ಇತ್ತೀಚಿನ ಸುದ್ದಿ
ಪ್ರಬಂಧ ಸ್ಪರ್ಧೆ: ಮಸ್ಕಿ ವಿದ್ಯಾನಿಕೇತನ ಪಿಯು ಕಾಲೇಜಿನ ವಿದ್ಯಾರ್ಥಿನಿ ಅಖಿಲಾ ಜಿಲ್ಲಾಮಟ್ಟಕ್ಕೆ ಆಯ್ಕೆ
02/09/2021, 08:09
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ
ಅಂತರಗಂಗೆ ರಾಯಚೂರು
info.reporterkarnataka@gmail.com
ಮಸ್ಕಿ ವಿದ್ಯಾನಿಕೇತನ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅಖಿಲಾ ತಾಲೂಕ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅಮರೇಶ ಮಿಟ್ಟಿಮನಿ ಅವರ ಪುತ್ರಿಯಾದ ಅಖಿಲಾ ಅವರಿಗೆ ಕಾಲೇಜು ಆಡಳಿತ ಮಂಡಳಿ, ಕಾಲೇಜಿನ ಪ್ರಿನ್ಸಿಪಾಲ್ ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.ಪ್ರಾಂಶುಪಾಲರಾದ ವಿನಯಕುಮಾರ ಹಿರೇಮಠ ಅವರು ಪ್ರತಿಯೊಬ್ಬ ವಿದ್ಯಾರ್ಥಿ ಒಳ್ಳೆ ಸಾಧನೆ ಮಾಡಿದಾಗ ಅವರ ಪ್ರತಿಭೆಯನ್ನು ಹೊರಬರಲು ಸಾಧ್ಯ. ಇದರಿಂದ ಕಾಲೇಜು ಹಾಗೂ ಹೆತ್ತವರಿಗೆ ಕೀರ್ತಿ ಬರುತ್ತದೆ ಎಂದು ಸಂತೋಷ ಪಡಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕ ಮಂಡಳಿ ಅಧ್ಯಕ್ಷ ಜಿ. ಬಿ. ಶೆಟ್ಟಿ ಅಭಿನಂದನೆ ತಿಳಿಸಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿ ಅವರ ಅಧ್ಯಯನದ ಬಗ್ಗೆ ಸಾಮಾಜಿಕ ಕ್ವಿಜ್ ಸಾಮಾನ್ಯ ಸಾಮಾನ್ಯ ಸಾಮಾನ್ಯ ಜ್ಞಾನದ ಕಡೆ ಗಮನಹರಿಸಬೇಕೆಂದು ಉಪನ್ಯಾಸಕ ರಾಮಣ್ಣ
ರಂಗಾಪುರ್ ಹೇಳಿದರು.