘಟನೆಯ ಬೆನ್ನಲ್ಲೇ ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆಯಿಂದ ಆಘಾತಕಾರಿ ಸುದ್ದಿಯೊಂದು ಹೊರ ಬಿದ್ದಿದೆ. ಸ್ವಂತ ತಂದೆಯೇ ಅಪ್ರಾಪ್ತ ವಯಸ್ಸಿನ ಮಗನನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿ, ತಾನು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಪೂಂಜಾಲಕಟ್ಟೆಯ ನಿವಾಸಿ ಬಾಬು ನಾಯ್ಕ್ (58) ತನ್ನ 17ರ ಹರೆಯದ ಮಗ ಸಾತ್ವಿಕ್ ನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಾಬು ನಾಯ್ಕ್ ನ ಪತ್ನಿ ಗೇರು ಬೀಜ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ತಂದೆ ಕುಡಿದು ಬರುತ್ತಿದ್ದರು ಎಂದು ತಿಳಿದು ಬಂದಿದೆ.