ಇತ್ತೀಚಿನ ಸುದ್ದಿ
ಪೂರ್ವ ಮುಂಗಾರಿಗೇ ಅನಾಹುತ: ಅಬ್ಬಕ್ಕನಗರಲ್ಲಿ ತುಂಬಿ ಹರಿಯುತ್ತಿದ್ದ ತೋಡಿಗೆ ಆಟೋ ಉರುಳಿ ಚಾಲಕ ಸಾವು
25/05/2024, 12:09
ಮಂಗಳೂರು(reporterkarnataka.com):
ಮುಂಗಾರು ಪೂರ್ವ ಮಳೆಗೆ ಕಡಲನಗರಿಯಲ್ಲಿ ಜೀವಹಾನಿ ಸಂಭವಿಸಿದೆ. ನಗರದ ಕೊಟ್ಟಾರಚೌಕಿ ಬಳಿ
ಮೊದಲ ಮಳೆಗೇ ನಗರದಲ್ಲಿ ಜೀವಹಾನಿ ಸಂಭವಿಸಿದ್ದು, ಆಟೋ ರಿಕ್ಷಾ ತೋಡಿಗೆ ಉರುಳಿ ಚಾಲಕ ಮೃತಪಟ್ಟ ಘಟನೆ ಕೊಟ್ಟಾರ ಅಬ್ಬಕ್ಕ ನಗರದಲ್ಲಿ ತುಂಬಿ ಹರಿಯುತ್ತಿದ್ದ ತೋಡಿಗೆ ಆಟೋರಿಕ್ಷಾವೊಂದು ಉರುಳಿ ಬಿದ್ದ ಪರಿಣಾಮ ಚಾಲಕ ಮೃತಪಟ್ಟಿದ್ದಾರೆ.
ಸಾವನ್ನಪ್ಪಿದವರನ್ನು ಸ್ಥಳೀಯ ನಿವಾಸಿ ಆಟೋಚಾಲಕ ದೀಪಕ್ (40) ಎಂದು ಗುರುತಿಸಲಾಗಿದೆ.
ಶುಕ್ರವಾರ ರಾತ್ರಿಸುರಿದ ಅಬ್ಬರದ ಮಳೆಗೆ ಕೊಟ್ಟಾರ ಅಬ್ಬಕ್ಕ ನಗರದಲ್ಲಿನ ತೋಡು ತುಂಬಿ ರಸ್ತೆಯ ಮೇಲೆ ಹರಿಯುತ್ತಿತ್ತು. ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ರಿಕ್ಷಾ ಉರುಳಿ ತೋಡಿಗೆ ಬಿದ್ದಿದೆ. ತೋಡು ಭರ್ತಿ ನೀರಿದ್ದ ಪರಿಣಾಮ ರಿಕ್ಷಾ ಚಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
*ಪಾಲಿಕೆ ನಿರ್ಲಕ್ಷ್ಯ*: ತೋಡಿಗೆ ಸರಿಯಾಗಿ ತಡೆಗೋಡೆ ನಿರ್ಮಿಸದ ಕಾರಣ ದುರಂತ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.