ಇತ್ತೀಚಿನ ಸುದ್ದಿ
ಪ್ರಧಾನಿ ಮೋದಿ ಜರ್ಮನಿ, ಯುಎಇ ಪ್ರವಾಸ: 60 ತಾಸು, 15 ಕಾರ್ಯಕ್ರಮ; ಇದು ಪಿಎಂ ಪ್ರೋಗ್ರಾಂ ಶೆಡ್ಯೂಲ್
26/06/2022, 16:01
ಹೊಸದಿಲ್ಲಿ(reporterkarnataka.com): ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ 3 ದಿನಗಳ ಕಾಲ ಜರ್ಮನಿ ಮತ್ತು ಯುಎಇ ಪ್ರವಾಸ ಕೈಗೊಳ್ಳಲಿದ್ದು, 60 ತಾಸಿನಲ್ಲಿ 15 ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಜಿ7 ಶೃಂಗಸಭೆಯಲ್ಲಿ ಭಾಗಿಯಾಗಲಿರುವ ಪ್ರಧಾನಿ ಮೋದಿ ಬಳಿಕ 12 ಜಾಗತಿಕ ನಾಯಕರ ಜತೆ ಪ್ರತ್ಯೇಕ ಸಭೆ ಕೂಡ ನಡೆಸಲಿದ್ದಾರೆ.
ಮ್ಯುನಿಚ್‌ನಲ್ಲಿ ಪ್ರಧಾನಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಜೂನ್ 28ರಂದು ಯುಎಇ ಭೇಟಿ ವೇಳೆ ದೊರೆ ಶೇಖ್ ಖಲೀಫಾಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.