ಇತ್ತೀಚಿನ ಸುದ್ದಿ
ಪ್ರಾಥಮಿಕ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಸುಗಮ: ಸ್ಥಳದಲ್ಲೇ ಆದೇಶಪತ್ರ ವಿತರಿಸಿದ ಡಿಡಿಪಿಐ
21/11/2021, 09:59
ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ
info.reporterkarnataka@gmail.com
ನಗರದ ಡಿಡಿಪಿಐ ಕಚೇರಿಯಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ನಡೆದ ಪ್ರಾಥಮಿಕ ಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆ ಪ್ರಕ್ರಿಯೆ ನಡೆದಿದೆ.
ಪ್ರಕ್ರಿಯೆಯಲ್ಲಿ 10 ಮಂದಿ ಭಾಗವಹಿಸಿದ್ದು , ಸ್ಥಳದಲ್ಲೇ ಡಿಡಿಪಿಐ ರೇವಣಸಿದ್ದಪ್ಪ ವರ್ಗಾವಣೆ ಆದೇಶ ವಿತರಿಸಿದರು. ಜಿಲ್ಲೆಯಲ್ಲಿ ಪಾಥಮಿಕ ಶಾಲಾ ವಿಭಾಗದಿಂದ 20 ಮಂದಿ ಪರಸ್ಪರ ವರ್ಗಾವಣೆಗೆ ಅರ್ಜಿ ಹಾಕಿದ್ದು , 12 ಮಂದಿ ಹಾಜರಾಗಿದ್ದರು ಮತ್ತು 10 ಮಂದಿ ವರ್ಗಾವಣೆ ಆದೇಶ ಪಡೆದುಕೊಂಡರು. ವಿಕಲಚೇತನರೊಬ್ಬರು ಸ್ಥಳ ಆಯ್ಕೆ ಮಾಡಿಕೊಂಡಿದ್ದು , ಡಿಡಿಪಿಐ ರೇವಣಸಿದ್ದಪ್ಪ , ಶಿಕ್ಷಣಾಧಿಕಾರಿಗಳಾದ ಎ.ಎನ್.ನಾಗೇಂದ್ರಪ್ರಸಾದ್ , ಸಿ.ಆರ್.ಅಶೋಕ್ ಅವರಿದ್ದ ಸ್ಥಳಕ್ಕೆ ಹೋಗಿ ಆದೇಶ ವಿತರಿಸಿದರು .
ಡಿಡಿಪಿಐ ರೇವಣ ಸಿದ್ದಪ್ಪ ಈ ಸಂದರ್ಭದಲ್ಲಿ ಮಾತನಾಡಿ , ವರ್ಗಾವಣೆಯಾಗಿರುವ ಶಿಕ್ಷಕರು ಸಮಯಪಜ್ಜೆಯಿಂದ ವರ್ತಿಸಿ , ಸಕಾಲಕ್ಕೆ ಹೋಗಿ ಶಾಲೆಗಳಲ್ಲಿ ವರದಿ ಮಾಡಿಕೊಳ್ಳಲು ಸೂಚಿಸಿದರು .
ವರ್ಗಾವಣೆ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿದ್ದು , ಶಿಕ್ಷಕರನ್ನು ಅಲೆಸದೇ ಸ್ಥಳದಲ್ಲೇ ವರ್ಗಾವಣೆ ಆದೇಶ ಪತ ವಿತರಿಸಲಾಗಿದೆ ಎಂದು ತಿಳಿಸಿದರು .
ಈ ಸಂದರ್ಭದಲ್ಲಿ ಶಿಕ್ಷಣಾಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ , ಸಿ.ಆರ್.ಅಶೋಕ್ , ಪಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪಧಾನ ಕಾರ್ಯದರ್ಶಿ ಎಂ.ನಾಗರಾಜ್ ಎಷಯ ಪರಿವೀಕ್ಷಕ ಕೃಷ್ಣಪ್ಪ , ಅಧೀಕ್ಷಕರಾದ ಮಂಜುನಾಥರೆಡ್ಡಿ ಗೋವಿಂದಗೌಡ , ಸಿಬ್ಬಂದಿ ಚಿರಂಜೀವಿ ಮತ್ತಿತರರಿದ್ದರು.