ಇತ್ತೀಚಿನ ಸುದ್ದಿ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ: ವಿವಿಧಡೆ ಇ-ಕೆವೈಸಿ ಶಿಬಿರ
28/06/2023, 21:02

ಉಡುಪಿ(reporterkarnataka.com): ಕೃಷಿ ಇಲಾಖೆಯ ವತಿಯಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರು ಇ-ಕೆವೈಸಿ ಮಾಡಿಸಲು ಕುಂದಾಪುರ ತಾಲೂಕಿನ ಕುಂದಾಪುರ, ವಂಡ್ಸೆ ಮತ್ತು ಬೈಂದೂರು ಹೋಬಳಿಯ ವಿವಿಧ ಗ್ರಾಮಗಳಲ್ಲಿ ಈ ಕೆಳಕಂಡ ದಿನಗಳಲ್ಲಿ ಇ-ಕೆವೈಸಿ ಶಿಬಿರಗಳನ್ನು ಕೈಗೊಳ್ಳಲಾಗುವುದು.
ಕುಂದಾಪುರ ಹೋಬಳಿಯಲ್ಲಿ ಜೂನ್ 23ರಂದು ಆನಗಳ್ಳಿ, ಜಪ್ತಿ, ಹೊಂಬಾಡಿ ಮಂಡಾಡಿ ಹಾಗೂ ಹೆಂಗವಳ್ಳಿ, 24 ರಂದು ಕೋಟೇಶ್ವರ, ಬಸ್ರೂರು ಹಾಗೂ ಯಡ್ಯಾಡಿ ಮತ್ಯಾಡಿ, 25ರಂದು ಬೇಳೂರು, 26ರಂದು ಅಮಾಸೆಬೈಲ್ ಹಾಗೂ ರಟ್ಟಾಡಿ, 28 ರಂದು ಹಂಗಳೂರು ಮತ್ತು 30ರಂದು ಕಂದಾವರ.
ಬೈAದೂರು ಹೋಬಳಿಗೆ ಸಂಬಂಧಿಸಿದಂತೆ, ಜೂನ್ 23 ರಂದು ಕಾಲ್ತೋಡು, 26ರಂದು ತೆಗ್ಗರ್ಸೆ, ಪಡುವರಿ, ಯಡ್ತೆರೆ ಹಾಗೂ ಬಿಜೂರು, 27ರಂದು ಶಿರೂರು, ಬೈಂದೂರು ಹಾಗೂ ಕಿರಿಮಂಜೇಶ್ವರ ಮತ್ತು 30ರಂದು ಹಳ್ಳಿಹೊಳೆ.
ವಂಡ್ಸೆ ಹೋಬಳಿಯಲ್ಲಿ ಜೂ. 24ರಂದು ಕಾವ್ರಾಡಿ ಹಾಗೂ ಹಳ್ನಾಡು, 26ರಂದು ತಲ್ಲೂರು ಹಾಗೂ ಕರ್ಕುಂಜೆ, 27ರಂದು ಸಿದ್ದಾಪುರ ಹಾಗೂ ಶಂಕರ ನಾರಾಯಣ, 28ರಂದು ಹೆಮ್ಮಾಡಿ ಹಾಗೂ ಕಟ್ಬೇಳ್ತೂರು, 29ರಂದು ತ್ರಾಸಿ ಹಾಗೂ ಹೊಸಾಡು ಮತ್ತು 30ರಂದು ಉಳ್ಳೂರು 74 ಹಾಗೂ ಕುಳಂಜೆ ಗ್ರಾಮಗಳಲ್ಲಿ ಇ- ಕೆವೈಸಿ ಶಿಬಿರ ನಡೆಯಲಿದೆ ಎಂದು ಕುಂದಾಪುರ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.