ಇತ್ತೀಚಿನ ಸುದ್ದಿ
ಪೆಟ್ರೋಲ್ ಟ್ಯಾಂಕರ್ – ಬಸ್ – ಬೈಕ್ ಮಧ್ಯೆ ಭೀಕರ ಅಪಘಾತ; 21 ಮಂದಿ ಸಾವು, 38 ಮಂದಿ ಗಾಯ
17/03/2024, 21:57

ಕಾಬೂಲ್(reporterkarnataka.com): ಪೆಟ್ರೋಲ್ ಟ್ಯಾಂಕರ್, ಬಸ್ ಮತ್ತು ಬೈಕ್ ಮಧ್ಯೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ರಸ್ತೆ ಅಪಘಾತದಲ್ಲಿ 21 ಮಂದಿ ಸಾವನ್ನಪ್ಪಿ, 38 ಮಂದಿ ಗಾಯಗೊಂಡ ಘಟನೆ ಅಫ್ಘಾನಿಸ್ತಾನದಲ್ಲಿ ನಡೆದಿದೆ.
ಗಾಯಾಳುಗಳನ್ನು ತಕ್ಷಣವೇ ಗ್ರಿಷ್ಕ್ ಜಿಲ್ಲೆಯ ಹೆಲ್ಮಂಡ್, ಲಷ್ಕರ್ಗಾ ನಗರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಹೆಲ್ಮಂಡ್ನ ಗ್ರಿಷ್ಕ್ ಜಿಲ್ಲೆಯಲ್ಲಿರುವ ರಾಜಧಾನಿ ಕಾಬೂಲ್ ಮತ್ತು ಉತ್ತರದ ಹೆರಾತ್ ನಗರದ ನಡುವಿನ ಮುಖ್ಯ ಹೆದ್ದಾರಿಯಲ್ಲಿ ಭಾನುವಾರ ಈ ಘೋರ ಅಪಘಾತ ಸಂಭವಿಸಿದೆ. ಗಾಯಗೊಂಡವರಲ್ಲಿ 11 ಜನರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.