8:09 PM Friday28 - February 2025
ಬ್ರೇಕಿಂಗ್ ನ್ಯೂಸ್
Political Dispute | ಗದಗ-ಬೆಟಗೇರಿ ನಗರಸಭೆಯಲ್ಲಿ ಕಾಂಗ್ರೆಸ್ ನಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ಮಾಜಿ… Agriculture | ರಾಜ್ಯದಲ್ಲಿ ಎಫ್ ಪಿಒಗಳಿಂದ 1073 ಕೋಟಿ ರೂ.ಗಳ ವಹಿವಾಟು: ಕೃಷಿ… ಕಪಿಲೆಯಲ್ಲಿ ಮುಳುಗಿದ ಇಬ್ಬರು ವ್ಯಕ್ತಿಗಳು: ಎಲ್ಲರಲ್ಲೂ ಭಯ, ಆತಂಕ; ದೌಡಾಯಿಸಿದ ಎನ್ ಡಿಆರ್… BSY B’day | ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಮತ್ತೆ ಬಿಜೆಪಿ ಅಧಿಕಾರ: ಮಾಜಿ… PU Exams | ಸಿಸಿ ಟಿವಿ ಕಣ್ಗಾವಲಿನಲ್ಲಿ ಪಿಯುಸಿ ಪರೀಕ್ಷೆ: ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ Travel Expo | ಕರ್ನಾಟಕವನ್ನು ಜಾಗತಿಕ ಪ್ರವಾಸೋದ್ಯಮ ತಾಣವನ್ನಾಗಿ ಬೆಳೆಸೋಣ: ಮುಖ್ಯಮಂತ್ರಿ ಸಿದ್ದರಾಮಯ್ಯ ದಕ್ಷಿಣ ಕಾಶಿ ನಂಜನಗೂಡು ಶ್ರೀಕಂಠೇಶ್ವರ ದೇಗುಲದಲ್ಲಿ ಮಹಾಶಿವರಾತ್ರಿ ಸಂಭ್ರಮ: ಕಪಿಲೆಯಲ್ಲಿ ಮಿಂದ ಭಕ್ತ… ವಿಧಾನ ಸೌಧ ಆವರಣದಲ್ಲಿ ಪುಸ್ತಕ ಮೇಳ: ಸಿದ್ಧತಾ ಕಾರ್ಯ ಪರಿಶೀಲಿಸಿದ ಸ್ಪೀಕರ್ ಖಾದರ್ Forest Fire | ಚಿಕ್ಕಮಗಳೂರು: ದೇವರು ಮನೆಗುಡ್ಡದಲ್ಲಿ ಕಾಡ್ಗಿಚ್ಚು; ಅರಣ್ಯ ಇಲಾಖೆ ಪರಿಶ್ರಮದಿಂದ… Pocso | ಬೆಂಗಳೂರು: ನಿರಂತರ ಅತ್ಯಾಚಾರಕ್ಕೊಳಗಾದ ಬಾಲಕಿಯ ಮೇಲೆ ಪೊಲೀಸ್ ಕಾನ್‌ಸ್ಟೇಬಲ್ ನಿಂದ…

ಇತ್ತೀಚಿನ ಸುದ್ದಿ

Political Dispute | ಗದಗ-ಬೆಟಗೇರಿ ನಗರಸಭೆಯಲ್ಲಿ ಕಾಂಗ್ರೆಸ್ ನಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

28/02/2025, 20:02

ಗದಗ(reporterkarnataka.com): ಗದಗ – ಬೆಟಗೇರಿ ನಗರಸಭೆಯಲ್ಲಿ ಕಾಂಗ್ರೆಸ್ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿ, ಹೈಕೋರ್ಟ್ ಆದೇಶ ಉಲ್ಲಂಘನೆ ಮಾಡಿ ನ್ಯಾಯಾಂಗ ನಿಂದನೆ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗದಗ ಬೆಟಗೇರಿ ನಗರಸಭೆಯಲ್ಲಿ ಬಿಜೆಪಿಯ ಮೂರು ಜನ ಸದಸ್ಯರನ್ನು ರಾತ್ರಿ 12 ಗಂಟೆಗೆ ಅಮಾನತು ಮಾಡಿ ಅವರನ್ನು ಮತ ಹಾಕದಂತೆ ನೋಡಿಕೊಂಡಿದ್ದಾರೆ. ಅಮಾನತುಗೊಂಡ ಸದಸ್ಯರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಕೊಟ್ಟು ಆದೇಶ ನೀಡಿದೆ. ಚುನಾವಣಾಧಿಕಾರಿ ಅದನ್ನು ಧಿಕ್ಕರಿಸಿ, ಎಲ್ಲ ಸಂಪರ್ಕ ಬಂದ್ ಮಾಡಿ, ಜಿಲ್ಲಾ ಉಸ್ತುವಾರಿ ಸಚಿವ ಎಚ್. ಕೆ. ಪಾಟೀಲ್ ಅವರ. ನಿರ್ದೇಶನದಂತೆ ಕೆಲಸ ಮಾಡಿದ್ದಾರೆ ಎಂದರು.
*ಜಯ ತಾತ್ಕಾಲಿಕ*
ಹೈಕೋರ್ಟ್ ಆದೇಶವನ್ನು ದಿಕ್ಕರಿಸಿ ಚುನಾವಣೆ ನಡೆಸಿರುವುದು ನ್ಯಾಯಾಂಗ ನಿಂದನೆಯಾಗುತ್ತದೆ. ಹೈಕೋರ್ಟ್ ಆದೇಶವನ್ನು ದಿಕ್ಕರಿಸುವ ಉದ್ದಟತನವನ್ನು ಅಸಿಸ್ಟೆಂಟ್ ಕಮಿಷನರ್ ಮಾಡಿದ್ದಾನೆ. ಅಧಿಕಾರಿ ಆಗಲು ಯೋಗ್ಯತೆ ಇಲ್ಲ ಇವರಿಗೆ, ಕಾನೂನು ಪರಿಪಾಲನೆ ಮಾಡುವ ಯೋಗ್ಯತೆ ಇಲ್ಲ. ಇವರು ನ್ಯಾಯಾಂಗ ನಿಂದನೆ ಮಾಡಿದ್ದು, ಅದರ ವಿರುದ್ದ ಕೋರ್ಟ್ ಗೆ ಹೋಗುತ್ತೇವೆ. ಮೂರು ಜನ ಅಮಾಯಕ ಸದಸ್ಯರ ಸದಸ್ಯತ್ವ ಅಮಾನತಿಗೆ ಹುನ್ನಾರ ಮಾಡಿರುವುದರ ವಿರುದ್ದವೂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತೇವೆ. ಇವತ್ತಿನ ಜಯ ತಾತ್ಕಾಲಿಕವಾಗಿದ್ದು, ಅಸಂವಿಧಾನಿಕವಾಗಿದೆ. ಕಾನೂನುಬಾಹಿರವಾಗಿದೆ. ಇದನ್ನು ಜನರೂ ಒಪ್ಪುವುದಿಲ್ಲ ನಾವೂ ಒಪ್ಪುವುದಿಲ್ಲ, ಯಾರೂ ಒಪ್ಪುವುದಿಲ್ಲ. ಈ ಚುನಾವಣೆಗೆ ಧಿಕ್ಕಾರ ಹಾಕಿ ನಾವು ಬಹಿಷ್ಕಾರ ಹಾಕಿದ್ದೇವೆ. ಮತ್ತೆ ಚುನಾವಣೆ ನಡೆಯಲಿದೆ ಎಂದು ಹೇಳಿದರು.
ಚುನಾವಣೆಯನ್ನು ಬುಧವಾರದವರೆಗೂ ಮುಂದೂಡಿ ಡಿಸಿಯವರಿಗೆ ಸಂಪರ್ಕಿಸುವಂತೆ ಎಜಿಯವರಿಗೆ ಸೂಚಿಸಿದ್ದಾರೆ. ಡಿಸಿಯವರಿಗೂ ಸಂಪರ್ಕಿಸುವುದು ಎಜಿಯವರ ಕೆಲಸ, ಆದರೆ, ಎಲ್ಲ ಸಂಪರ್ಕವನ್ನು ಬಂದ್ ಮಾಡಿಕೊಂಡು ಕುಂತಿದ್ದಾರೆ. ನಮಗೂ ಯಾರನ್ನೂ ಸಂಪರ್ಕ ಮಾಡಲು ಅವಕಾಶ ನೀಡಿಲ್ಲ. ಸರ್ಕಾರ ಚುನಾವಣೆ ವ್ಯವಸ್ಥೆಯನ್ನು ದುರುಯೋಗ ಮಾಡಿಕೊಂಡು ಕೃತಕ ಬಹುಮತ ಪಡೆದುಕೊಂಡು ಚುನಾವಣೆ ನಡೆಸಿದ್ದಾರೆ. ಅಂತಿಮವಾಗಿ ಜಯ ನಮಗೇ ಸಿಗುತ್ತದೆ ಎನ್ನುವ ವಿಶ್ವಾಸ ಇದೆ ಎಂದು ಭರವಸೆ ವ್ಯಕ್ತಪಡಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು