ಇತ್ತೀಚಿನ ಸುದ್ದಿ
ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ ಸ್ವೀಕರಿಸಲು ಕೇರಳದ ಮಾಜಿ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ನಕಾರ
06/09/2022, 15:22
ತಿರುವನಂತಪುರ(reporterkarnataka.com): ಕಮ್ಯುನಿಸ್ಟರ ವಿರುದ್ಧ ಫಿಲಿಪ್ಪೀನ್ಸ್‌ನ ದಿವಂಗತ ಅಧ್ಯಕ್ಷರು ಕ್ರೂರ ವರ್ತನೆಗೆ ತೋರಿಸಿರುವುದನ್ನು ಪ್ರತಿಭಟಿಸಿ ಸಿಪಿಎಂ ಹಿರಿಯ ನಾಯಕಿ ಮತ್ತು ಕೇರಳದ ಮಾಜಿ ಆರೋಗ್ಯ ಸಚಿವ ಕೆ.ಕೆ. ಶೈಲಜಾ ಅವರು ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ.
ಶೈಲಜಾ ಅವರು ತಮ್ಮ ವೈಯಕ್ತಿಕ ಸಾಮರ್ಥ್ಯದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಲು ಆಸಕ್ತಿಯಿಲ್ಲದ ಕಾರಣ ನಿರಾಕರಿಸಿದ್ದಾರೆ ಎಂದು ಕೇರಳದಲ್ಲಿ ಸುದ್ದಿಗಾರರಿಗೆ ತಿಳಿಸಿದರೆ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ಕ್ರೂರ ಇತಿಹಾಸ ಹೊಂದಿರುವ ರಾಮನ್ ಮ್ಯಾಗ್ಸೆಸೆ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗಿದೆ ಎಂದು ಹೇಳಿದರು.
ಸಿಪಿಎಂನ ಕೇಂದ್ರ ಸಮಿತಿ ಸದಸ್ಯೆ ಶೈಲಜಾ ಅವರು ಪಕ್ಷದ ರಾಷ್ಟ್ರೀಯ ನಾಯಕತ್ವದ ಸಲಹೆ ಪಡೆದು ಈ ನಿರ್ಧಾರ ಕೈಗೊಂಡಿದ್ದಾರೆ.