ಇತ್ತೀಚಿನ ಸುದ್ದಿ
ಪಟ್ಟಾಧಿಕಾರ ಸಮಾರಂಭ: ಸುಕ್ಷೇತ್ರ ಶೇಗುಣಸಿಯಲ್ಲಿ ಅಭಿನಂದನೆ ಸಮಾರಂಭ
26/06/2022, 22:25

ಬೆಳಗಾವಿ(reporterkarnataka.com):
ಅಥಣಿ ತಾಲೂಕಿನ ಸುಕ್ಷೇತ್ರ ಶೇಗುಣಸಿ ಶ್ರೀ ಮುರುಘೇಂದ್ರ ಶ್ರೀಗಳ ಮಠದಲ್ಲಿ ಶ್ರೀ ಮಹಾಂತ ಶ್ರೀಗಳ ಪಟ್ಟಾಧಿಕಾರ ಸಮಾರಂಭದ ಹಿನ್ನೆಲೆಯಲ್ಲಿ ಶ್ರೀ ಶಂಕರ ಮಹಾಸ್ವಾಮೀಜಿಗೆ ಮಠದಲ್ಲಿ ಅಭಿನಂದನೆ ಸಮಾರಂಭ ನಡೆಯಿತು.
ಮಾಜಿ ಉಪ ಮುಖ್ಯಮಂತ್ರಿ, ವಿಧಾನ ಪರಿಷತ್ ಲಕ್ಷ್ಮಣ ಸವದಿ ಪಾಲ್ಗೊಂಡಿದ್ದರು. ನಂತರ ಮಾತನಾಡಿದ ಅವರು, ಪಟ್ಟಾಧಿಕಾರ ಕಾರ್ಯಕ್ರಮ ಯಶಸ್ಸಿಗೆ ಸಹಕಾರ, ನೆರವು ನೀಡಿದ ಗ್ರಾಮಸ್ಥರು, ಭಕ್ತರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಮೇತನಟ್ಟಿಯ ಶ್ರೀ ಗುರುದೇವ ಸ್ವಾಮೀಜಿ, ಗ್ರಾಮದ ಮುಖಂಡರಾದ ಶ್ರೀಶೈಲ ನಾರಗೊಂಡ, ತಮ್ಮಣ್ಣೆಪ್ಪ ತೇಲಿ, ಶಿವರಾಯ ಯಲಡಗಿ, ಬಸಪ್ಪ ಹೊರಟ್ಟಿ, ಮಲ್ಲಪ್ಪ ಶಾನವಾಡ, ಅಶೋಕ ಅಮ್ಮಣಗಿ, ಕುಮಾರ ಸತ್ತಿಗೌಡರ,ವಿವೇಕ ನಾರಗೊಂಡ, ಶ್ರೀಶೈಲ ಮಠಪತಿ ಸೇರಿದಂತೆ ಹಲವು ಗಣ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.