10:23 PM Sunday5 - April 2026
ಬ್ರೇಕಿಂಗ್ ನ್ಯೂಸ್
ಕೇರಳ ಚುನಾವಣೆಗೆ ಕರ್ನಾಟಕದ ಹಣ?: ತಿರುವನಂತಪುರದಲ್ಲಿ ಕಂತೆ ಕಂತೆ ನೋಟು ಸಮೇತ ಸಿಕ್ಕಿಬಿದ್ದ… ಚಾರಣಕ್ಕೆ ತೆರಳಿ 4 ದಿನಗಳಿಂದ ನಾಪತ್ತೆಯಾಗಿದ್ದ ಕೇರಳದ ಟೆಕ್ಕಿ ಶರಣ್ಯ ಪತ್ತೆ ಸಿದ್ದರಾಮಯ್ಯ ಬಗ್ಗೆ ಪ್ರತಾಪ್ ಸಿಂಹ ನೀಡಿರುವ ಹೀನಾಯ ಹೇಳಿಕೆ ಬಿಜೆಪಿಯ ನೀಚ ರಾಜಕಾರಣ… ಎಸ್ಸೆಸ್ಸೆಲ್ಸಿ ಗ್ರೇಡಿಂಗ್ ಪದ್ಧತಿಗೆ ರಾಜ್ಯಪಾಲರು ವಿರೋಧ: ನಾಳೆ ರಾಜಭವನಕ್ಕೆ ಕರವೇ ಮುತ್ತಿಗೆ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ’: ರಾಜ್ಯಪಾಲರಿಗೆ ಕರವೇ ನಾರಾಯಣ ಗೌಡ ಖಡಕ್… ದೇಶದಲ್ಲೇ ಅತಿ ಹೆಚ್ಚು | ಬೆಂಗಳೂರಿಂದ 272 ಅಕ್ರಮ ಬಂಗ್ಲಾ ವಲಸಿಗರು ಗಡಿಪಾರು Kodagu | ಕುಶಾಲನಗರ: ಹರದೂರು – ಕಾಜೂರು ಮಕಾಂ ಉರೂಸ್ ಗೆ ಚಾಲನೆ ತ.ನಾ. ಚುನಾವಣೆ | ಚಾಮರಾಜನಗರ ಸಮೀಪದ ಮೆಟ್ಟೂರು ಕ್ಷೇತ್ರದಿಂದ ವೀರಪ್ಪನ್‌ ಪುತ್ರಿ ವಿದ್ಯಾರಾಣಿ… ಅಡಿಕೆಯೊಳಗಿದ್ದ ಸ್ಫೋಟಕ ಸಿಡಿದು ಮಹಿಳೆಗೆ ಗಾಯ: ಅಡಿಕೆಯಲ್ಲಿ ಇದ್ದಿದ್ದಾದರೂ ಏನು..? ಪ್ರಕರಣದ ಸತ್ಯಾಂಶ… ನಂಜನಗೂಡು: ಶ್ರದ್ಧಾ ಭಕ್ತಿಯಿಂದ ನಡೆದ ಪುರಾಣ ಪ್ರಸಿದ್ಧ ಕಳಲೆ ಶ್ರೀ ಲಕ್ಷ್ಮಿಕಾಂತ ಸ್ವಾಮಿ…

ಇತ್ತೀಚಿನ ಸುದ್ದಿ

ಸಿದ್ದರಾಮಯ್ಯ ಬಗ್ಗೆ ಪ್ರತಾಪ್ ಸಿಂಹ ನೀಡಿರುವ ಹೀನಾಯ ಹೇಳಿಕೆ ಬಿಜೆಪಿಯ ನೀಚ ರಾಜಕಾರಣ ಬಯಲು ಮಾಡಿದೆ: ರಣದೀಪ್ ಸಿಂಗ್ ಸುರ್ಜೇವಾಲಾ ಟೀಕೆ

05/04/2026, 18:58

