ಇತ್ತೀಚಿನ ಸುದ್ದಿ
ಪತ್ರಕರ್ತೆ ವೀಣಾ ಜಾರ್ಜ್ ಈಗ ಕೇರಳದ ನೂತನ ಆರೋಗ್ಯ ಸಚಿವೆ: ಆರಣ್ಮುಲ ಜನತೆ ಫುಲ್ ಖುಷಿ
20/05/2021, 13:21
ತಿರುವನಂತಪುರ(reporterkarnataka news);
ಕೇರಳದ ನೂತನ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಪಿಣರಾಯಿ ವಿಜಯನ್ ಸಚಿವ ಸಂಪುಟ ಸೇರಿದ್ದಾರೆ. ವೀಣಾ ಜಾರ್ಜ್ ಅವರ ವಿಶೇಷವೇನೆಂದರೆ ಈಕೆ ಪತ್ರಕರ್ತೆ.
ಸುಮಾರು 16 ವರ್ಷಗಳ ಕಾಲ ಪತ್ರಕರ್ತೆಯಾಗಿ ದುಡಿದ ವೀಣಾ ಅವರು ಕೇರಳದ ಪಿಣರಾಯಿ ನೇತೃತ್ವದ ಸಿಪಿಎಂ ಸೇರಿಕೊಂಡಿದ್ದರು. ಕೇರಳದಲ್ಲಿ ಮೊದಲ ಬಾರಿಗೆ ಸುದ್ದಿ ಸಂಸ್ಥೆಯೊಂದರ ಮಹಿಳಾ ಎಡಿಟರ್ ಇನ್ ಚೀಫ್ ಕೂಡ ಆಗಿದ್ದರು. ಅವರು
ಪತ್ತನಂತಿಟ್ಟದ ಆರಣ್ಮುಲ ಕ್ಷೇತ್ರದಿಂದ ಜಯಗಳಿಸಿದ್ದರು.
ವೀಣಾ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡ ಬಗ್ಗೆ ಆರಣ್ಮುಲ ಕ್ಷೇತ್ರದ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ.