2:57 PM Wednesday23 - October 2024
ಬ್ರೇಕಿಂಗ್ ನ್ಯೂಸ್
ಮೂಡಿಗೆರೆ ರೈತ ಭವನದಲ್ಲಿ ಅ.25ರಂದು ವೈವಿಧ್ಯಮಯ ‘ಮಲೆನಾಡು ಹಬ್ಬ’ ಸುರತ್ಕಲ್ ಎನ್ ಐಟಿಕೆ: ಯುವ ಸ್ಕೌಟ್ಸ್ ಮತ್ತು ಗೈಡ್ಸ್ ಸಂಪರ್ಕಿಸುವ ‘ಜಂಬೋರಿ ಆನ್… ರೈಲ್ವೆ ಹಳಿ ಮೇಲೆ ಕಲ್ಲು ಇಟ್ಟ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ: ಸಂಸದ ಕ್ಯಾ.… ಕ್ರೂರ ವಿಧಿಯಾಟ: ಮದುವೆ ನಿಶ್ಚಿತಾರ್ಥವಾದ ಯುವತಿ ರಸ್ತೆ ಅಪಘಾತಕ್ಕೆ ಬಲಿ; ಮುಂದಿನ ತಿಂಗಳು… ಚಿಕ್ಕಮಗಳೂರು: ಭಾರೀ ಮಳೆ; ಜನಜೀವನ ಅಸ್ತವ್ಯಸ್ತ; ಸಿಡಿಲಿಗೆ ಎತ್ತು ಬಲಿ ವಿಜ್ಞಾನ ಮೇಳ: ಸೆನ್ಸಾರ್ ಆಧಾರಿತ ಮಾದರಿಯಲ್ಲಿ ಸೇವಾ ಭಾರತಿ ವಿದ್ಯಾರ್ಥಿ ನಹುಷ್ ಪ್ರಥಮ ಏಷ್ಯಾದ ಗೇಮಿಂಗ್ ಮತ್ತು ಅನಿಮೇಷನ್ ರಾಜಧಾನಿಯಾಗುವುದು ಕರ್ನಾಟಕದ ಗುರಿ: ಐಜಿಸಿ 2024ರಲ್ಲಿ ಸಚಿವ… ಬಿಳಾಲುಕೊಪ್ಪ-ಬಸರೀಕಟ್ಟೆ ರಸ್ತೆ ಕೆಸರುಮಯ: ಬಸ್ ಸಂಚಾರ ಸ್ಥಗಿತ, ಪ್ರಯಾಣಿಕರ ಪರದಾಟ ಅ.19-21: ಎಸಿಪಿಐ ಮತ್ತು ಮಂಗಳೂರು ವಿವಿ ಕ್ರೈಸ್ತ ವಿದ್ಯಾಪೀಠದಿಂದ 47ನೇ ವಾರ್ಷಿಕ ಸಂಶೋಧನಾ… ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ: ಪ್ರಬಲ ಹೋರಾಟಕ್ಕೆ ಸಜ್ಜು

ಇತ್ತೀಚಿನ ಸುದ್ದಿ

ಪಿಲಿಕುಳ ಜೈವಿಕ ಉದ್ಯಾನವನದ ‘ರಾಜು’ ಇನ್ನಿಲ್ಲ: ಪ್ರವಾಸಿಗರ ಅಚ್ಚುಮೆಚ್ಚಿನ ಹನುಮಾನ್ ಲಂಗೂರ್ ಇದು!!

06/10/2021, 00:02

ಮಂಗಳೂರು(reporterkarnataka.com): ಪಿಲಿಕುಳ ಜೈವಿಕ ಉದ್ಯಾನವನದ 21 ವರ್ಷ ಪ್ರಾಯದ ಹನುಮಾನ್ ಲಂಗೂರ್ “ರಾಜು”  ಇಂದು ಮೃತಪಟ್ಟಿದೆ.

ಉಡುಪಿ ಸಮೀಪದ ಪಡುಬಿದ್ರೆಯ ಬಾರ್ ಒಂದರಿಂದ ರಕ್ಷಿಸಿ ರಾಜುವನ್ನು ಪಿಲಿಕುಳ ಮೃಗಾಲಯದ ಪ್ರಾರಂಭ  ದಿನಗಳಲ್ಲಿ ಅಲ್ಲಿಗೆ ನೀಡಲಾಗಿತ್ತು. ಬಾರ್ ಮಾಲೀಕ ಮತ್ತು ಗಿರಾಕಿಗಳಿಗೆ ಅತ್ಯಂತ ಪ್ರೀತಿ ಪಾತ್ರವಾಗಿದ್ದ “ರಾಜು” ಮದ್ಯಪಾನದ ಚಟ ಅಂಟಿಸಿಕೊಂಡು ಅನಾರೋಗ್ಯಕ್ಕೆ ಈಡಾಗಿತ್ತು. ಆದರೆ ಪಿಲಿಕುಳ ಮೃಗಾಲಯದಲ್ಲಿ ನಿಧಾನವಾಗಿ ಅಮಲು ಸೇವನೆಯ ಅಭ್ಯಾಸವನ್ನು ಬಿಡಿಸಿ ವಿವಿಧ ಜಾತಿಯ ಹಣ್ಣು ಹಂಪಲುಗಳನ್ನು ಸೇವಿಸುವುದನ್ನು ರೂಢಿ ಮಾಡಲಾಯಿತು. ಹಾಗೆ ಮೃಗಾಲಯದ ಸಂದರ್ಶಕರಿಗೆ ಬಹಳ ಆಕರ್ಷಕವಾಗಿ ಪ್ರೀತಿಪಾತ್ರವಾಗಿತ್ತು.

ಲಂಗೂರ್  ನೇಪಾಳ, ಶ್ರೀಲಂಕಾ. ಭಾರತದ ಕೆಲವು ಭಾಗಗಳಲ್ಲಿ ಕಾಣ ಸಿಗುತ್ತವೆ. ಈ ಕೋತಿಗಳ ಗಮನಾರ್ಹ ಲಕ್ಷಣವೆಂದರೆ ಮೂರು ಕೋಣೆಗಳ ಹೊಟ್ಟೆ ಹೊಂದಿರುವ ಪ್ರಾಣಿ. ಕೋತಿಯ ಮುಖವು ದುಂಡಾಗಿರುತ್ತದೆ, ಮುಂಭಾಗವು ಚಿಕ್ಕದಾಗಿದೆ, ಮೂಗು ಮುಖವನ್ನು ಮೀರಿ ಚಾಚಿಕೊಂಡಿಲ್ಲ. ಲಂಗೂರ್‌ನ ಬಾಲ ಮತ್ತು ಕೈಕಾಲುಗಳು ತೆಳ್ಳಗಿರುತ್ತವೆ, ಆದಾಗ್ಯೂ, ಅವು ಶಕ್ತಿ ಮತ್ತು ಸ್ಥಿರತೆಯಲ್ಲಿ ಭಿನ್ನವಾಗಿರುತ್ತವೆ. ಸಾಕಷ್ಟು ಉದ್ದವಾದ ಪಂಜಗಳ ಜೊತೆಗೆ, ಉದ್ದವಾದ ಬೆರಳುಗಳನ್ನು ಕಂಡುಹಿಡಿಯಬಹುದು, ಅವುಗಳಲ್ಲಿ ಮಾತ್ರ ಮೊದಲನೆಯದು ಇತರರಿಗಿಂತ ಕಡಿಮೆ. 

ಪಿಲಿಕುಳ ದಲ್ಲಿ ಲಂಗೂರ್ಗಳು ಎಷ್ಟಿವೆ?: ಈಗ ಪ್ರಸ್ತುತ ಪಿಲಿಕುಳ ಮೃಗಾಲಯದಲ್ಲಿ ನಾಲ್ಕು ಹನುಮಾನ್ ಲಂಗೂರ್ ಗಳಿದ್ದು ಅವುಗಳಿಗಾಗಿ ವಿಶಾಲವಾದ ತೆರೆದ ಮರಮಟ್ಟುಗಳಿಂದ ಕೂಡಿದ ಆವರಣವನ್ನು ನಿರ್ಮಿಸಲಾಗಿದೆ.  ಹನುಮಾನ್ ಲಂಗೂರ್ ಗಳ ಸಾಮಾನ್ಯ ಆಯಸ್ಸು 18-20 ವರ್ಷದವರೆಗೆ ಬದುಕುತ್ತವೆ ಎನ್ನುತ್ತಾರೆ. ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಎಚ್. ಜೆ. ಭಂಡಾರಿ

ಇತ್ತೀಚಿನ ಸುದ್ದಿ

ಜಾಹೀರಾತು