ಇತ್ತೀಚಿನ ಸುದ್ದಿ
ಪ್ರಯಾಗ್‌ರಾಜ್ ಮಹಾ ಕುಂಭಮೇಳದಲ್ಲಿ ಭೀಕರ ಬೆಂಕಿ ದುರಂತ: ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸಲು ಹರಸಾಹಸ
20/01/2025, 16:02
ನವದೆಹಲಿ(reporterkarnataka.com):ಪ್ರಯಾಗ್‌ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ ಪ್ರದೇಶದಲ್ಲಿ ಪ್ರದೇಶದ ಶಾಸ್ತಿ ಸೇತುವೆ ಸೆಕ್ಟರ್-19 ಶಿಬಿರದಲ್ಲಿ ಹಾಗೂ ಸೆಕ್ಟರ್-5ರಲ್ಲೂ ಭೀಕರ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿ ಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಡುತ್ತಿದ್ದಾರೆ.
ಅಗ್ನಿ ಅವಘಡಕ್ಕೆ ಸದ್ಯ ಕಾರಣ ಏನು ಎಂಬುವುದು ತಿಳಿದು ಬಂದಿಲ್ಲ. ಕೋಟಿ-ಕೋಟಿ ಭಕ್ತರು ಸ್ಥಳದಲ್ಲಿ ಇದ್ದು, ಸಾವು-ನೋವುಗಳ ಕುರಿತು ಯಾವುದೇ ವರದಿ ಈವರೆಗೂ ಆಗಿಲ್ಲ. ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ, ಭಕ್ತರೆಲ್ಲರೂ ಚೆಲ್ಲಾಪಿಲ್ಲಿಯಾಗಿ ಓಡೋಡಿ ಹೋಗಿದ್ದು, ಅಗ್ನಿ ಅವಘಡ ವಿಡಿಯೋ ಸದ್ಯ ಹರಿದಾಡುತ್ತಿದೆ. ಸ್ಥಳದಲ್ಲಿ 30ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ವಾನಹಳು ಕಾರ್ಯಾಚರಣೆ ನಡೆಸುತ್ತಿವೆ. ವಿವೇಕಾನಂದ ಸೇವಾ ಸಮಿತಿ ಟೆಂಟ್‌ಗಳಲ್ಲಿ ಆಕಸ್ಮಿಕ ಅಗ್ನಿ ಅವಘಡ ನಡೆದಿದ್ದು ಹಲವು ಟೆಂಟ್‌ಗಳು ಬೆಂಕಿಗೆ ಸಂಪೂರ್ಣ ಆಹುತಿಯಾಗಿವೆ. ಒಂದು ಟೆಂಟ್‌ನಿಂದ ಮತ್ತೊಂದು…ಮಗದೊಂದು ಟೆಂಟ್‌ಗಳಿಗೆ ಬೆಂಕಿ ಆವರಿಸಿಕೊಂಡಿದ್ದು, ಸಿಲಿಂಡರ್ ಸ್ಪೋಟದಿಂದ ಈ ಅನಾಹುತ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.