12:12 AM Sunday6 - July 2025
ಬ್ರೇಕಿಂಗ್ ನ್ಯೂಸ್
Madikeri | ಕೊಡಗಿನಲ್ಲಿ ವ್ಯಾಪಕ ಅಬ್ಬರದ ಬಿರುಗಾಳಿ ಸಹಿತ ಮಳೆ: ಇಂದು ಶಾಲಾ-… ಕಾಫಿನಾಡು ಪ್ರವೇಶಿಸದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ… Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ… ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ

ಇತ್ತೀಚಿನ ಸುದ್ದಿ

ಪುದು ಬ್ರಹ್ಮಶ್ರೀ ನಾರಾಯಣ ಗುರು ವೇದಿಕೆಯಿಂದ ಪ್ರತಿಭಾ ಪುರಸ್ಕಾರ

08/08/2022, 16:26

ಬಂಟ್ವಾಳ:(reporterkarnataka.com):ಬಂಟ್ವಾಳ ಪುದು ಗ್ರಾಮದ ಬ್ರಹ್ಮಶ್ರೀ ನಾರಾಯಣ ಗುರು ವೇದಿಕೆಯ 8ನೇ ವಾರ್ಷಿಕ ಮಹಾ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಆದಿತ್ಯವಾರ ಪುದು ಕುಲಾಲ ಭವನದಲ್ಲಿ ಜರುಗಿತು.

ಕಾರ್ಯಕ್ರಮವನ್ನು ಮುಂಡ ಯಾನೆ ಮೋನಪ್ಪ ಪೂಜಾರಿ ಸುಜೀರು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಕುದ್ರೋಳಿ ಗೋಕರ್ಣನಾಥೇಶ್ವರ
ಕ್ಷೇತ್ರದ ಕೋಶಾಧಿಕಾರಿ ಆರ್. ಪದ್ಮರಾಜ್ ಮಾತನಾಡಿ
ಬಂಟ್ವಾಳ ತಾಲೂಕಿನ ಪುದು ಗ್ರಾಮದ ಬ್ರಹ್ಮಶ್ರೀ ನಾರಾಯಣಗುರು ವೇದಿಕೆಯಿಂದ ನಡೆಯುತ್ತಿರುವ ಸಮಾಜಮುಖಿ ಕಾರ್ಯಗಳು ಎಲ್ಲರಿಗೂ ಮಾದರಿ. ಈ ವೇದಿಕೆ ಮೂಲಕ ಗ್ರಾಮದಲ್ಲಿರುವ ಸುಮಾರು 350 ಬಿಲ್ಲವ ಕುಟುಂಬಗಳ ಮಾಹಿತಿ ಸಂಗ್ರಹ ಕಾರ್ಯ ನಡೆಸುವ ಮೂಲಕ ಎಲ್ಲರನ್ನೂ ಒಂದುಗೂಡಿಸುವ ಮೂಲ ಹಿರಿಯರ ಜತೆ ಯುವಕರನ್ನು ಮುಖ್ಯವಾಹಿನಿಯತ್ತ ತರಲು ತೊಡಗಿರುವುದು ಶ್ಲಾಘನೀಯ. ವೇದಿಕೆ ಇನ್ನಷ್ಟು ಸಮಾಜಮುಖಿ ಕಾರ್ಯ ನಡೆಸಲು ಈಗಾಗಲೇ ಯೋಜನೆ ರೂಪಿಸದ್ದು, ಈ ಎಲ್ಲ ಉತ್ತಮ ಕಾರ್ಯಗಳಿಗೂ ಬ್ರಹ್ಮಶ್ರೀ ನಾರಾಯಣ ಗುರುಗಳು, ಕುದ್ರೋಳಿ ಶ್ರೀ ಗೋಕರ್ಣನಾಥ ಮತ್ತು ಸಪರಿವಾರ ದೇವರು ಅನುಗ್ರಹ ಕರುಣಿಸಲಿ…ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ಉದ್ಯಮಿ ನಾಗೇಶ್ ಕೋಟ್ಯಾನ್, ನಾರಾಯಣ ಗುರು ಯುವ ವೇದಿಕೆ ಮಂಗಳೂರು ಸಲಹಾ ನಿರ್ದೇಶಕ ಎಂ.ಎಸ್. ಕೋಟ್ಯಾನ್, ಕಟ್ಟಡ ನಿರ್ಮಾಣ ಗುತ್ತಿಗೆದಾರ ಕೆ.ಉಮೇಶ ಸುವರ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಜಯಶ್ರೀ ಕೆ.ಎ., ಜಗದೀಶ ಬೊಳ್ಳನೆ,ಗೌರವಾಧ್ಯಕ್ಷ ನಾಗಪ್ಪ ಪೂಜಾರಿ ಕಚೇಲ, ಕೋಶಾಧಿಕಾರಿ ಅಶೋಕ ಹೊಗೆಗದ್ದೆ, ಕಾರ್ಯದರ್ಶಿ ಕಿಶೋರ್ ಸುಜೀರ್, ನೀಲಯ ಅಗರಿ ಮತ್ತಿರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಶ್ರೀ ನಾರಾಯಣ ಗುರು ವೇದಿಕೆ ಅಧ್ಯಕ್ಷ ಬಾಬು ಪೂಜಾರಿ ವಹಿಸಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು