1:05 AM Monday8 - July 2024
ಬ್ರೇಕಿಂಗ್ ನ್ಯೂಸ್
ಪ್ರಧಾನಿ ಮೋದಿ ಮಾಸ್ಕೋ ಭೇಟಿ: ಭಾರತ- ರಷ್ಯಾ ಸಂಬಂಧ ಇನ್ನಷ್ಟು ಬಲಗೊಳಿಸಲು ಮಾತುಕತೆ ಜಿಲ್ಲಾಧಿಕಾರಿಗಳು ಮಹಾರಾಜರಲ್ಲ; ಅಧಿಕಾರಿಗಳ ಜತೆ ಸಮನ್ವಯತೆಯಿಂದ ಕೆಲಸ ಮಾಡಿ ಡೆಂಗ್ಯು ನಿಯಂತ್ರಿಸಿ: ಸಿಎಂ… ಜೀ ಕನ್ನಡದ ‘ಮಹಾನಟಿ’ ಗ್ರಾಂಡ್ ಫಿನಾಲೆಗೆ ಮೂಡುಬಿದ್ರೆಯ ಆರಾಧನಾ ಭಟ್: ಶಿಕ್ಷಣ ಕಾಶಿಯ… ಸ್ವಾಮೀಜಿಗಳು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವುದು ಸಲ್ಲದು; ಬದಲಿಗೆ ಧರ್ಮದಲ್ಲಿರುವ ತಾರತಮ್ಯ ನಿವಾರಿಸಲಿ: ಪದ್ಮರಾಜ್… ಮೈಸೂರು ಮೂಡಾ ಹಗರಣದಲ್ಲಿ ಮುಖ್ಯಮಂತ್ರಿ ನೇರ ಪಾತ್ರ: ಮಾಜಿ ಸಿಎಂ, ಸಂಸದ ಜಗದೀಶ… ಬೆಲೆಯೇರಿಕೆ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ: ಶಾಸಕ ಡಾ. ಭರತ್ ಶೆಟ್ಟಿ… ಕೋಟರಿಂದ ತೆರವಾದ ಸ್ಥಾನದ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ: ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್… ಪಾವೂರು ಉಳಿಯ ದ್ವೀಪದಲ್ಲಿ ಅಕ್ರಮ ಮರಳುಗಾರಿಕೆ ಶಾಶ್ವತ ತಡೆಗೆ, ದ್ವೀಪವಾಸಿಗಳ ರಕ್ಷಣೆಗೆ ಜಿಲ್ಲಾ… ಶ್ರಮ ಸಂಸ್ಕೃತಿ ಗೌರವಿಸುವ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆ: ಉತ್ತರ ಕರ್ನಾಟಕದಲ್ಲೆಡೆ ಭಾರೀ ಸಂಭ್ರಮ ಮಂಗಳೂರಿನ ವಿವಿಧಡೆ ಟ್ರಾಫಿಕ್ ಪೊಲೀಸರಿಂದ ಕರ್ಕಶ ಹಾರ್ನ್, ಎಲ್ಇಡಿ ಲೈಟ್ ತೆರವು ಕಾರ್ಯಾಚರಣೆ

ಇತ್ತೀಚಿನ ಸುದ್ದಿ

ಪೋಳ್ಯದಲ್ಲಿ ಜು.9ರವರೆಗೆ ಮನೆ ಶ್ವಾನಗಳಿಗೆ ಉಚಿತ ಸಂತಾನ ಹರಣ ಚಿಕಿತ್ಸೆ: ಬನ್ನಿ… ಅವಕಾಶ ಸದುಪಯೋಗ ಮಾಡಿಕೊಳ್ಳಿ

05/07/2024, 18:35

ಪುತ್ತೂರು(reporterkarnataka.com): ನಾಯಿಗಳ ಸಂಖ್ಯೆ ಹೆಚ್ಚಾಗಿ ರಸ್ತೆಗೆ ಬಂದು ವಾಹನಗಳಿಗೆ ಹಾಗೂ ಪಾದಾಚಾರಿ ಮಕ್ಕಳಿಗೆ ಸಮಸ್ಯೆ ಮಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ರೋಟರಿ ಕ್ಲಬ್ ಪುತ್ತೂರು ಯುವ, ವರ್ಲ್ಡ್ ವೈಡ್ ವೆಟರ್ನರಿ ಸರ್ವಿಸ್ ಹಾಗೂ ಮಲ್ಪೆ ಅದ್ವರಾಜ್ ಅನುಮಲ್ ಕೇರ್ ಟ್ರಸ್ಟ್ ವತಿಯಿಂದ ಮನೆ ನಾಯಿಗಳಿಗೆ ಉಚಿತವಾಗಿ ಸಂತಾನಹರಣ ಚಿಕಿತ್ಸೆ ಸೌಲಭ್ಯವನ್ನು ಪೋಳ್ಯದಲ್ಲಿ ಜು.4ರಿಂದ ಜು.9ರವರೆಗೆ ನಡೆಸಲಾಗುವುದು.
ಸಂತಾನ ಹರಣ ಮಾಡಿಸುವುದರಿಂದ ಮರಿಗಳನ್ನು ದಾರಿಯಲ್ಲಿ ತ್ಯಜಿಸುವುದು ಕಡಿಮೆಯಾಗುತ್ತದೆ. ರೇಬೀಸ್ ರೋಗ ಹರಡುವಿಕೆಯನ್ನು ಕುಂಠಿತಗೊಳಿಸಬಹುದಾಗಿದೆ. ದಾರಿ ನಾಯಿಗಳ ಸಂಖ್ಯೆ ಕಡಿಮೆಯಾಗಿ ಸುರಕ್ಷಿತವಾದ ಬಾಳ್ವೆ ಮಾಡಬಹುದೆಂಬ ಕಲ್ಪನೆಯಲ್ಲಿ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಸಂತಾನ ಹರಣ ಚಿಕಿತ್ಸೆ ಮಾಡಲಿಚ್ಚಿಸುವವರು ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷೆ ಅಶ್ವಿನಿ ಕೃಷ್ಣ ಮುಳಿಯ, ಮಲ್ಪೆ ಅದ್ವರಾಜ್ ಅನುಮಲ್ ಕೇರ್ ಟ್ರಸ್ಟ್ ಮುಖ್ಯಸ್ಥೆ ಮಮತಾ ರಾವ್ ೯೯೦೨೨೫೩೦೬೪ ಕರೆ ಮಾಡಿ ನೊಂದಾಯಿಸಿಕೊಳ್ಳಬಹುದಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು