ಇತ್ತೀಚಿನ ಸುದ್ದಿ
ಪೊಲೀಸ್ ಅಧಿಕಾರಿಗಳಿಗೆ ಡಿಸಿಎಂ ಖಡಕ್ ವಾರ್ನಿಂಗ್: ಇಲಾಖೆಯನ್ನು ಕೇಸರೀಕರಣ ಮಾಡಲು ಬಿಡೋಲ್ಲ ಎಂದು ಡಿ.ಕೆ. ಶಿವಕುಮಾರ್
23/05/2023, 21:03

ಬೆಂಗಳೂರು(reporterkarnataka.com): ಏನು ಪೊಲೀಸ್ ಇಲಾಖೆಯನ್ನು ಕೇಸರೀಕರಣ ಮಾಡಲು ಹೊರಟ್ಟಿದ್ದೀರಾ? ಸಿದ್ದರಾಮಯ್ಯ ಹಾಗೂ ನನ್ನ ಜತೆ ನೀವು ಹೇಗೆ ನಡೆದುಕೊಂಡಿದ್ದೀರಿ ಎನ್ನುವುದು ಗೊತ್ತು. ಇಲಾಖೆಯನ್ನು ಕೇಸರೀಕರಣ ಮಾಡಲು ಬಿಡೋದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ವಾರ್ನಿಂಗ್ ನೀಡಿದರು.
ವಿಧಾನಸೌಧದಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಜತೆಗಿನ ಸಭೆಯಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ಥಿತರಿದ್ದರು.
ಸಭೆಯುದ್ದಕ್ಕೂ ಡಿ.ಕೆ. ಶಿವಕುಮಾರ್ ಅವರು ಪೊಲೀಸ್ ಅಧಿಕಾರಿಗಳ ಮೇಲೆ ಗರಂ ಆಗಿಯೇ ಇದ್ದರು. ಬಿಜೆಪಿ ಆಡಳಿತ ಕಾಲದಲ್ಲಿ ಪೊಲೀಸ್ ಇಲಾಖೆಯನ್ನು ಕೇಸರೀಕರಣ ಮಾಡಲು ಹೊರಟ್ಟಿದ್ದೀರಿ. ಇದೆಲ್ಲ ನಮ್ಮ ಆಡಳಿತದಲ್ಲಿ ನಡೆಯೋದಿಲ್ಲ ಎಂದು ಎಚ್ಚರಿಕೆ ನೀಡಿದೆ.
ಪಿಎಸ್ ಐ ಹಗರಣದಲ್ಲಿ ಪೊಲೀಸ್ ಇಲಾಖೆ ಶಾಮಿಲಾದ ಬಗ್ಗೆ ಮಾತನಾಡಿದ ಡಿಸಿಎಂ, ಒಬ್ಬರು ಎಡಿಜಿಪಿ ಪೇಪರ್ ತಿದ್ದುವ ಕೆಲಸ ಮಾಡಿದ್ದಾರೆ. ನೀವು ನಮಗೆ ಹಣ ಮಾಡಿ ಕೊಡುವುದು ಬೇಡ. ಜನರಿಗೆ ಸರಿಯಾದ ಸೇವೆ ನೀಡಿ ಎಂದು ಹೇಳಿದರು.