ಬೆಂಗಳೂರು(reorterkarnattaka.com):ಬಾಗಲಕೋಟೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಪ್ರತಾಪ್ ಸಿಂಹ ನೀಡಿರುವ ಹೀನಾಯ ‘ಕಟ್’ ಹೇಳಿಕೆ ಬಿಜೆಪಿಯ ನೀಚ ರಾಜಕಾರಣವನ್ನು ಮತ್ತೊಮ್ಮೆ ಬಟ್ಟಬಯಲು ಮಾಡಿದೆ. ಪ್ರತಾಪ್ ಸಿಂಹರ ಈ ಆಕ್ರೋಶ ಹತಾಶೆಯಿಂದ ಹುಟ್ಟಿದ್ದು ಎನ್ನುವುದು ಈಗ ಸ್ಪಷ್ಟ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ಎಕ್ಸ್ ನಲ್ಲಿ ಪ್ರತಾಪ್ ಸಿಂಹ ಮಾತನಾಡಿರುವ ವಿಡಿಯೋ ತುಣುಕನ್ನು ಹಂಚಿಕೊಂಡಿರುವ ಅವರು, ಹಿಂದುಳಿದ ಸಮುದಾಯದ ಅತ್ಯಂತ ಹಿರಿಯ ನಾಯಕ ಸಿದ್ದರಾಮಯ್ಯನವರನ್ನು ಅವಮಾನಿಸಲು ಬಿಜೆಪಿ ಉದ್ದೇಶಪೂರ್ವಕವಾಗಿ ಪ್ರತಾಪ್ ಸಿಂಹರನ್ನು ಬಳಸಿಕೊಳ್ಳುತ್ತಿದೆ ಎಂದು ಟೀಕಿಸಿದ್ದಾರೆ.
ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಮತ್ತು ಅಲ್ಪಸಂಖ್ಯಾತರನ್ನು ತಮ್ಮ ಮನುವಾದಿ ದೃಷ್ಟಿಕೋನದ ಅನುಸಾರ ಕೀಳಾಗಿ ಮತ್ತು ಅಧೀನರಾಗಿ ಕಾಣುತ್ತೇವೆ ಎಂಬ ಸಂದೇಶವನ್ನು ರವಾನಿಸುವ ಏಕೈಕ ಉದ್ದೇಶದಿಂದ. ಇಂತಹ ನಡವಳಿಕೆ ಬಿಜೆಪಿಯಲ್ಲಿನ ವಿಚಾರ, ನೈತಿಕತೆ ಮತ್ತು ನಾಯಕತ್ವದ ಸಂಪೂರ್ಣ ದಿವಾಳಿತನವನ್ನು ಬಯಲು ಮಾಡುತ್ತದೆ ಎಂದು ಸುರ್ಜೇವಾಲಾ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ‘ಕೊಂದು ದೇಹವನ್ನು ಫ್ರಿಡ್ಜ್ ನಲ್ಲಿ ತುಂಬುತ್ತೇವೆ’ ಎಂಬ ಹೇಯ ಬೆದರಿಕೆ ಸೇರಿದಂತೆ ಈ ಹಿಂದೆ ಇದೇ ವಿಭಜನಕಾರಿ ಶಕ್ತಿಗಳಿಂದ ಜೀವಬೆದರಿಕೆಗಳು ಕೂಡ ಬಂದಿವೆ. ಇದು ಒಬ್ಬ ವ್ಯಕ್ತಿಯ ಹುಚ್ಚಾಟವಲ್ಲ-ಇದು ಬಿಜೆಪಿಯ ರಾಜಕೀಯ ಸಂಸ್ಕೃತಿಯೇ ಆಗಿದೆ ಎಂದು ಅವರು ದೂರಿದ್ದಾರೆ.
ಇದೇ ಪ್ರತಾಪ್ ಸಿಂಹ ಬಿಜೆಪಿ ಕೇಂದ್ರ ನಾಯಕತ್ವದ ಸೂಚನೆಯ ಮೇರೆಗೆ ಜನರಿಂದ ಆಯ್ಕೆಯಾದ ಕಾಂಗ್ರೆಸ್‍ನ ಕರ್ನಾಟಕ ಸರಕಾರವನ್ನು ಒಮ್ಮೆಯಲ್ಲ, ಪದೇ ಪದೇ ‘ತಾಲಿಬಾನ್ ಸರಕಾರ’ ಎಂದು ಕರೆದರು. ವಿಷಕಾರಿ ಭಾಷಣ ಹರಡುವುದರಲ್ಲಿ ಬಿಜೆಪಿ ನಾಯಕರು ಪುನರಾವರ್ತಿತ ಅಪರಾಧಿಗಳು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅನಂತಕುಮಾರ್ ಹೆಗಡೆ ಕೇಂದ್ರ ಸಚಿವರಾಗಿದ್ದಾಗಲೆ ಸಚಿವ ದಿನೇಶ್ ಗುಂಡೂರಾವ್ ಅವರ ಪತ್ನಿಯನ್ನು ಬಹಿರಂಗವಾಗಿ ಅವಮಾನಿಸಿದರು. ಬಿಜೆಪಿ ಶಾಸಕ ಸಿ.ಟಿ.ರವಿ ವಿಧಾನಪರಿಷತ್ತಿನ ಒಳಗೇ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಅವಮಾನಿಸಿ ಅತ್ಯಂತ ಕೆಳಮಟ್ಟಕ್ಕೆ ಇಳಿದರು. ಇತರ ಬಿಜೆಪಿ ನಾಯಕರು ವ್ಯಕ್ತಿಗಳನ್ನು, ಸಮುದಾಯಗಳನ್ನು ಮತ್ತು ಧರ್ಮಗಳನ್ನು ಅವಮಾನಿಸುವ, ಅಗೌರವಿಸುವ ಮತ್ತು ಹೀಯಾಳಿಸುವ ಹೇಳಿಕೆಗಳನ್ನು ನೀಡುವುದರಲ್ಲಿ ಪುನರಾವರ್ತಿತ ಅಪರಾದಿಗಳಾಗಿದ್ದಾರೆ ಎಂದು ಸುರ್ಜೇವಾಲಾ ಹೇಳಿದ್ದಾರೆ.
ನಿಂದನೆಯೇ ಬಿಜೆಪಿ ನಾಯಕರ ಮ್ಯಾಗ್ನಾ ಕಾರ್ಟಾ ಆಗಿರುವಾಗ, ಅವರಿಂದ ಅಭಿವೃದ್ಧಿ, ಪ್ರಗತಿ ಅಥವಾ ಸೌಹಾರ್ದದ ಭಾಷೆಯನ್ನು ನಿರೀಕ್ಷಿಸುವುದು ವ್ಯರ್ಥ. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭೆ ಉಪಚುನಾವಣೆಗಳಲ್ಲಿ ಬಿಜೆಪಿಯ ಹತಾಶೆ ಜನರ ತಿರಸ್ಕಾರ ಮತ್ತು ಎ.9ರಂದು ಸನ್ನಿಹಿತ ಸೋಲಿನ ಮುನ್ಸೂಚನೆಯಿಂದ ಹುಟ್ಟಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಇದರಿಂದ ವಿಚಲಿತರಾದ ಮತ್ತು ಕನ್ನಡಿಗರ ಮೇಲೆ ಸಿಟ್ಟಿಗೆದ್ದ ರಾಜ್ಯ ಮತ್ತು ಕೇಂದ್ರ ಬಿಜೆಪಿ ನಾಯಕತ್ವ ಈಗ ಬಡವರ ಮತ್ತು ಶೋಷಿತರ ನಾಯಕತ್ವದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೇಲೆ ನಿಂದನೆ ಮತ್ತು ಅವಮಾನ ಹೊರಿಸುವ ಕಾರ್ಯವನ್ನು ಪ್ರತಾಪ್ ಸಿಂಹರಂತಹ ವ್ಯಕ್ತಿಗಳಿಗೆ ವಹಿಸಿಕೊಟ್ಟಿದೆ ಎಂದು ಅವರು ಹೇಳಿದ್ದಾರೆ.
ಪರಮ ವಿಪರ್ಯಾಸ ಎಂದರೆ-ಬಿಜೆಪಿ ನಾಯಕತ್ವ ಮೊದಲು ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿತು. ಯತ್ನಾಳ್ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಬಹಿರಂಗವಾಗಿ ‘ಭ್ರಷ್ಟ ಕುಟುಂಬ’ ಎಂದು ಕರೆಯುತ್ತಾರೆ. ಬಾಗಲಕೋಟೆ ವಿಧಾನಸಭೆಯಲ್ಲಿ ಬಿಜೆಪಿ ಮತ್ತು ಅದರ ಅಭ್ಯರ್ಥಿ ವೀರಣ್ಣ ಚರಂತಿಮಠ ಈಗ ಯತ್ನಾಳ್ ಅವರನ್ನೆ ತಮ್ಮ ‘ಸ್ಟಾರ್ ಪ್ರಚಾರಕ’ರನ್ನಾಗಿ ನೇಮಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸಾವಿರ ಹೋಳಾಗಿ ಒಡೆದಿರುವ, ಸ್ವಂತ ಮನೆಯನ್ನೇ ಸರಿ ಮಾಡಿಕೊಳ್ಳಲಾಗದ ಪಕ್ಷ ಈಗ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಮತ್ತು ಅಲ್ಪಸಂಖ್ಯಾತರನ್ನು ಹಾಗೂ ಅವರ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ಅವಮಾನಿಸುತ್ತಿದೆ. ಕರ್ನಾಟಕಕ್ಕೆ ಪ್ರಗತಿಪರ ಚಿಂತನೆ, ವೈಜ್ಞಾನಿಕ ಮನೋಭಾವ, ಸರ್ವಧರ್ಮ ಸಮಭಾವ ಮತ್ತು ಸಾಮಾಜಿಕ ಸೌಹಾರ್ದದ ಹೆಮ್ಮೆಯ ಪರಂಪರೆ ಇದೆ. ರಾಜಕಾರಣವನ್ನು ಚರಂಡಿಗೆ ಎಳೆಯಲು ಹೊರಟ ಬಿಜೆಪಿ ನಾಯಕರ ಹಿಂದೆ ಸ್ವಾಭಿಮಾನಿ ಕನ್ನಡಿಗರು ಹೋಗುವುದಿಲ್ಲ ಎಂದು ಸುರ್ಜೇವಾಲಾ ಹೇಳಿದ್ದಾರೆ.
*ಕ್ಷಮೆ ಕೇಳಲು ಆಗ್ರಹ:* ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರತಾಪ್ ಸಿಂಹ ನೀಡಿರುವ ಅವಹೇಳನಕಾರಿ ಮತ್ತು ಅಸಹನೀಯ ಹೇಳಿಕೆಗಳಿಗಾಗಿ 6.5 ಕೋಟಿ ಕನ್ನಡಿಗರಿಗೆ, ವಿಶೇಷವಾಗಿ ಒಬಿಸಿ, ಎಸ್‍ಸಿ ಮತ್ತು ಅಲ್ಪಸಂಖ್ಯಾತರಿಗೆ ಸಾರ್ವಜನಿಕ ಕ್ಷಮಾಪಣೆ ಕೋರಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪ್ರತಾಪ್ ಸಿಂಹರನ್ನು ಬಿಜೆಪಿ ಉಚ್ಛಾಟಿಸಬೇಕು. ಹಾಗೆ ಮಾಡದಿದ್ದರೆ, ಈ ನೀಚ ಅವಮಾನ ಮತ್ತು ಅಗೌರವವನ್ನು ಹೇರಲು ಬಿಜೆಪಿಯ ರಾಜ್ಯ ಮತ್ತು ಕೇಂದ್ರ ನಾಯಕತ್ವ ಉದ್ದೇಶಪೂರ್ವಕವಾಗಿ ಪ್ರತಾಪ್ ಸಿಂಹರನ್ನು ನಿಯೋಜಿಸಿದೆ ಎಂಬುದು ಸಾಬೀತಾಗುತ್ತದೆ. ಆತನ ವಿರುದ್ಧ ಎಫ್‍ಐಆರ್ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಬಿಜೆಪಿ ಮತ್ತು ಅದರ ನಾಯಕರು ಕ್ಷಮೆ ಕೇಳದಿದ್ದರೆ, ಬಡವರು ಮತ್ತು ತುಳಿತಕ್ಕೊಳಗಾದವರು ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆಗಳಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಸುರ್ಜೇವಾಲಾ ಎಚ್ಚರಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು