3:39 PM Monday28 - July 2025
ಬ್ರೇಕಿಂಗ್ ನ್ಯೂಸ್
ಮಡಿಕೇರಿ -ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಡರಾತ್ರಿ ಒಂಟಿ ಸಲಗ ಪ್ರತ್ಯಕ್ಷ: ಪ್ರಯಾಣಿಕರಲ್ಲಿ ಭೀತಿ ಗದಗ -ಬಂಕಾಪುರ ರಾಷ್ಟ್ರೀಯ ಹೆದ್ದಾರಿಗೆ ಗಡ್ಕರಿ ಭರವಸೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ Koppa | ಬೃಹತ್ ಮರ ರಸ್ತೆಗೆ ಪತನ: ಜಯಪುರ- ಬಸರೀಕಟ್ಟೆ,- ಕಳಸ- ಹೊರನಾಡು… ಕೊಡಗಿನಲ್ಲಿ ಭಾರೀ ಮಳೆ: ತುಂಬಿ ತುಳುಕುತ್ತಿರುವ ಕಾವೇರಿ, ಕನ್ನಿಕೆ, ಸುಜ್ಜ್ಯತಿ ನದಿಗಳು; ತ್ರಿವೇಣಿ… ಕೊಡಗು: ಮಳೆ ಹಾನಿ ಪ್ರದೇಶಗಳಿಗೆ ಕಂದಾಯ ಸಚಿವ ಕೃಷ್ಣಬೈರೇ ಗೌಡ ಭೇಟಿ; ಪರಿಹಾರ… BJP Leader | ಚುನಾವಣಾ ಉದ್ದೇಶದಿಂದ ಬೆಂಗಳೂರು ಒಡೆದ ಕಾಂಗ್ರೆಸ್‌: ಪ್ರತಿಪಕ್ಷ ನಾಯಕ… ಗ್ಯಾರಂಟಿಗಳ ಕಾರಣದಿಂದ ಕರ್ನಾಟಕ ತಲಾ ಆದಾಯದಲ್ಲಿ ದೇಶದಲ್ಲೇ ನಂಬರ್ ಒನ್ : ಸಿಎಂ… Mangaluru | ಸಂಸದ ತೇಜಸ್ವೀ ಸೂರ್ಯ ರಿಂದ ಲಾಲ್‌ಬಾಗ್‌ನಲ್ಲಿ ವೀಲ್‌ಚೇರ್ ಸ್ನೇಹಿ ಶೌಚಾಲಯ… Chikkamagaluru | ಕಳಸ: ಭದ್ರಾ ನದಿಯಲ್ಲಿ ಸತತ 23 ತಾಸುಗಳ ಶೋಧ ಬಳಿಕ… ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಕಡತ ಕಳವು ಪ್ರಕರಣ: ಗುತ್ತಿಗೆ ಸಿಬ್ಬಂದಿ ಕೈಚಳಕ ಸಿಸಿಟಿವಿ…

ಇತ್ತೀಚಿನ ಸುದ್ದಿ

ಪಿಎಂ ವಿಶ್ವಕರ್ಮ ಯೋಜನೆ ಕೋಟ್ಯಂತರ ವಿಶ್ವಕರ್ಮರ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರಲಿದೆ: ಶಾಸಕ ಕಾಮತ್

14/09/2023, 20:15

ಮಂಗಳೂರು(reporterkarnataka.com): ಈ ಬಾರಿಯ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಕರಕುಶಲ ಮತ್ತು ಕುಶಲಕರ್ಮಿಗಳಿಗೆ ವರದಾನವಾಗುವ ನಿಟ್ಟಿನಲ್ಲಿ ಘೋಷಿಸಿದ “ಪಿಎಂ ವಿಶ್ವಕರ್ಮ” ಯೋಜನೆಯು ಇದೇ ಸೆಪ್ಟೆಂಬರ್ 17ರ ವಿಶ್ವಕರ್ಮ ಜಯಂತಿಯಂದು ಜಾರಿಗೊಳ್ಳುತ್ತಿರುವುದು ವಿಶ್ವಕರ್ಮ ಸಮುದಾಯದ ಬೆಳವಣಿಗೆಗೆ ಅತ್ಯಂತ ಮಹತ್ವದ್ದಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.
ಮುಂದಿನ 5 ವರ್ಷಗಳ ಅವಧಿಗೆ (2023 ರಿಂದ 2028) ಅನ್ವಯವಾಗುವಂತೆ 13,000 ಕೋಟಿ ರೂಪಾಯಿ ಹಣಕಾಸು ವೆಚ್ಚದಲ್ಲಿ ಜಾರಿಯಾಗಲಿರುವ ಈ ಯೋಜನೆಯು ದೇಶ ಸ್ವಾತಂತ್ರ್ಯ ಪಡೆದ ನಂತರ ಕರಕುಶಲ ಮತ್ತು ಕುಶಲಕರ್ಮಿಗಳಿಗೆ ಘೋಷಿಸಿದ ಅತಿ ದೊಡ್ಡ ಯೋಜನೆಯಾಗಿದೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾಲದಲ್ಲಿ ವಿಶ್ವಕರ್ಮ ಸಮುದಾಯದ ಮೂಲ ಕಸುಬುಗಳ ಪುನರುತ್ಥಾನಕ್ಕೆ ಮೈಲಿಗಲ್ಲಾಗಲಿರುವ ಯೋಜನೆಯನ್ನು ಕೇಂದ್ರಸರ್ಕಾರ ಜಾರಿಗೊಳಿಸುತ್ತಿರುವುದು ಶ್ಲಾಘನೀಯ. ಆಧುನಿಕ ಜಗತ್ತಿನಲ್ಲಿ ಸಾಂಪ್ರದಾಯಿಕ ವೃತ್ತಿಗಳು ಆತಂಕಕ್ಕೆ ಸಿಲುಕಿದ್ದು, ಈ ಯೋಜನೆಯಿಂದ ಮತ್ತೆ ಕುಲಕಸುಬುಗಳು ಗತವೈಭವಕ್ಕೆ ಮರಳಲು ಈ ಯೋಜನೆಯು ಸಹಕಾರಿಯಾಗಲಿದೆ.
ನಗರ ಮತ್ತು ಗ್ರಾಮೀಣ ಪ್ರದೇಶಗಳ 18 ಸಾಂಪ್ರದಾಯಿಕ ಕುಲಕಸುಬುಗಳು ಒಳಗೊಳ್ಳುವ ಈ ಯೋಜನೆಯಡಿಯಲ್ಲಿ ಉಪಕರಣ ಸಾಧನಗಳ ಕಿಟ್ ಪಡೆಯಲು ರೂ. 15,000/- ಸಹಾಯಧನ, ಕೌಶಲ್ಯವರ್ಧನೆ ತರಬೇತಿ ಪಡೆಯುವವರಿಗೆ ಪ್ರತಿನಿತ್ಯ 500/- ರೂ ಶಿಷ್ಯವೇತನ ಹಾಗೂ ಐದು ವರ್ಷಗಳ ಅವಧಿಯಲ್ಲಿ ಒಟ್ಟು 30 ಲಕ್ಷ ಕುಟುಂಬಗಳಿಗೆ ತರಬೇತಿ ನೀಡುವ ಯೋಜನೆ ಹೊಂದಿದ್ದು ಪಿಎಂ ವಿಶ್ವಕರ್ಮ ಪ್ರಮಾಣ ಪತ್ರ ಮತ್ತು ಗುರುತಿನ ಚೀಟಿ ನೀಡಲಾಗುತ್ತದೆ.
ವಿವಿಧ ಹಂತಗಳಲ್ಲಿ ಕೇವಲ ಶೇ. 5ರಷ್ಟು ಬಡ್ಡಿ ದರದಲ್ಲಿ ಸಬ್ಸಿಡಿ ಸಹಿತ ರೂ. 1ಲಕ್ಷ ಹಾಗೂ ರೂ.2 ಲಕ್ಷದವರೆಗೂ ಸಾಲ ಸೌಲಭ್ಯ ನೀಡುವುದರ ಜೊತೆಗೆ ಡಿಜಿಟಲ್ ವಹಿವಾಟಿಗೆ ಉತ್ತೇಜನ ಮತ್ತು ಮಾರುಕಟ್ಟೆ ಬೆಂಬಲದಂತಹ ಹೆಚ್ಚುವರಿ ಸಹಾಯವನ್ನು ಸಹ ನೀಡಲಾಗುತ್ತದೆ.
ವಿಶ್ವ ಕರ್ಮ ಸಮುದಾಯದ ಔದ್ಯೋಗಿಕ ಮತ್ತು ಆರ್ಥಿಕ ಬೆಳವಣಿಗೆಗೆ ಪೂರಕವಾಗಲಿರುವ ಈ ಯೋಜನೆಯು ಬಯೋಮೆಟ್ರಿಕ್ ಮೂಲಕ ನೋಂದಾಯಿಸಲಾಗುವುದರಿಂದ ಅರ್ಹ ಫಲಾನುಭವಿಗಳು CSC ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು