ಇತ್ತೀಚಿನ ಸುದ್ದಿ
ಶಬರಿಮಲೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ: 18 ಮೆಟ್ಟಿಲೇರಿದ ದೇಶದ ಪ್ರಥಮ ಪ್ರಜೆ
22/10/2025, 20:41

ಪತ್ತನಂತಿಟ್ಟ(reporterkarnataka.com): ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಬೆಳಿಗ್ಗೆ ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾಸ್ಥಳ ಶಬರಿಮಲೆಗೆ ಭೇಟಿ ನೀಡಿ ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದರು.
ಪಂಪಾಗೆ ಆಗಮಿಸಿದ ರಾಷ್ಟ್ರಪತಿ ಅವರು ಪವಿತ್ರ ನದಿಯಲ್ಲಿ ಧಾರ್ಮಿಕ ಸ್ನಾನ ಮಾಡಿದರು. ನಂತರ ಪಂಬಾ ಗಣಪತಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅಲ್ಲಿ ಸಂಪ್ರದಾಯದಂತೆ ಇರುಮುಡಿ ಕಟ್ಟುವ ಪ್ರಕ್ರಿಯೆ ಕೈಗೊಂಡರು. ನಂತರ ವಿಶೇಷ ಭದ್ರತಾ ವಾಹನದ ಮೂಲಕ ಅಯ್ಯಪ್ಪ ಸ್ವಾಮಿ ಸನ್ನಿಧಾನ ತಲುಪಿದರು.
ರಾಷ್ಟ್ರಪತಿ ಮುರ್ಮು ಅವರನ್ನು ಅಯ್ಯಪ್ಪ ಸ್ವಾಮಿಯ ಸನ್ನಿಧಾನದಲ್ಲಿ ತಂತ್ರಿಗಳು ಪೂರ್ಣಕುಂಭದೊಂದಿಗೆ ಬರಮಾಡಿಕೊಂಡರು.
ದೇಶದ ಪ್ರಥಮ ಪ್ರಜೆ ಶಬರಿಮಲೆಯ ಪವಿತ್ರ ಮೆಟ್ಟಿಲುಗಳನ್ನು ಹತ್ತುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದರು.
ಇದಕ್ಕೂ ಮುನ್ನ, ರಾಷ್ಟ್ರಪತಿಗಳ ಬೆಂಗಾವಲು ಪಡೆ ಬೆಳಿಗ್ಗೆ 7:30ಕ್ಕೆ ತಿರುವನಂತಪುರದ ರಾಜಭವನದಿಂದ ಪತ್ತನಂತಿಟ್ಟದ ಪ್ರಮದಂನಲ್ಲಿರುವ ರಾಜೀವ್ ಗಾಂಧಿ ಒಳಾಂಗಣ ಕ್ರೀಡಾಂಗಣದ ಮೈದಾನಕ್ಕೆ ಆಗಮಿಸಿತ್ತು. ಅಲ್ಲಿಂದ ರಾಷ್ಟ್ರಪತಿ ಅವರನ್ನು ಹೆಲಿಕಾಪ್ಟರ್‌ನಲ್ಲಿ ಬೆಟ್ಟದ ದೇವಾಲಯಕ್ಕೆ ಕರೆದೊಯ್ಯಲಾಯಿತು.